ಯಲ್ಲಾಪುರ ಅರೆಬೈಲ್‌ ಘಟ್ಟದಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ದರೋಡೆ ..!

posted in: ರಾಜ್ಯ | 1

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಸ್ವಿಫ್ಟ್ ಕಾರು ಸಮೇತ ಕಾರಿನಲ್ಲಿದ್ದ ಕೋಟ್ಯಾಂತರ ರೂ ಹಣವನ್ನು ದರೋಡೆ ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಡ್ಡಗಟ್ಟಿ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ದೋಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.
ಅಕ್ಟೋಬರ್ 1ರ ಶನಿವಾರ ರಾತ್ರಿ ಘಟ್ಟದ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಾರನ್ನು ಸಹ ದರೋಡೆ ಮಾಡಿಕೊಂಡು ಹೋಗಿದ್ದಾರೆ . ಬೆಳಗಾವಿ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಕಾರಿನಲ್ಲಿ ಹೊರಟಿದ್ದ ಇಬ್ಬರನ್ನು ಅಡ್ಡಗಟ್ಟಿ ಹಣ ದೋಚಲಾಗಿದೆ. ಯಲ್ಲಾಪುರದ ಅರೆಬೈಲ್ ಘಟ್ಟದಲ್ಲಿ ಕಾರು ಬರುತ್ತಿರುವಾಗ ಎರಡು ಕಾರುಗಳಲ್ಲಿ ಬಂದ ದರೋಡೆಕೋರರು ಇವರ ಕಾರನ್ನು ಅಡ್ಡ ಹಾಕಿದ್ದಾರೆ ಹಾಗೂ ಆರೇಳು ಜನ ದರೋಡೆಕೋರರ ತಂಡ ಕಾರಲ್ಲಿದ್ದ ಇಬ್ಬರನ್ನೂ ಹೊರಕ್ಕೆ ಎಳೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕಾರಲ್ಲಿದ್ದ 2 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ದೋಚಿದ ಕಳ್ಳರು ಕಾರು ಸಮೇತ ಪರಾರಿಯಾಗಿದ್ದಾರೆ ಹಾಗೂ ಇಬ್ಬರ ಮೊಬೈಲ್ ಪೋನ್ ಗಳನ್ನೂ ಕೂಡ ಕಿತ್ತುಕೊಂಡು ಹೋಗಿದ್ದಾರೆ ಎಂದು ಇಬ್ಬರೂ ಯಲ್ಲಾಪುರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.
ಕೊಲ್ಲಾಪುರದ ನೀಲೇಶ ನಾಯ್ಕ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎರಡು ಕಾರುಗಳಲ್ಲಿ ಬಂದ ಏಳೆಂಟು ಜನ ರಿದ್ದ ಗುಂಪು, ತಮಗೆ ಹೊಡೆದು, ಬೆದರಿಸಿ ತಮ್ಮ 2 ಲಕ್ಷ ರೂ ಬೆಲೆಬಾಳುವ ಸ್ವಿಫ್ಟ್ ವಿ.ಡಿ.ಐ. ಕಾರು ಸಮೇತ ಕಾರಿನಲ್ಲಿದ್ದ 2,11,86,000 ರೂ ಹಣವನ್ನು ಮತ್ತು 10 ಸಾವಿರ ರೂ ಬೆಲೆಯ ಎರಡು ಮೊಬೈಲ್ ಗಳನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಮಹಿಳೆಯರಿಗಾಗಿ ಧಾರವಾಡ ಜೆಎಸ್ಎಸ್‌ನಲ್ಲಿ ಉದ್ಯೋಗ ಮೇಳ

ಯೋಜನಾಬದ್ಧವಾಗಿ ನಡೆದಿರುವ ಈ ದರೋಡೆ ಪ್ರಕರಣದಲ್ಲಿ ವೃತ್ತಿಪರರು ಹಾಗೂ ಈ ಬಗ್ಗೆ ಮಾಹಿತಿ ಇದ್ದವರೇ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಬ್ಬರ ಕಾರನ್ನು ಹಿಂಬಾಲಿಸಿದ ದರೋಡೆಕೋರರ ತಂಡ ಅರಬೈಲ್‌ ಘಟ್ಟದ ದಟ್ಟ ಕಾಡಿನ ನಡುವೆ, ಮೊಬೈಲ್ ನೆಟವರ್ಕ್ ಸಿಗದ ಜಾಗದಲ್ಲೇ ಕಾರನ್ನು ಅಡ್ಡಹಾಕಿ ದರೋಡೆ ಮಾಡಿದ್ದು ಈ ಸಂಶಯಕ್ಕೆ ಪುಷ್ಟಿ ನೀಡುವಂತಿದೆ.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.1 / 5. ಒಟ್ಟು ವೋಟುಗಳು 12

  1. MAHESH GOPALKRISHNA BHAT

    ಇದರ ಜಾಡು ಹಿಡಿದು ಆರಕ್ಷರು ಅವರಿಗೆ ತಕ್ಕಪಾಠ ಕಲಿಸಬೇಕೆಂದು ವಿನಂತಿ!!
    ಸಾಮಾನ್ಯ ಜನರಿಗೂ ಭಯ ಆಗುತ್ತಿದೆ.

    ನಮ್ಮ ಯಲ್ಲಾಪುರದ ಆರಕ್ಷರು ಸಮರ್ಥರು!!!

ನಿಮ್ಮ ಕಾಮೆಂಟ್ ಬರೆಯಿರಿ

advertisement