ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ಗುರುವಾರ ಡೇ-ಕೇರ್ ಸೆಂಟರ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವತ್ನಾಲ್ಕು ಜನರು ಸಾವಿಗೀಡಾಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ ಹಾಗೂ ಮಾಜಿ ಪೊಲೀಸ್ ಅಧಿಕಾರಿ ತಾನು ಗುಂಡು ಹಾರಿಸಿಕೊಂಡು ಸಾಯುವ ಮೊದಲು ತನ್ನ ಹೆಂಡತಿ ಮತ್ತು ಮಗುವನ್ನೂ ಕೊಂದಿದ್ದಾನೆ ಎಂದು ಹೇಳಿದ್ದಾರೆ.
ಥೈಲ್ಯಾಂಡ್‌ನ ಡೇ ಕೇರ್ ಸೆಂಟರ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗೆ ಮೃತಪಟ್ಟವರಲ್ಲಿ 2 ವರ್ಷ ವಯಸ್ಸಿನ ಮಕ್ಕಳು ಸಹ ಸೇರಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಶಂಕಿತ ಗುಂಡಿಗೆ ಬಲಿಯಾದವರಲ್ಲಿ 22 ಮಕ್ಕಳಿದ್ದರು. ಬಂದೂಕುಧಾರಿ ಊಟದ ಸಮಯದಲ್ಲಿ ಬಂದಾಗ ಸುಮಾರು 30 ಮಕ್ಕಳು ಕೇಂದ್ರದಲ್ಲಿದ್ದರು ಎಂದು ಜಿಲ್ಲಾ ಅಧಿಕಾರಿ ಜಿಡಾಪಾ ಬೂನ್ಸಮ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಅಪರಾಧವೆಸಗಿದ ಗನ್‌ಮ್ಯಾನ್‌ನನ್ನು ಕಳೆದ ವರ್ಷ ಪೊಲೀಸ್ ಪಡೆಯಿಂದ ತೆಗೆದುಹಾಕಲಾಗಿತ್ತು ಎಂದು ನಾ ಕ್ಲಾಂಗ್ ಪೊಲೀಸ್ ಠಾಣೆಯ ಅಧೀಕ್ಷಕ ಚಕ್ರಫಾಟ್ ಕೂಡ ಥಾಯ್ ರಾತ್ ಟಿವಿಗೆ ಹೇಳಿದ್ದಾರೆ.
ಥಾಯ್ಲೆಂಡ್‌ನ ಸೆಂಟ್ರಲ್ ಇನ್ವೆಸ್ಟಿಗೇಶನ್ ಬ್ಯೂರೋದ ಫೇಸ್‌ಬುಕ್ ಪುಟವು ಮಾಜಿ ಪೊಲೀಸ್ ಪನ್ಯಾ ಖಮ್ರಾಬ್ ಚಿತ್ರವನ್ನು ತೋರಿಸುತ್ತದೆ, ಆತ ಉತ್ತರ ಥಾಯ್ ಪ್ರಾಂತ್ಯದ ನಾಂಗ್ ಬುವಾ ಲ್ಯಾಮ್ ಫುದಲ್ಲಿನ ನರ್ಸರಿಯಲ್ಲಿ ಕನಿಷ್ಠ 34 ಜನರನ್ನು ಕೊಂದಿದ್ದಾರೆ ಎಂದು ನಂಬಲಾಗಿದೆ.
ಎಂಟು ತಿಂಗಳ ಗರ್ಭಿಣಿಯಾಗಿದ್ದ ಶಿಕ್ಷಕಿ ಸೇರಿದಂತೆ ನಾಲ್ಕೈದು ಸಿಬ್ಬಂದಿಗೆ ವ್ಯಕ್ತಿ ಮೊದಲು ಈತ ಗುಂಡು ಹಾರಿಸಿದ್ದಾನೆ ಎಂದು ಜಿಡಾಪಾ ತಿಳಿಸಿದ್ದಾರೆ. ಮೊದಲಿಗೆ ಇದು ಪಟಾಕಿ ಎಂದು ಜನರು ಭಾವಿಸಿದ್ದರು” ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಕೆಲವು ವೀಡಿಯೊಗಳು ಈಶಾನ್ಯ ಪ್ರಾಂತ್ಯದ ನೋಂಗ್ ಬುವಾ ಲ್ಯಾಂಫುವಿನ ಉತೈ ಸಾವನ್ ಪಟ್ಟಣದ ಮಧ್ಯಭಾಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಮಕ್ಕಳ ದೇಹಗಳನ್ನು ಒಳಗೊಂಡಿರುವ ದೃಶ್ಯಗಳನ್ನು ತೋರಿಸಿದೆ.
ತುಣುಕನ್ನು ತಕ್ಷಣವೇ ದೃಢೀಕರಿಸಲು ಸಾಧ್ಯವಾಗಲಿಲ್ಲ ಎಂದು ರಾಯಿಟರ್ಸ್ ಹೇಳಿದೆ.
ಥಾಯ್ಲೆಂಡ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪ, ಆದರೂ ಈ ಪ್ರದೇಶದಲ್ಲಿನ ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಬಂದೂಕು ಮಾಲೀಕತ್ವದ ಪ್ರಮಾಣವು ಅಧಿಕವಾಗಿದೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳು ಸಾಮಾನ್ಯವಾಗಿದೆ.
2020 ರಲ್ಲಿ, ಆಸ್ತಿ ವ್ಯವಹಾರದ ಮೇಲೆ ಕೋಪಗೊಂಡ ಸೈನಿಕನೊಬ್ಬ ಕನಿಷ್ಠ 29 ಜನರನ್ನು ಕೊಂದು 57 ಜನರನ್ನು ಗಾಯಗೊಳಿಸಿದ್ದ.
ನಿಮ್ಮ ಕಾಮೆಂಟ್ ಬರೆಯಿರಿ