ಪ್ರವಾಹದಿಂದಾಗಿ ಹೆಚ್ಚುತ್ತಿರುವ ಮಲೇರಿಯಾ: ಭಾರತದಿಂದ 62 ಲಕ್ಷ ಸೊಳ್ಳೆ ಪರದೆಗಳ ಖರೀದಿಗೆ ಮುಂದಾದ ಪಾಕಿಸ್ತಾನ-ವರದಿ

ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನ ತೀವ್ರತೆಯ ಮಧ್ಯೆ, ಪಾಕಿಸ್ತಾನದ ಆರೋಗ್ಯ ಸಚಿವಾಲಯವು ಮಂಗಳವಾರ ಭಾರತದಿಂದ 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸಲು ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ಶತಮಾನದ ಪ್ರವಾಹದ ನಂತರ ಈಗ ಮಲೇರಿಯಾ ಸೋಂಕು ಹರಡುತ್ತಿದೆ. ಮಲೇರಿಯಾ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ರಸ್ತುತ ಪಾಕಿಸ್ತಾನಿಗಳಿಗೆ ಈಗ ಸೊಳ್ಳೆಗಳ ಕಾಟ ತಡೆಯುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆಯಲು ಪಾಕಿಸ್ತಾನ ಭಾರತದಿಂದ ಸುಮಾರು 62 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸಲಿದೆ.
ಪಾಕಿಸ್ತಾನಿ ಸುದ್ದಿ ವೆಬ್‌ಸೈಟ್ Geo.tv ವರದಿಯ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ (WHO) ಪಾಕಿಸ್ತಾನಕ್ಕೆ ಸೊಳ್ಳೆ ಪರದೆಗಳನ್ನು ಸಂಗ್ರಹಿಸಲು ಗ್ಲೋಬಲ್ ಫಂಡ್ ನೆರವು ನೀಡಿದ ಹಣಕಾಸಿನ ಸಂಪನ್ಮೂಲಗಳನ್ನು ಬಳಸುತ್ತಿದೆ.
ದೇಶದ 32 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮಲೇರಿಯಾ ವೇಗವಾಗಿ ಹರಡುತ್ತಿದೆ, ಅಲ್ಲಿ ಸಾವಿರಾರು ಮಕ್ಕಳು ಸೊಳ್ಳೆಯಿಂದ ಹರಡುವ ಮಲೇರಿಯಾ ಸೋಂಕಿಗೆ ಒಳಗಾಗಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಕಳೆದ ತಿಂಗಳು ಪಾಕಿಸ್ತಾನದ ಆರೋಗ್ಯ ಸಚಿವಾಲಯ ಸೊಳ್ಳೆ ಪರದೆಗಳನ್ನು ಖರೀದಿಸಲು ಭಾರತದಿಂದ ಅನುಮತಿ ಕೇಳಿತ್ತು. ಸಿಂಧ್, ಪಂಜಾಬ್ ಮತ್ತು ಬಲೂಚಿಸ್ತಾನದ 26 ಹೆಚ್ಚು ಪೀಡಿತ ಜಿಲ್ಲೆಗಳಿಗೆ ಸೊಳ್ಳೆ ಪರದೆಗಳನ್ನು ಒದಗಿಸಲು ಗ್ಲೋಬಲ್ ಫಂಡ್‌ಗೆ ವಿನಂತಿಸಿರುವುದಾಗಿ ಪಾಕ್ ಅಧಿಕಾರಿ ಹೇಳಿಕೊಂಡಿದ್ದಾರೆ. ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ (ಮಾನವರಲ್ಲಿ ಮಲೇರಿಯಾವನ್ನು ಉಂಟುಮಾಡುವ ಪ್ಲಾಸ್ಮೋಡಿಯಂನ ಮಾರಣಾಂತಿಕ ಸೊಳ್ಳೆಗಳು) ಪ್ರಕರಣಗಳು ಈ ಪ್ರದೇಶಗಳಲ್ಲಿ ಹೆಚ್ಚಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಗ್ಲೋಬಲ್ ಫಂಡ್ ಈ ಸೊಳ್ಳೆ ಪರದೆಗಳನ್ನು ಪಾಕಿಸ್ತಾನ ಸರ್ಕಾರವು ಅನುಮತಿಸಿದರೆ ಭಾರತದಿಂದ ಖರೀದಿಸಲು ಮುಂದಾಗಿದೆ.
ಭಾರತದಿಂದ ಸೊಳ್ಳೆ ಪರದೆಗಳನ್ನು ಖರೀದಿಸಲು ಅನುಮತಿ ನೀಡುವಂತೆ ನಾವು ವಾಣಿಜ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ಅನುಮತಿಸಿದರೆ, ಕೆಲವೇ ದಿನಗಳಲ್ಲಿ ಅಗತ್ಯವಿರುವ ಸಂಖ್ಯೆಯ ಸೊಳ್ಳೆ ಪರದೆಗಳನ್ನು ವ್ಯವಸ್ಥೆಗೊಳಿಸುವುದಾಗಿ ಗ್ಲೋಬಲ್ ಫಂಡ್ ನಮಗೆ ಭರವಸೆ ನೀಡಿದೆ ಎಂದು ಎನ್‌ಎಚ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಇದಕ್ಕೂ ಮುನ್ನ, 1700 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ವಿನಾಶಕಾರಿ ಪ್ರವಾಹದಿಂದ ಸಂತ್ರಸ್ತರಾಗಿರುವ ಲಕ್ಷಾಂತರ ಪಾಕಿಸ್ತಾನಿಗಳ ಪುನರ್ವಸತಿಗಾಗಿವಿಶ್ವಸಂಸ್ಥೆ ಮತ್ತು ಪಾಕಿಸ್ತಾನ ಜಂಟಿಯಾಗಿ 80 ಕೋಟಿ ಅಮೆರಿನ್‌ ಡಾಲರ್‌ಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ಕೋರಿ ಹೊಸ ಫ್ಲಾಶ್ ಮನವಿಯನ್ನು ಪ್ರಾರಂಭಿಸಿದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. .
ಸೋಮವಾರ ಜಿನೀವಾದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಹೊಸ ಮನವಿಯಡಿ, ಗ್ಲೋಬಲ್ ಫಂಡ್ ಪಾಕಿಸ್ತಾನಕ್ಕೆ ತನ್ನ ಮಾನವೀಯ ಮನವಿಯನ್ನು ಐದು ಪಟ್ಟು ಪರಿಷ್ಕರಿಸಿ USD 160 ಮಿಲಿಯನ್‌ನಿಂದ USD 816 ಮಿಲಿಯನ್‌ಗೆ ಪರಿಷ್ಕರಿಸಿದೆ, ಏಕೆಂದರೆ ಅದು ವರದಿಯಾದ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಉಲ್ಬಣವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಜನ ಇನ್ನೂ ಪ್ರವಾಹದಿಂದ ಉದ್ಭವಿಸಿದ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಹವಾಮಾನ ಬದಲಾವಣೆ ಸಚಿವ ಶೆರ್ರಿ ರೆಹಮಾನ್, ಶೀಘ್ರದಲ್ಲೇ ಬರಲಿರುವ ಶೀತ ಹವಾಮಾನದ ಪರಿಣಾಮಗಳಿಂದ ಪಾಕಿಸ್ತಾನದ ಪ್ರವಾಹ ಸಂತ್ರಸ್ತರನ್ನು ರಕ್ಷಿಸಲು ತುರ್ತು ವೈದ್ಯಕೀಯ ನೆರವು ಮತ್ತು ಸಮಯೋಚಿತ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement