ಇಮ್ರಾನ್ ಖಾನ್‌ಗೆ ದೊಡ್ಡ ಹಿನ್ನಡೆ: ಪಾಕಿಸ್ತಾನ ಚುನಾವಣಾ ಆಯೋಗದ ಅನರ್ಹತೆ ಅಮಾನತುಗೊಳಿಸಬೇಕೆಂಬ ಮನವಿ ತಿರಸ್ಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ದೊಡ್ಡ ಹಿನ್ನಡೆಯಾಗಿ, ತೋಶಖಾನಾ ಪ್ರಕರಣದಲ್ಲಿ ತನ್ನ ಅನರ್ಹಗೊಳಿಸಿರುವ ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ನಿರ್ಧಾರವನ್ನು ಅಮಾನತುಗೊಳಿಸಬೇಕು ಎಂಬ ಅವರ ಮನವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಸೋಮವಾರ ತಿರಸ್ಕರಿಸಿದೆ ಎಂದು ಒಸ್ಲಾಮಾಬಾದ್‌ನ ಎಆರ್‌ವೈ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ಪಾಕಿಸ್ತಾನದ ಚುನಾವಣಾ ಆಯೋಗವು ತೋಶಖಾನಾ ಪ್ರಕರಣದ ಉಲ್ಲೇಖದಲ್ಲಿ ಇಮ್ರಾನ್‌ ಖಾನ್ ಅವರನ್ನು ಅನರ್ಹಗೊಳಿಸಿದೆ, ಅವರು ಉಡುಗೊರೆಗಳನ್ನು ಹರಾಜು ಮಾಡಿದ್ದರ ಬಗ್ಗೆ ತಪ್ಪಾದ ಘೋಷಣೆಯನ್ನು ನೀಡಿದ್ದಾರೆ ಮತ್ತು “ಸುಳ್ಳು ಹೇಳಿಕೆಗಳನ್ನು” ನೀಡುವ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿದೆ. ಹೈಕೋರ್ಟ್‌ ಮುಂದೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ, ವಕೀಲರು, ಚುನಾವಣಾ ಆಯೋಗದ ತೀರ್ಪು “ಕಾನೂನಿನ ತತ್ವಗಳಿಗೆ ವಿರುದ್ಧವಾಗಿ ಎಂದು ಹೇಳಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಪಾಕಿಸ್ತಾನದ ಇಸ್ಲಾಮಾಬಾದ್‌ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರು ನಡೆಸಿದ್ದರು. ಚುನಾಔಣಾ ಆಯೋಗದ ನಿರ್ಧಾರವನ್ನು ತಕ್ಷಣವೇ ಅಮಾನತುಗೊಳಿಸಬೇಕೆಂಬ ಇಮ್ರಾನ್ ಖಾನ್ ಅವರ ಮನವಿಯನ್ನು ತಿರಸ್ಕರಿಸಿದರು. ಖಾನ್ ತನ್ನ ಮನವಿಯಲ್ಲಿ ಇಸಿಪಿ ಕಾರ್ಯದರ್ಶಿ, ರಾಷ್ಟ್ರೀಯ ಅಸೆಂಬಲಿ ಸ್ಪೀಕರ್ ಮತ್ತು ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದ್ದರು. ಆರ್ಟಿಕಲ್ 63(1)(ಪಿ) ಅಡಿಯಲ್ಲಿ ತೋಷಖಾನಾ ಉಲ್ಲೇಖದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರ ಅನರ್ಹತೆಯನ್ನು ನ್ಯಾಯಾಲಯ ರದ್ದುಗೊಳಿಸಲಿಲ್ಲ.

ಮುಖ್ಯ ಚುನಾವಣಾ ಆಯುಕ್ತ (CEC) ಸಿಕಂದರ್ ಸುಲ್ತಾನ್ ರಾಜಾ ನೇತೃತ್ವದ ನಾಲ್ಕು ಸದಸ್ಯರ ಪೀಠವು ಇಮ್ರಾನ್ ಖಾನ್ ಅವರ ರಾಷ್ಟ್ರೀಯ ಅಸೆಂಬ್ಲಿ ಸ್ಥಾನವನ್ನು “ಖಾಲಿ” ಎಂದು ಘೋಷಿಸುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಅನುಸರಿಸಬೇಕು. ಪಾಕಿಸ್ತಾನದ ಕಾನೂನಿಗೆ ಪ್ರಧಾನ ಮಂತ್ರಿಗಳು ವಿದೇಶಿ ರಾಜ್ಯದ ಗಣ್ಯರಿಂದ ಸ್ವೀಕರಿಸಿದ ಯಾವುದೇ ಉಡುಗೊರೆಯನ್ನು ರಾಜ್ಯದ ಠೇವಣಿಯಲ್ಲಿ ಸಂರಕ್ಷಿಸಲು ಹಸ್ತಾಂತರಿಸಬೇಕಾಗುತ್ತದೆ. ಖಾನ್ ಅವರು ತಾವು ಪ್ರಧಾನ ಮಂತ್ರಿಯಾಗಿದ್ದಾಗ, ಸ್ವೀಕರಿಸಿದ ಅವರು ದುಬಾರಿ ಉಡುಗೊರೆಗಳನ್ನು ಹರಾಜು ಮಾಡಿದ ಕಾರಣ ಲಕ್ಷಾಂತರ ಪಾಕಿಸ್ತಾನಿ ರೂಪಾಯಿಗಳನ್ನು ಗಳಿಸಿದರು ಎಂದು ಆರೋಪಿಸಲಾಗಿದೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement