ವ್ಯಕ್ತಿಯ ಮದುವೆ ಬಗ್ಗೆ ತಿಳಿದ ನಂತರವೂ ಮಹಿಳೆ ಲೈಂಗಿಕ ಸಂಬಂಧ ಮುಂದುವರಿಸಿದರೆ ಅತ್ಯಾಚಾರ ಆರೋಪ ನಿಲ್ಲುವುದಿಲ್ಲ: ಕೇರಳ ಹೈಕೋರ್ಟ್

ತಿರುವನಂತಪುರಂ: ವ್ಯಕ್ತಿ ವಿವಾಹವಾಗಿರುವ ವಿಚಾರ ಗೊತ್ತಿದ್ದೂ ಆತನ ಜೊತೆ ಲೈಂಗಿಕ ಸಂಬಂಧ ಮುಂದುವರಿಸಿದರೆ ವಿವಾಹವಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಮಾಡಲಾಗಿದೆ ಎಂಬ ಆರೋಪ ನಿಲ್ಲುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.
ಐಪಿಸಿ ಸೆಕ್ಷನ್‌ಗಳಾದ 406 (ನಂಬಿಕೆ ದ್ರೋಹ), 420 (ವಂಚನೆ) ಮತ್ತು 376 (ಅತ್ಯಾಚಾರ) ಅಡಿ ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಆರೋಪಿತ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನ್ಯಾ. ಕೌಸರ್‌ ಎಡಪ್ಪಗತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
33 ವರ್ಷದ ವ್ಯಕ್ತಿಯ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್, ಆರೋಪಿ ಮತ್ತು ದೂರುದಾರರ ನಡುವಿನ ಸಂಬಂಧವು ಒಮ್ಮತದಿಂದ ಕೂಡಿದೆ ಎಂದು ತೋರುತ್ತದೆ. ಅಂತಹ ದಂಪತಿ ನಡುವಿನ ಯಾವುದೇ ಲೈಂಗಿಕತೆ ಯಾವುದೇ ಸುಳ್ಳು ಭರವಸೆಯನ್ನು ಆಧರಿಸಿಲ್ಲ ಎಂದು ಎಡಗ್ಗಪತ್ ಅಭಿಪ್ರಾಯಪಟ್ಟಿದ್ದಾರೆ.
2010ರಿಂದಲೂ ದೂರುದಾರ ಮಹಿಳೆಯು ಅರ್ಜಿದಾರರ ಜೊತೆ ಸಂಬಂಧ ಹೊಂದಿದ್ದರು. ಅರ್ಜಿದಾರರಿಗೆ ಮದುವೆಯಾಗಿದೆ ಎಂಬ ವಿಚಾರ ಗೊತ್ತಾದ ಬಳಿಕವೂ 2013ರ ನಂತರ ಲೈಂಗಿಕ ಸಂಬಂಧ ಮುಂದುವರಿಸಿದ್ದರು. ಹೀಗಾಗಿ, ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಬಂಧ ಹೊಂದಿದ್ದರು ಎಂಬುದು ನಿಲ್ಲುವುದಿಲ್ಲ. ಪ್ರೀತಿ ಮತ್ತು ಕಾಮನೆಯ ಭಾಗವಾಗಿ ಆಕ್ಷೇಪಿತ ಲೈಂಗಿಕ ಸಂಬಂಧವನ್ನು ಅರ್ಜಿದಾರರು ಹೊಂದಿದ್ದರು ಎಂದೇ ಹೇಳಬೇಕಾಗುತ್ತದೆ ವಿನಾ ಸುಳ್ಳು ಭರವಸೆ ಕಾರಣ ಎನ್ನಲಾಗದು” ಎಂದು ಪೀಠ ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ಒಂಬತ್ತು ವರ್ಷಗಳ ಅವಧಿಯಲ್ಲಿ, ಅರ್ಜಿದಾರರು, ದೂರುದಾರರಿಗೆ ಮದುವೆಯ ಸುಳ್ಳು ಭರವಸೆ ನೀಡಿ, ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸ್ಥಳಗಳಲ್ಲಿ ಲೈಂಗಿಕ ಸಂಪರ್ಕ ನಡೆಸಿದ್ದರು ಎಂಬುದು ಪ್ರಾಸಿಕ್ಯೂಷನ್ ಆರೋಪವಾಗಿತ್ತು.2010ರಿಂದ ಅರ್ಜಿದಾರ ಪರಿಚಿತನಾಗಿದ್ದು, 2013ಕ್ಕೆ ಆತ ವಿವಾಹವಾಗಿದ್ದಾನೆ ಎಂಬ ವಿಚಾರ ತಮಗೆ ತಿಳಿದಿತ್ತು ಎನ್ನುವ ದೂರುದಾರೆಯ ಹೇಳಿಕೆಯನ್ನು ಪೀಠವು ಗಮನಿಸಿತು. ಅದಾಗ್ಯೂ, ಆಕೆಯು 2019ರವರೆಗೆ ಆತನ ಜೊತೆ ಲೈಂಗಿಕ ಸಂಬಂಧ ಹೊಂದಿದ್ದರು. ಅರ್ಜಿದಾರ ವಿಚ್ಛೇದನ ಪಡೆಯುವುದಾಗಿ ತಿಳಿಸಿದ್ದರು, ಈ ನಡುವೆ ಆತ ಮತ್ತೊಬ್ಬ ಮಹಿಳೆಯ ಜೊತೆಯೂ ಸಂಬಂಧ ಹೊಂದಿರುವುದು ಗೊತ್ತಾಯಿತು ಎಂದು ದೂರುದಾರಳು ಆರೋಪಿಸಿದ್ದರು.

ದೂರುದಾರಳ ಹೇಳಿಕೆ ಮತ್ತು ದಾಖಲೆಗಳ ಪ್ರಕಾರ ಆರೋಪ ಮಾಡಲಾಗಿರುವಂತೆ ಮದುವೆಯ ಭರವಸೆ ನೀಡಿ ಅರ್ಜಿದಾರ ಅತ್ಯಾಚಾರ ಎಸಗುವ ಯಾವುದೇ ದುರುದ್ದೇಶ ಹೊಂದಿಲ್ಲ ಎಂದು ಪೀಠ ಹೇಳಿದ್ದು, ಆತನ ವಿರುದ್ಧದ ಎಫ್‌ಐಆರ್‌ ವಜಾ ಮಾಡಿದೆ. ಪುರುಷನಿಗೆ ಈಗಾಗಲೇ ವಿವಾಹವಾಗಿದೆ ಎಂದು ಮಹಿಳೆ ತಿಳಿದಿದ್ದರೆ ಮತ್ತು ಆರೋಪಿಯೊಂದಿಗೆ ಲೈಂಗಿಕ ಸಂಬಂಧವನ್ನು ಮುಂದುವರೆಸಿದರೆ ಮದುವೆಯಾಗುವುದಾಗಿ ಸುಳ್ಳು ಭರವಸೆಯ ಮೇಲೆ ಅತ್ಯಾಚಾರದ ಆರೋಪ ನಿಲ್ಲುವುದಿಲ್ಲ ಎಂದು ಕೇರಳ ಹೈಕೋರ್ಟ್ ಶನಿವಾರ ಅಭಿಪ್ರಾಯಪಟ್ಟಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

 

2 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement