ಹಾಸನ: ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ 9 ಮಂದಿ ಸಾವು

ಹಾಸನ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದ, ಸುಮಾರು 14 ಯಾತ್ರಾರ್ಥಿಗಳಿದ್ದ ಟೆಂಪೋ ಟ್ರಾವೆಲ್ಸ್ ವಾಹನವೊಂದು ಬಾಣಾವರ ಸಮೀಪದ ಚೆಲುವನಹಳ್ಳಿ ಬಳಿ ಅಪಘಾತಕ್ಕೀಡಾಗಿದ್ದು ಟೆಂಪೋ ಟ್ರಾವೆಲ್ಸ್‌ನಲ್ಲಿದ್ದ ಒಂದು ಗಂಡು ಮಗು ಸೇರಿದಂತೆ 9 ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಶನಿವಾರ ರಾತ್ರಿ 10:50ರ ವೇಳೆಗೆ ಈ ಅಫಘಾತ ಸಂಭವಿಸಿದೆ ಎನ್ನಲಾಗಿದೆ.ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳ ದರ್ಶನ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದ ಟೆಂಪೋ ಟ್ರಾವೆಲ್ಸ್‌ಗೆ ಎದುರುಗಡೆ ರಾಂಗ್ ಸೈಡ್ ನಲ್ಲಿ ಬಂದ ಹಾಲಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಆನಂತರ ಕೆಎಸ್‌ಆರ್‌ಟಿಸಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಈ ಭೀಕರ ಅಪಘಾತದಲ್ಲಿ ಒಂದು ಮಗು, ಮೂವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರು ಟೆಂಪೋ ಟ್ರಾವೆಲ್ಸ್ ನಲ್ಲಿ ಪ್ರಯಾಣ ಮಾಡುತ್ತಿದ್ದವರಾಗಿದ್ದು, ಗಾಯಗೊಂಡವರಲ್ಲಿ ಹೆಚ್ಚಿನವರು ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಅಪಘಾತದ ನಂತರ ಹಾಲಿನ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತರನ್ನು ಲೀಲಾವತಿ (50), ಚೈತ್ರ (33), ಸಮರ್ಥ (10), ಡಿಂಪಿ (12), ತನ್ಮಯ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ 9 ಜನರ ಪೈಕಿ 7 ಮಂದಿ ಸಾಲಾಪುರ ಗ್ರಾಮಕ್ಕೆ ಸೇರಿದವರು. ಇತರ ಇಬ್ಬರು ದೊಡ್ಡೇನಹಳ್ಳಿ ಗ್ರಾಮದವರು ಎಂದು ಹೇಳಲಾಗಿದೆ.

ಗಾಯಾಳುಗಳನ್ನು ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಇಬ್ಬರನ್ನು ಅರಸೀಕೆರೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಮುಖ ಸುದ್ದಿ :-   ಇನ್ಫೋಸಿಸ್‌ಗೆ ನೂತನ ಸಾರಥಿ: ಸಲೀಲ್ ಪಾರೇಖ್ ಸ್ಥಾನಕ್ಕೆ ಆಶಿಶ್ ಕುಮಾರ ದಾಸ್ ಸಿಇಒ ಆಗಿ ನೇಮಕ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement