ಧರ್ಮಾಧಾರಿತ ಜನಸಂಖ್ಯೆ ಅಸಮತೋಲನ ಕಡೆಗಣಿಸುವ ವಿಚಾರವಲ್ಲ, ಎಲ್ಲ ಧರ್ಮಕ್ಕೆ ಅನ್ವಯವಾಗುವ ಜನಸಂಖ್ಯಾ ನೀತಿ ಜಾರಿ ಮಾಡಿ : ಮೋಹನ​ ಭಾಗವತ್​

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ್ ಅವರು ಜನಸಂಖ್ಯೆಯ ಅಸಮತೋಲನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಇತಿಹಾಸದಲ್ಲಿ ಜನಸಂಖ್ಯೆಯ ಅಸಮತೋಲನದ ತೀವ್ರ ಪರಿಣಾಮಗಳನ್ನು ಭಾರತ ಅನುಭವಿಸಿದೆ ಎಂದು ಹೇಳಿದ್ದಾರೆ. ಜನಸಂಖ್ಯೆಯ ಏರಿಕೆಯನ್ನು ತಡೆಯಲು ಸಮಗ್ರ ನೀತಿಗೆ ಕರೆ ನೀಡಿದ ಅವರು, ಸಮಾಜದ ಎಲ್ಲಾ ವರ್ಗದವರು ಅದನ್ನು ಪಾಲಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
97 ವರ್ಷಗಳ ಇತಿಹಾಸದಲ್ಲಿ ಇಲ್ಲಿನ ಆರ್​ಎಸ್​ಎಸ್​ ಕಚೇರಿಯಲ್ಲಿ ವಿಜಯದಶಮಿ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಮುಖ್ಯ ಅತಿಥಿಯಾಗಿ ಆಹ್ವಾನಿತರಾದ ಖ್ಯಾತ ಪರ್ವತಾರೋಹಿ ಪದ್ಮಶ್ರೀ ಸಂತೋಷ್ ಯಾದವ್ ಅವರ ಸಮ್ಮುಖದಲ್ಲಿ ಮಾತನಾಡಿದರು. ಸಂಪ್ರದಾಯದಲ್ಲಿ ಬದಲಾವಣೆ ಮಾಡಿಕೊಂಡ ಆರ್​ಎಸ್​ಎಸ್​ ಪರ್ವತಾರೋಹಿ ಸಂತೋಷ್​ ಯಾದವ್​ ಅವರನ್ನು ಅತಿಥಿಯಾಗಿ ಆಹ್ವಾನಿಸಿತ್ತು.
ಮತಾಂತರ ಮತ್ತು ಒಳನುಸುಳುವಿಕೆಯಿಂದಾಗಿ ಜನಸಂಖ್ಯೆಯ ಸಮತೋಲನವೂ ಹದಗೆಡುತ್ತಿದೆ, ಇದು ಅತ್ಯಂತ ಕಳವಳಕಾರಿಯಾಗಿದೆ ಎಂದು ಭಾಗವತ್ ಹೇಳಿದರು.
ಜನಸಂಖ್ಯೆಯ ಅಸಮತೋಲನದಿಂದಾಗಿ ವಿಶ್ವದ ಇತರ ಹಲವು ದೇಶಗಳು ಒಡೆದುಹೋದವು. ಅವುಗಳಿಂದ ಬೇರ್ಪಟ್ಟು ಪೂರ್ವ ಟಿಮೋರ್, ದಕ್ಷಿಣ ಸುಡಾನ್ ಮತ್ತು ಕೊಸೊವೊಗಳು ರೂಪುಗೊಂಡವು. ಹೀಗಾಗಿ ಜನಸಂಖ್ಯೆಯ ಸಮಗ್ರ ನಿಯಂತ್ರಣ ನೀತಿಯನ್ನು ಸರ್ಕಾರ ತರಬೇಕು ಎಂದು ಭಾಗವತ್ ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

ಜನಸಂಖ್ಯಾ ನೀತಿಯನ್ನು ಗಂಭೀರ ವಿಚಾರ ಮಂಥನದ ನಂತರ ಸಿದ್ಧಪಡಿಸಬೇಕು ಮತ್ತು ಅದನ್ನು ಎಲ್ಲರಿಗೂ ಜಾರಿಗೊಳಿಸಬೇಕು. ಈ ಒಟ್ಟಾರೆ ನೀತಿಯಿಂದ ಯಾರಿಗೂ ವಿನಾಯಿತಿ ನೀಡಬಾರದು ಎಂದು ಅವರು ಹೇಳಿದರು.
ಭಾಗವತ್ ಅವರು ದೇಶದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಬಲವಾಗಿ ಪ್ರತಿಪಾದಿಸಿದರು ಮತ್ತು ಪುರುಷರು ಮತ್ತು ಮಹಿಳೆಯರು ಪ್ರತಿಯೊಂದು ಅಂಶ ಮತ್ತು ಗೌರವದಲ್ಲಿ ಸಮಾನರು, ಸಮಾನ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಎಂದು ಹೇಳಿದರು.
ಜಗತ್ ಜನನಿ (ಬ್ರಹ್ಮಾಂಡದ ತಾಯಿ)” ಎಂದು ಪರಿಗಣಿಸಲಾಗುತ್ತದೆ, ಆದರೆ ಮನೆಯಲ್ಲಿ ಅವರನ್ನು “ಗುಲಾಮರು” ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರ ಸಬಲೀಕರಣ ಮನೆಯಿಂದಲೇ ಆರಂಭವಾಗಬೇಕು ಮತ್ತು ಸಮಾಜದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದರು.
ಭಾರತವು ಮತ್ತೊಮ್ಮೆ ‘ವಿಶ್ವ ಗುರು’ (ವಿಶ್ವ ನಾಯಕ) ಆಗುವ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಮಹಿಳೆಯರ ಪಾತ್ರದ ಮಹತ್ವವನ್ನು ಒತ್ತಿ ಹೇಳಿದ ಅವರು, ನಾವು ವಿಶ್ವ ಗುರು ಭಾರತವನ್ನು ನಿರ್ಮಿಸಲು ಬಯಸಿದರೆ ಮಹಿಳೆಯರ ಸಮಾನ ಭಾಗವಹಿಸುವಿಕೆ ಕೂಡ ಅಗತ್ಯವಿದೆ. ಮತ್ತು ಬದಲಾವಣೆಗಳು ಸಮಾಜದಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಮಹಿಳೆಯೊಬ್ಬರನ್ನು ಆಹ್ವಾನಿಸಿರುವುದು ಇದೇ ಮೊದಲಲ್ಲ, ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಅಮೃತಾ ಕೌರ್ ಮತ್ತು ನಾಗಪುರದ ಮೊದಲ ಲೋಕಸಭಾ ಸದಸ್ಯೆ ಅನುಸುಬಾಯಿ ಕಾಳೆ ಮತ್ತು ಇತರರನ್ನು ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗಿದೆ ಎಂದು ಅವರು ನೆನಪಿಸಿದರು.
ಕೋವಿಡ್‌ ಆರ್ಥಿಕ ಬಿಕ್ಕಟ್ಟಿನಿಂದ ಭಾರತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಮತ್ತು ಶ್ರೀಲಂಕಾ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು ಉಕ್ರೇನ್ ಯುದ್ಧದ ಸಮಯದಲ್ಲಿ ಭಾರತದ ಪಾತ್ರ ಶ್ಲಾಘನೀಯ. ಈ ಎರಡು ಸನ್ನಿವೇಶಗಳಿಂದಾಗಿ ಜಗತ್ತಿನಲ್ಲಿ ನಮ್ಮ ರಾಜಕೀಯ ತೂಕ ಹೆಚ್ಚಿದೆ ಎಂದು ಭಾಗವತ್ ಪ್ರತಿಪಾದಿಸಿದರು.
ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರೊಂದಿಗೆ ಸಂವಾದ ಮುಂದುವರಿಯುತ್ತದೆ ಮತ್ತು ಇದು ವರ್ಷಗಳಿಂದ ನಡೆಯುತ್ತಿದೆ. ಹಿಂಸಾತ್ಮಕ ಘಟನೆಗಳನ್ನು ದೇಶದ ಪ್ರಮುಖ ಮುಸ್ಲಿಂ ನಾಯಕರೂ ಖಂಡಿಸಿದ್ದಾರೆ. ನಾವು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುವ ಪರವಾಗಿದ್ದೇವೆ ಎಂದು ಭಾಗವತ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement