ಬೆಳಗಾವಿಯಲ್ಲಿ ದುರಂತ: ದೀಪಾವಳಿಗೆ ಬಟ್ಟೆ ಖರೀದಿಸಿ ವಾಪಸ್ಸಾಗುತ್ತಿದ್ದಾಗ ಕುತ್ತಿಗೆಗೆ ಗಾಳಿಪಟದ ದಾರ ಬಿಗಿದು ಐದು ವರ್ಷದ ಮಗು ಸಾವು

posted in: ರಾಜ್ಯ | 0

ಬೆಳಗಾವಿ : ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 5 ವರ್ಷದ ಮಗು ಮೃತಪಟ್ಟ ಘಟನೆ ಇಲ್ಲಿಯ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಇಲ್ಲಿಯ ಹಳೆ ಗಾಂಧಿನಗರ ಬ್ರಿಡ್ಜ್ ಮೇಲೆ ಭಾನುವಾರ ಸಂಜೆ ಬೈಕ್‌ನಲ್ಲಿ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಮೃತಪಟ್ಟ ಮಗುವನ್ನು ವರ್ಧನ್ ಈರಣ್ಣ ಬ್ಯಾಳಿ ಎಂದು ಗುರುತಿಸಲಾಗಿದೆ.
ದೀಪಾವಳಿಗೆ ಬೆಳಗಾವಿಯ ಮಾರ್ಕೆಟ್‌ನಲ್ಲಿ ಬಟ್ಟೆ ಖರೀದಿಸಿ ನಂತರ ವಡಗಾವಿಯ ಮಾವನ ಮನೆಗೆ ಭೇಟಿ ನೀಡಿ ಬಳಿಕ ಹುಕ್ಕೇರಿ ತಾಲೂಕಿನ ಹತ್ತರಗಿಗೆ ತಂದೆಯೊಂದಿಗೆ ಬೈಕ್ ಮೇಲೆ ಹೊರಟಿದ್ದ. ಬೈಕ್‌ನ ಮುಂಭಾಗ ಕುಳಿತಿದ್ದ ಬಾಲಕನ ಕುತ್ತಿಗೆಗೆ ಕಣ್ಣಿಗೆ ಕಾಣಿಸದ ಗಾಳಿಪಟದ ದಾರ ಸುತ್ತಿಕೊಂಡಿದೆ. ಇದು ಮಗುವಿನ ಕುತ್ತಿಗೆಗೆ ಬಿಗಿಯಾದ ಕಾರಣ  ತೀವ್ರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಚಿಕ್ಕಮಗಳೂರು : ದತ್ತ ಪೀಠದಲ್ಲಿ ಡಿಸೆಂಬರ್ 6ರಿಂದ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್‌ ಅನುಮತಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement