ಗೆಹ್ಲೋಟ್‌ ಬಳಿಕ ಸೋನಿಯಾ ಭೇಟಿ ಮಾಡಿದ ಸಚಿನ್‌ ಪೈಲಟ್‌: ಕಾಂಗ್ರೆಸ್‌ ತೊರೆಯಲ್ಲ ಎಂದು ಭರವಸೆ

ನವದೆಹಲಿ: ರಾಜಸ್ಥಾನದ ಬಿಕ್ಕಟ್ಟಿನ ಕೆಲವು ದಿನಗಳ ನಂತರ, ಅಶೋಕ್ ಗೆಹ್ಲೋಟ್ ಗುಂಪಿನ ನಿಷ್ಠಾವಂತ 80 ಶಾಸಕರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ ೆರಡು ದಿನಗಳ ನಂತರ ಮುಖ್ಯಮಂತ್ರಿ ಗೆಹ್ಲೋಟ್ ಹಾಗೂ ಅವರ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಇಬ್ಬರೂ ನಾಯಕರು ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಗುರುವಾರ ನವದೆಹಲಿಯ ಜನಪಥ್ ನಿವಾಸದಲ್ಲಿ ಭೇಟಿಯಾದರು.
ಆದರೆ ರಾಜ್ಯದಲ್ಲಿ ಚುಕ್ಕಾಣಿ ಹಿಡಿದ ಗೆಹ್ಲೋಟ್ ಅವರ ಮುಂದುವರಿಕೆ ಕುರಿತು ಪಕ್ಷವು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧರಿಸಲಿದೆ ಎಂದು ಹೇಳುವುದರೊಂದಿಗೆ ಕುತೂಹಲ ಮುಂದುವರಿದಿದೆ.
ಬಿಕ್ಕಟ್ಟಿನ ಬಗ್ಗೆ ಇಲ್ಲಿಯವರೆಗೆ ಮೌನವಾಗಿರುವ ಸಚಿನ್ ಪೈಲಟ್, ರಾಜಸ್ಥಾನದ ವೈಫಲ್ಯದ ಬಗ್ಗೆ ಸೋನಿಯಾ ಗಾಂಧಿಯೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು ಹಾಗೂ ಕಾಂಗ್ರೆಸ್ ಕಡೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ನಾನು ಪಕ್ಷವನ್ನು ತ್ಯಜಿಸುವುದಿಲ್ಲ ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಶ್ರಮಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿಯವರು ನಮ್ಮ ಅಭಿಪ್ರಾಯಗಳನ್ನು ತಾಳ್ಮೆಯಿಂದ ಆಲಿಸಿದರು. ನಾವು ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ್ದೇವೆ. ನಾನು ಅವರಿಗೆ ನನ್ನ ಭಾವನೆಗಳನ್ನು ಮತ್ತು ಪ್ರತಿಕ್ರಿಯೆಯನ್ನು ಪ್ರಾಮಾಣಿಕವಾಗಿ ಚಿತ್ರಿಸಿದ್ದೇನೆ. ರಾಜಸ್ಥಾನದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ನಾವು ಒಟ್ಟಾಗಿ ಶ್ರಮಿಸಬೇಕು. ರಾಜಸ್ಥಾನದ ಬಗ್ಗೆ ಮತ್ತು ಅದರ ರಾಜಕೀಯದ ಬಗ್ಗೆ ಎಲ್ಲಾ ನಿರ್ಧಾರಗಳನ್ನು ಸೋನಿಯಾ ಗಾಂಧಿ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಮೂಲಗಳ ಪ್ರಕಾರ, ಸಚಿನ್ ಪೈಲಟ್‌ಗೆ ನಿರ್ದಿಷ್ಟ ಭರವಸೆ ನೀಡಲಾಗಿದೆ. ವಿಷಯಗಳು ತಕ್ಷಣವೇ ಬದಲಾಗದಿರಬಹುದು ಆದರೆ ರಾಜಸ್ಥಾನದಲ್ಲಿ ಚುನಾವಣೆಗೆ ಮುಂಚೆಯೇ ಅವು ಬದಲಾಗುತ್ತವೆ. ಸಚಿನ್ ಪೈಲಟ್ ಅವರು ಚರ್ಚಿಸಿದ ವಿಷಯದಿಂದ ಸಂತಸಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ಗೆಹ್ಲೋಟ್  ಕ್ಷಮೆಯಾಚನೆ
ಸಚಿನ್‌ ಪೈಲಟ್‌ ಭೇಟಿಗೂ ಮೊದಲು ರಾಜಸ್ಥಾನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಶೋಕ್ ಗೆಹ್ಲೋಟ್ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್‌ ರಾಜಸ್ತಾನದ ಬೆಳವಣಿಗೆ ಬಗ್ಗೆ ಕ್ಷಮೆಯಾಚಿಸಿದರು. ನಂತರ ಪಕ್ಷದ ಅಧ್ಯಕ್ಷ ರೇಸ್‌ನಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದರು. ಇದಾದ ಕೆಲ ಗಂಟೆಗಳ ನಂತರ ಪೈಲಟ್‌ ಅವರು ಸೋನಿಯಾ ಅವರನ್ನು ಭೇಟಿಯಾದರು.
“ಎರಡು ದಿನಗಳ ಹಿಂದೆ ನಡೆದಿದ್ದೇ ನಮಗೆ ಆಘಾತವನ್ನುಂಟು ಮಾಡಿದೆ. ನಾನು ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂದು ಬಯಸಿಯೇ ಇದೆಲ್ಲ ನಡೆದಿದೆ ಎಂಬ ಸಂದೇಶವನ್ನು ನೀಡಿದೆ. ನಾನು ಸೋನಿಯಾ ಅವರ ಕ್ಷಮೆಯಾಚಿಸಿದ್ದೇನೆ ಎಂದು ಗೆಹ್ಲೋಟ್‌ ಹೇಳಿದರು.

ಸೋನಿಯಾ ಗಾಂಧಿ ನಿರ್ಧಾರ
ಗೆಹ್ಲೋಟ್ ತಮ್ಮ ತವರು ರಾಜ್ಯದಲ್ಲಿನ ಬಿಕ್ಕಟ್ಟಿನ “ನೈತಿಕ ಹೊಣೆಗಾರಿಕೆ” ತೆಗೆದುಕೊಂಡಿದ್ದರೂ ಸಹ, ಸೋನಿಯಾ ಗಾಂಧಿ ಅವರು ಮುಂದಿನ ದಿನಗಳಲ್ಲಿ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ ಅವರು ಸೂಚಿಸಿದಂತೆ ಚೆಂಡು ಈಗ ಸೋನಿಯಾ ಗಾಂಧಿಯವರ ಅಂಗಳದಲ್ಲಿದೆ, “[ಗೆಹ್ಲೋಟ್ ಅವರನ್ನು ರಾಜಸ್ಥಾನ ಸಿಎಂ ಆಗಿ ಉಳಿಸಿಕೊಳ್ಳುವುದು] ಕಾಂಗ್ರೆಸ್ ಅಧ್ಯಕ್ಷರು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಎಲ್ಲಾ ನಾಯಕರಿಗೆ ಸಲಹೆ
ಇದಾದ ಬೆನ್ನಲ್ಲೇ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆ ನೀಡುವ ನಾಯಕರ ವಿರುದ್ಧ ಮತ್ತು ಪಕ್ಷದ ಇತರ ಪದಾಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮದ ಎಚ್ಚರಿಕೆಯನ್ನು ಹೈಕಮಾಂಡ್‌ನಿಂದ ನೀಡಲಾಯಿತು. ಬಿಕ್ಕಟ್ಟಿನ ನಂತರ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದೇವೆ ಎಂದು ಪಕ್ಷ ಹೇಳಿದೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement