ಸೂರ್ಯ ಗ್ರಹಣ ಮೋಕ್ಷ ಕಾಲ :ಸ್ವರ್ಣವಲ್ಲೀ ಮಠದ ಪ್ರಕಟಣೆ

posted in: ರಾಜ್ಯ | 0

ಶಿರಸಿ: ಗ್ರಹಣಮೋಕ್ಷ ಕಾಲಕ್ಕೆ ಉಂಟಾದ ಗೊಂದಲಕ್ಕೆ ಸಂಬಂಧಿಸಿ ಜ್ಯೋತಿಷ್ಯಾಸ್ತ್ರದ ವಿದ್ವಾಂಸರು ನೀಡಿದ ಸ್ಪಷ್ಟ ಅಭಿಪ್ರಾಯ ವಿಳಂಬವಾಗಿ ಸಿಕ್ಕಿದ್ದರಿಂದ ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದ ವಿಷಯದಲ್ಲಿ ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನ ಮರು‌ ಪ್ರಕಟನೆ ನೀಡಿದೆ.
ಜ್ಯೋತಿಷ್ಯಶಾಸ್ತ್ರದ ವಿದ್ವಾಂಸರ ಮತ್ತು ಖಗೋಳ ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯ ತಡವಾಗಿ ಸಿಕ್ಕಿದ್ದರಿಂದ ಈ ತಿದ್ದುಪಡಿಯನ್ನು ಕೊಡಬೇಕಾಗಿ ಬಂದಿದೆ ಎಂದೂ ಶ್ರೀಮಠ ತಿಳಿಸಿದೆ.
ಅಕ್ಟೋಬರ್‌ ೨೫ ಮಂಗಳವಾರ ಸಂಜೆ ೫ ಘಂಟೆ ೪ ನಿಮಿಷಕ್ಕೆ ಸೂರ್ಯಗ್ರಹಣದ ಸ್ಪರ್ಷಕಾಲವಾಗಲಿದೆ. ೫-೪೮ ನಿಮಿಷಕ್ಕೆ ಮಧ್ಯಕಾಲವಾಗಿದೆ. ೬-೨೯ ನಿಮಿಷಕ್ಕೆ ಮೋಕ್ಷಕಾಲವಿದೆ. ಆದ್ಯಂತ ಪುಣ್ಯಕಾಲ ೧ ಘಂಟೆ ೨೫ ನಿಮಿಷಗಳಾಗಿವೆ. ಸೂರ್ಯಾಸ್ತದ ನಂತರವೂ ಗ್ರಹಣ ಮುಂದುವರೆದಿದೆ. ಆದ್ದರಿಂದ ಗ್ರಹಣಮೋಕ್ಷದ ನಂತರ ಸ್ನಾನ ಮಾಡಿ, ಲಘು ಉಪಾಹಾರವನ್ನು ಸ್ವೀಕರಿಸಬಹುದಾಗಿದೆ ಎಂದಿದೆ. ಮರುದಿನ ಬೆಳಿಗ್ಗೆ ಸೂರ್ಯೋದಯದ ನಂತರ ಸೂರ್ಯಬಿಂಬ ನೋಡಿ, ಸ್ನಾನ ಮಾಡಿ ಭೋಜನ ಮಾಡಬೇಕಿದೆ. ಈ
ಎರಡು ಬದಲಾವಣೆಗಳೊಂದಿಗೆ ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ‌ ಮಠಾಧೀಶ‌ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳವರ ಅಪ್ಪಣೆಯಂತೆ ಪ್ರಕಟಣೆ
ನೀಡಲಾಗಿದೆ ಎಂದು ತಿಳಿಸಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್‌ : 1.55 ಲಕ್ಷ ಹೊಸ ಪಡಿತರ ಕಾರ್ಡ್‌ ವಿತರಣೆಗೆ ಸರ್ಕಾರದ ಆದೇಶ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement