ನಮಗೆ 3 ಹೆಂಡತಿಯರಿರ್ತಾರೆ ಮತ್ತು ಪ್ರತಿಯೊಬ್ಬರನ್ನೂ ಗೌರವಿಸ್ತೇವೆ, ಆದರೆ ಹಿಂದೂಗಳು…: ಎಐಎಂಐಎಂ ನಾಯಕನ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶ

ನವದೆಹಲಿ: ಉತ್ತರ ಪ್ರದೇಶದ ಎಐಎಂಐಎಂ ರಾಜ್ಯಾಧ್ಯಕ್ಷ ಶೌಕತ್ ಅಲಿ ಹಿಂದೂ ವಿವಾಹದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ನಮಗೆ ಮೂರು ಮದುವೆಗಳಿವೆ ಎಂದು ಜನರು ಹೇಳುತ್ತಾರೆ. ನಾವು ಎರಡು ಮದುವೆ ಮಾಡಿಕೊಂಡರೂ ಸಮಾಜದಲ್ಲಿ ಇಬ್ಬರ ಹೆಂಡಿರಿಗೂ ಗೌರವ ಕೊಡುತ್ತೇವೆ, ಆದರೆ ನೀವು (ಹಿಂದೂಗಳು) ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಹೊಂದಿರುತ್ತೀರಿ ಮತ್ತು ನೀವು ನಿಮ್ಮ ಹೆಂಡತಿ ಅಥವಾ ಪ್ರೇಯಸಿಯನ್ನು ಗೌರವಿಸುವುದಿಲ್ಲ. ಆದರೆ ನಾವು ಎರಡು ಮದುವೆಗಳನ್ನೂ ಗೌರವದಿಂದ ಇಡುತ್ತೇವೆ ಮತ್ತು ನಮ್ಮ ಮಕ್ಕಳ ಹೆಸರೂ ಪಡಿತರ ಚೀಟಿಯಲ್ಲಿರುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಭಾರತದಲ್ಲಿ ಸುಲ್ತಾನರಿಂದ ಮೊಘಲರವರೆಗಿನ ಮುಸ್ಲಿಂ ಆಡಳಿತ ಉಲ್ಲೇಖಿಸಿದ ಅವರು, ನಾವು 832 ವರ್ಷಗಳ ಕಾಲ ಭಾರತದಲ್ಲಿ ಆಳ್ವಿಕೆ ನಡೆಸಿದ್ದೇವೆ ಮತ್ತು ನಮ್ಮ ಬಾದಶಹರ ಮುಂದೆ ನಿಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಜೀ ಹುಜೂರ್ ಹೇಳಲು ನೀವು ಒತ್ತಾಯಿಸಲ್ಪಟ್ಟಿದ್ದೀರಿ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಜಾಬ್ ನಿಷೇಧ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಹಿಂದುತ್ವ ನಿರ್ಧರಿಸುವುದಿಲ್ಲ, ಆದರೆ ಸಂವಿಧಾನವು ನಿರ್ಧರಿಸುತ್ತದೆ ಎಂದು ಹೇಳಿದರು.
ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಸಂವಿಧಾನ ನಿರ್ಧರಿಸುತ್ತದೆಯೇ ಹೊರತು ಹಿಂದುತ್ವವಲ್ಲ, ಆದರೆ ಬಿಜೆಪಿಯು ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಶೌಕತ್ ಅಲಿ ಹೇಳಿದ್ದಾರೆ.
ಮದರಸಾ, ಲಿಂಚಿಂಗ್, ವಕ್ಫ್ ಮತ್ತು ಹಿಜಾಬ್‌ನಂತಹ ಸಮಸ್ಯೆಗಳು ನಮ್ಮೊಂದಿಗೆ ನಡೆಯುತ್ತಿವೆ ಏಕೆಂದರೆ ನಾವು ಸುಲಭವಾಗಿ ಗುರಿಯಾಗುತ್ತೇವೆ. ಬಿಜೆಪಿ ದುರ್ಬಲವಾದಾಗ ಅವರು ಮುಸ್ಲಿಂ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗಳ ಮೇಲಿನ ನಿಷೇಧವನ್ನು ರದ್ದುಗೊಳಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಗುರುವಾರ ವಿಭಜಿತ ತೀರ್ಪು ನೀಡಿತು. ಹೀಗಾಗಿ ಇದನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಿದೆ. ಆದರೆ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ.

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement