ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಬಂದ ‘ಏರಿಯಲ್ ಲ್ಯಾಡರ್’ : ಇಂದು ಹಸ್ತಾಂತರ

ಬೆಂಗಳೂರು: ಗಗನಚುಂಬಿ ಕಟ್ಟಡಗಳಲ್ಲಿ ಸಂಭವಿಸುವ ಆಗ್ನಿ ಅವಘಡಗಳನ್ನ ನಿಯಂತ್ರಿಸುವ ವಾಹನ ‘ಏರಿಯಲ್ ಲ್ಯಾಡರ್’ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿದೆ.
ಬೆಂಕಿ ಅನಾಹುತ ಸಂಭವಿಸಿದಾಗ ‘ಏರಿಯಲ್ ಲ್ಯಾಡರ್’ ಮೂಲಕ 90 ಮೀಟರ್ ಎತ್ತರದವರೆಗೂ ತಲುಪಿ ಬೆಂಕಿ ನಂದಿಸಬಹುದಾಗಿದೆ.

ಇದನ್ನು ಗುರುವಾರ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. 30 ಕೋಟಿ ರೂ.ಗಳ ವೆಚ್ಚದ ಈ ಏರಿಯಲ್‌ ಲ್ಯಾಡರ್ ಅನ್ನು ಸರ್ಕಾರ ಫಿನ್ಲೆಂಡ್‌ನಿಂದ ತರಿಸಿದ್ದು, ಇದನ್ನು ಬಳಸಲಿರುವ ದೇಶದ 2ನೇ ನಗರ ಬೆಂಗಳೂರು ಆಗಲಿದೆ. ಇದನ್ನು ಬಳಸಿದ ಮೊದಲ ನಗರ ಮುಂಬೈ ಆಗಿದೆ.
ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನ ನಿಯಂತ್ರಿಸಲು ಏರಿಯಲ್ ಲ್ಯಾಡರ್ ಹೆಚ್ಚು ಒರಿಣಾಮಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement