ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸ್ಥಳ ಸಿಗದೆ ಕೋಪದಿಂದ ಹೊರಟು ಹೋದ ನಟಿ ರಮ್ಯಾ

posted in: ರಾಜ್ಯ | 0

ರಾಯಚೂರು: ರಾಯಚೂರಿನಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ಪಾದಯಾತ್ರೆ ಬಳಿಕ ಬಸವೇಶ್ವರ ಸರ್ಕಲ್​​ ಬಳಿ ನಡೆದ ಕಾರ್ಯಕ್ರಮದ ವೇದಿಕೆ ಮೇಲೆ ರಮ್ಯಾರಿಗೆ ಜಾಗ ನೀಡದ ಹಿನ್ನೆಲೆಯಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಮುಜುಗರ ಅನುಭವಿಸಬೇಕಾಯಿತು.
ಶನಿವಾರ ರಾಯಚೂರು ನಗರಕ್ಕೆ ಯಾತ್ರೆ ಕಾಲಿಡುತ್ತಿದ್ದಂತೆ, ಭಾರತ ಜೋಡೋ ಪಾದಯಾತ್ರೆಯಲ್ಲಿ ದಿಢೀರ್‌ ಪ್ರತಯ್ಕಷರಾಗಿದ್ದ ನಟಿ ರಮ್ಯಾ ನಂತರ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕಿದ್ದರು.
ನಂತರ ರಾಯಚೂರು ನಗರ ಬಸವೇಶ್ವರ ಸರ್ಕಲ್ ಬಳಿಯ ಮೈದಾನದಲ್ಲಿ ಕಾರ್ನರ್ ಸಂವಾದವಿತ್ತು. ಅಲ್ಲಿ ಸಹಸ್ರಾರು ಜನ ನೆರೆದಿದ್ದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕಾರ್ಯಕ್ರಮದ ವೇದಿಕೆ ಮೇಲೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಉಪಸ್ಥಿತರಿದ್ದರು. ಈ ವೇಳೆ ನಟಿ ರಮ್ಯಾ ವೇದಿಕೆಗೆ ಬಂದರು. ರಾಹುಲ್ ಗಾಂಧಿ ಅವರಿಗೆ ಉನ್ನತ ಪಟ್ಟದ ಭದ್ರತೆ ಇರುವ ಕಾರಣ ಅತಿಥಿಗಳ ಪಟ್ಟಯಲ್ಲಿರುವವರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶವಿತ್ತು. ನಟಿ ರಮ್ಯಾರ ಹೆಸರು ಲಿಸ್ಟ್ ನಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ರಮ್ಮಾ ಅವರಿಗೆ ಭದ್ರಾ ಸಿಬ್ಬಂದಿ ವೇದಿಕೆಗೆ ಬರಲು ಅವಕಾಶ ನೀಡಲಿಲ್ಲ. ರಮ್ಯಾ ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿಕೊಂಡರೂ ಭದ್ರತಾ ಸಿಬ್ಬಂದಿ ಮಾತ್ರ ನಟಿ ರಮ್ಯಾಗೆ ಅವಕಾಶ ನೀಡಲಿಲ್ಲ. ಆಗ ಕೋಪಗೊಂಡ ರಮ್ಯಾ, ರಾಯಚೂರಿನ ಸ್ಥಳೀಯ ಮುಖಂಡರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇದಾದ ಬಳಿಕ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ನಟಿ ರಮ್ಯಾ ಆಕ್ರೋಶದಿಂದ ಅಲ್ಲಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement