ಭಾರತೀಯ ಸೇನೆಗೆ ಸೇರಿದ ಮೊದಲ ಮಹಿಳಾ ಬಾಕ್ಸರ್ ಕಾಮನ್‌ವೆಲ್ತ್ ಕಂಚಿನ ಪದಕ ವಿಜೇತ ಜಾಸ್ಮಿನ್

ನವದೆಹಲಿ: 2022ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಮಹಿಳಾ ಬಾಕ್ಸರ್ ಜಾಸ್ಮಿನ್ ಲಂಬೋರಿಯಾ ಭಾರತೀಯ ಸೇನೆಯ ಹವಾಲ್ದಾರ್​ ಆಗಿ ನೇಮಕಗೊಂಡಿದ್ದಾರೆ.
20 ವರ್ಷದ ಜಾಸ್ಮಿನ್ ಲಂಬೋರಿಯಾ ಭಾರತೀಯ ಸೇನಾ ಮಿಷನ್ ಒಲಿಂಪಿಕ್ಸ್‌ಗೆ ಸೇರಿದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಾಂಪಿಯನ್​ಗಳಾದ ನೀರಜ್ ಚೋಪ್ರಾ ಮತ್ತು ಅವಿನಾಶ್ ಸೇಬಲ್ ಅವರಂತೆ ಸೇನೆಯ ಮಿಷನ್ ಒಲಿಂಪಿಕ್ಸ್ ಅಡಿಯಲ್ಲಿ ಜಾಸ್ಮಿನ್ ಲಂಬೋರಿಯಾ ಶೀಘ್ರದಲ್ಲೇ ತರಬೇತಿಯನ್ನು ಪ್ರಾರಂಭಿಸಲಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಮಹಿಳಾ ಕುಸ್ತಿ ಪಟು ಜಾಸ್ಮಿನ್ ಲಂಬೋರಿಯಾ 2022ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅಲ್ಲದೆ, ಖೇಲೋ ಇಂಡಿಯಾ ಯೂತ್ ಗೇಮ್ಸ್ 2020, ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್, ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಬಾಕ್ಸರ್‌ಗಳಾದ ಅಮಿತ್ ಪಂಗಲ್ ಮತ್ತು ಮೊಹಮ್ಮದ್ ಹುಸಾಮುದ್ದೀನ್ಭಾರತೀಯ ಸೇನೆಯಲ್ಲಿದ್ದಾರೆ. ಅಲ್ಲದೆ, ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ, ಭಾರತೀಯ ಸೈನ್ಯದ ದಕ್ಷಿಣ ಕಮಾಂಡ್ ವಿಭಾಗದಲ್ಲಿ ಸುಬೇದಾರ್ ಆಗಿದ್ದಾರೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement