ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ನೂತನ ಅಧ್ಯಕ್ಷ

ನವದೆಹಲಿ: ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಮತ ಎಣಿಕೆಯ ನಂತರ ಈ ಘೋಷಣೆ ಮಾಡಲಾಗಿದೆ. 24 ವರ್ಷಗಳ ನಂತರ ಅವರು ಕಾಂಗ್ರೆಸ್‌ಗೆ ಗಾಂಧಿಯೇತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದರೆ, ಶಶಿ ತರೂರ್ 1,072 ಮತಗಳನ್ನು ಪಡೆದಿದ್ದಾರೆ.
2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷದ ಸೋಲಿನ ನಂತರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಸೋನಿಯಾ ಗಾಂಧಿ ಅವರು ಪಕ್ಷದ ಹಂಗಾಮಿ ಅಧ್ಯಕ್ಷರಾಗಿದ್ದರು. ಈಗ ಮೂರು ವರ್ಷಗಳ ನಂತರ ಚುನಾವಣೆ ನಡೆದಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ “ಅಕ್ರಮ”ಗಳ ಬಗ್ಗೆ ಟೀಮ್ ತರೂರ್ ನೀಡಿದ ದೂರಿನ ನಡುವೆ ಗಾಂಧಿ ಕುಟುಂಬದ ದೀರ್ಘಕಾಲದ ನಿಷ್ಠಾವಂತ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಅಧಿಕೃತ ಘೋಷಣೆಗೂ ಮುನ್ನವೇ ಖರ್ಗೆ ಅವರ ಮನೆಯ ಹೊರಗೆ ಅಭಿನಂದನಾ ಪೋಸ್ಟರ್‌ಗಳು ಕಾಣಿಸಿಕೊಂಡವು.
ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾದ ಮತ ಎಣಿಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುಕ್ತಾಯವಾಯಿತು.
ಸೋಮವಾರ ನಡೆದ ಚುನಾವಣೆಯಲ್ಲಿ 9,915 ಅರ್ಹ ನಾಯಕರಲ್ಲಿ 96 ಪ್ರತಿಶತದಷ್ಟು ಜನರು ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಚಲಾವಣೆಯಾದ ಮತಗಳಲ್ಲಿ ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದರೆ, ಶಶಿ ತರೂರ್ 1,072 ಮತಗಳನ್ನು ಪಡೆದಿದ್ದಾರೆ.

ಫಲಿತಾಂಶ ಪ್ರಕಟವಾಗುವ ಮುನ್ನವೇ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಖರ್ಗೆ ಅವರನ್ನು ವಿಜಯಿ ಎಂದು ಘೋಷಿಸಿದ್ದರು. ಹೊಸ ಅಧ್ಯಕ್ಷರಿಗೆ ವರದಿ ನೀಡುತ್ತೀರಾ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ, “ಹೊಸ ಅಧ್ಯಕ್ಷರು ನನ್ನ ಪಾತ್ರ ಏನು ಎಂಬುದನ್ನು ನಿರ್ಧರಿಸುತ್ತಾರೆ. ಖರ್ಗೆ ಮತ್ತು ಸೋನಿಯಾ ಅವರನ್ನು ಕೇಳಿ” ಎಂದು ಹೇಳಿದರು. ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಮುಖಂಡರು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಧೋಲ್ ಬಾರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಶಶಿ ತರೂರ್ ವಿರುದ್ಧ ಅಭ್ಯರ್ಥಿಯನ್ನು ಹುಡುಕುವ ಬಗ್ಗೆ ಹಲವು ಬಾರಿ ಬದಲಾವಣೆ ಮತ್ತು ಬಿಕ್ಕಟ್ಟುಗಳ ನಂತರ ಖರ್ಗೆ ಅವರನ್ನು ಸ್ಪರ್ಧಿಸುವಂತೆ ಮನವೊಲಿಸಲಾಯಿತು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರೇಸ್ ಪ್ರಾರಂಭವಾಗುವ ಮೊದಲೇ ಕಣದಿಂದ ಹೊರಬಿದ್ದಾಗ ಕೇಂದ್ರ ನಾಯಕರ ಒಂದು ವಿಭಾಗವು ಸ್ಪರ್ಧಿಸಲು ಮನವೊಲಿಸಿದ ನಂತರ ಖರ್ಗೆ ಅವರು ಕೊನೆಯ ಕ್ಷಣದಲ್ಲಿ ಾಧ್ಯಕ್ಷ ಸ್ಥಾನದ ಕಣಕ್ಕೆ ಪ್ರವೇಶಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಮತ ಎಣಿಕೆ ಪ್ರಾರಂಭವಾದ ಕೂಡಲೇ ಶಶಿ ತರೂರ್ ಅವರ ತಂಡವು ಉತ್ತರ ಪ್ರದೇಶದ ಚುನಾವಣಾ ಪ್ರಕ್ರಿಯೆಯಲ್ಲಿ “ಗೊಂದಲಕಾರಿ ಸಂಗತಿಗಳು” ಇವೆ ಎಂದು ಆರೋಪಿಸಿದರು ಮತ್ತು ರಾಜ್ಯದಲ್ಲಿನ ಮತಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ತರೂರ್ ಅವರ ತಂಡವನ್ನು ಪ್ರತಿನಿಧಿಸುವ ಸಲ್ಮಾನ್ ಸೋಜ್ ನಂತರ ಅವರು “ನ್ಯಾಯಯುತವಾದ ತನಿಖೆಯ ಭರವಸೆ ನೀಡಲಾಗಿದೆ” ಎಂದು ಹೇಳಿದರು, ಎಣಿಕೆಯನ್ನು ಮುಂದುವರೆಸಲು ಒಪ್ಪಿಕೊಂಡರು.

ಇಂದು, ಬುಧವಾರ ಬೆಳಿಗ್ಗೆ ಮಿಸ್ತ್ರಿಗೆ ಬರೆದ ಪತ್ರದಲ್ಲಿ ತರೂರ್ ತಂಡವು “ನಮ್ಮ ಅಭಿಯಾನವು ಉತ್ತರ ಪ್ರದೇಶ ರಾಜ್ಯದ ಚುನಾವಣೆಯ ನಡವಳಿಕೆಯಲ್ಲಿನ ಅತ್ಯಂತ ಗಂಭೀರ ಅಕ್ರಮಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತದೆ. ನೀವು ನೋಡುವಂತೆ, ಚುನಾವಣೆ ಉತ್ತರ ಪ್ರದೇಶದ ಪ್ರಕ್ರಿಯೆಯು ವಿಶ್ವಾಸಾರ್ಹತೆ ಮತ್ತು ಸಮಗ್ರತೆ ಹೊಂದಿಲ್ಲ ಎಂದು ಹೇಳಿದೆ. ಉತ್ತರ ಪ್ರದೇಶದಲ್ಲಿ ನಡೆದಿರುವುದು ಸಂಪೂರ್ಣವಾಗಿ ವಿಭಿನ್ನ ಮಟ್ಟದಲ್ಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

4 / 5. 2

ಶೇರ್ ಮಾಡಿ :

  1. sonia hater

    gandhi family rubber stamp, 2000 crores property owner, gandhu karge………….. again president

ನಿಮ್ಮ ಕಾಮೆಂಟ್ ಬರೆಯಿರಿ

advertisement