ಅಮೆರಿಕ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ವಿರುದ್ಧ ‘ಕಳ್ಳ ಕಳ್ಳ ಎಂದು ಘೋಷಣೆ | ವೀಕ್ಷಿಸಿ

ಅಮೆರಿಕ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ವಿರುದ್ಧ ‘ಚೋರ್-ಚೋರ್’ ಎಂಬ ಘೋಷಣೆಗಳನ್ನು ಕೂಗಲಾಯಿತು.ಪಾಕಿಸ್ತಾನದ ಹಣಕಾಸು ಸಚಿವರ ಮೇಲೆ ವಿರುದ್ಧ ವ್ಯಕ್ತಿಯೊಬ್ಬರು ಚೋರ್‌ ಚೋರ್‌ ಎಂದು ಕೂಗಿ ಅವಹೇಳನ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಾಷಿಂಗ್ಟನ್‌ನಲ್ಲಿ ಐಎಂಎಫ್‌ನಿಂದ ಸಾಲ ಪಡೆಯುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲು ದಾರ್ ಅಲ್ಲಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಳ್ಳಲು ಅಮೆರಿಕದ ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ದಾರ್ ಅವರು ಅಧಿಕಾರಿಗಳೊಂದಿಗೆ ಕಾರಿಡಾರ್ ಪ್ರವೇಶಿಸಿದ ತಕ್ಷಣ ಅವರ ವಿರುದ್ಧ ಘೋಷಣೆಗಳು ಮೊಳಗಿದವು. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಕೆಲವರು ಅವರನ್ನು ‘ಚೋರ್ ಚೋರ್’ (ಕಳ್ಳ ಕಳ್ಳ) ಎಂದು ಕರೆದರು.

ವಿಮಾನ ನಿಲ್ದಾಣದಲ್ಲಿ ದಾರ್ ಅವರನ್ನು ಪಿಕಪ್ ಮಾಡಲು ಬಂದ ಪಿಎಂಎಲ್-ಎನ್‌ನ ವರ್ಜೀನಿಯಾ ಚಾಪ್ಟರ್ ಅಧ್ಯಕ್ಷ  ಬಟ್ ಮತ್ತು ಘೋಷಣೆಗಳನ್ನು ಕೂಗುತ್ತಿದ್ದ ಜನರ ನಡುವೆ ತೀವ್ರ ವಾಗ್ವಾದ ನಡೆಯಿತು ಎಂದು ವರದಿಗಳು ಹೇಳಿವೆ. ಈ ಸಮಯದಲ್ಲಿ, ಬಟ್ ವ್ಯಕ್ತಿಯ ವಿರುದ್ಧ ನಿಂದನೆಗಳನ್ನು ಮಾಡಿದರು. ದಾರ್ ಅವರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ದಾರ್ ಅವರನ್ನು ಸುಳ್ಳುಗಾರ, ಕಳ್ಳ ಎಂದು ಸಂಬೋಧಿಸುತ್ತಿರುವುದು ಕೇಳಿಬರುತ್ತಿದೆ. ಪ್ರತಿಯಾಗಿ ದಾರ್ ಕೂಡ ಆ ವ್ಯಕ್ತಿಯನ್ನು ಸುಳ್ಳುಗಾರ ಎಂದು ಕರೆದರು ಮತ್ತು ಅಧಿಕಾರಿಗಳು ಅವರನ್ನು ರಕ್ಷಿಸಿ ಕರೆದೊಯ್ದರು.

ಪಾಕಿಸ್ತಾನದ ಸಚಿವರೊಬ್ಬರ ಮೇಲೆ ವಿದೇಶಗಳಲ್ಲಿ ಈ ರೀತಿ ಅವಹೇಳನ ನಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಲಂಡನ್‌ನಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಬಂದಿದ್ದ ಸಚಿವರಾದ ಮರ್ಯಮ್ ಔರಂಗಜೇಬ್ ಅವರಿಗೂ ಇದೇ ರೀತಿ ನಿಂದನೆಯ ಘೋಷಣೆ ಎದುರಾಗಿತ್ತು. ಆ ಸಮಯದಲ್ಲಿ ಮರಿಯಮ್ ಕಾಫಿ ಶಾಪ್‌ನಲ್ಲಿದ್ದರು, ಆಗ ಮಹಿಳೆಯರೂ ಸೇರಿದಂತೆ ಕೆಲವು ಪಾಕಿಸ್ತಾನಿಗಳು ಆಕೆಯ ವಿರುದ್ಧ ‘ಚೋರ್-ಚೋರ್’ ಘೋಷಣೆಗಳನ್ನು ಕೂಗಿದ್ದರು. ಘಟನೆಯ ವೀಡಿಯೋ ವೈರಲ್ ಆಗಿತ್ತು.

ಆ ಸಮಯದಲ್ಲಿ ಕೆಲವು ಮಹಿಳೆಯರು ಪಾಕಿಸ್ತಾನದಲ್ಲಿ ಹಿಜಾಬ್ ಮತ್ತು ಇಸ್ಲಾಂ ಬಗ್ಗೆ ದೊಡ್ಡದಾಗಿ ಮಾತನಾಡುವ ಮರ್ಯಮ್‌ ಔರಂಗಜೇಬ್ ಲಂಡನ್‌ನಲ್ಲಿ ತಲೆಯ ಮೇಲೆ ಸ್ಕಾರ್ಫ್ ಧರಿಸಲು ಇಷ್ಟಪಡುವುದಿಲ್ಲ ಎಂದು ಟೀಕಿಸಿದ್ದರು.
ಈ ಎರಡೂ ಘಟನೆಗಳಲ್ಲಿ, ಪಾಕಿಸ್ತಾನಿ ಮಾಧ್ಯಮಗಳು ಘೋಷಣೆಗಳನ್ನು ಕೂಗುವ ವ್ಯಕ್ತಿಗಳನ್ನು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಪಿಟಿಐ ಬೆಂಬಲಿಗರು ಎಂದು ಗುರುತಿಸಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement