140 ಸಂಸದರ ಬೆಂಬಲ ಪಡೆದ ರಿಷಿ ಸುನಕ್ ಸೋಮವಾರದ ವೇಳೆಗೆ ಬ್ರಿಟನ್‌ ಪ್ರಧಾನಿಯಾಗಲೂಬಹುದು…

ಲಂಡನ್: ಬ್ರಿಟನ್‌ನ ಮಾಜಿ ವಿತ್ತ ಸಚಿವ ರಿಷಿ ಸುನಕ್ ಅವರ ಎದುರಾಳಿಗಳಾದ ಬೋರಿಸ್ ಜಾನ್ಸನ್ ಮತ್ತು ಪೆನ್ನಿ ಮೊರ್ಡಾಂಟ್ ಸೋಮವಾರದೊಳಗೆ 100 ಸಂಸದರ ಬೆಂಬಲವನ್ನು ಗೆಲ್ಲಲು ವಿಫಲವಾದರೆ ಸುನಕ್‌ ಅವರು ದೇಶದ ಮುಂದಿನ ಪ್ರಧಾನಿಯಾಗಬಹುದು. ಸುನಕ್ ಈಗಾಗಲೇ ಸಂಸತ್ತಿನ 142 ಸದಸ್ಯರ ಬೆಂಬಲವನ್ನು ಹೊಂದಿದ್ದಾರೆ.
ಇಂಗ್ಲೆಂಡ್​ ಪ್ರಧಾನಿ ಹುದ್ದೆ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಇದೀಗ ಪ್ರಧಾನಿ ರೇಸ್​ನಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬ್ರಿಟನ್ ಪ್ರಧಾನಿ (Britain PM) ಹುದ್ದೆ ರೇಸ್​​ನಿಂದ ಹಿಂದೆ ಸರಿದಿರುವ ಬೋರಿಸ್ ಜಾನ್ಸನ್ ಭಾರತೀಯ ಮೂಲದ ರಿಷಿ ಸುನಕ್​ಗೆ (Rishi Sunak) ಬೆಂಬಲ ನೀಡಿದ್ದಾರೆ. ಇನ್ನೂ ತನ್ನ ಉಮೇದುವಾರಿಕೆಯನ್ನು ಘೋಷಿಸದ ಬೋರಿಸ್ ಜಾನ್ಸನ್ ಕೆಲವು ಉನ್ನತ ಮಟ್ಟದ ಕ್ಯಾಬಿನೆಟ್ ಸದಸ್ಯರನ್ನು ಒಳಗೊಂಡಂತೆ ಸುಮಾರು 59 ಟೋರಿ ಸಂಸದರ ಬೆಂಬಲವನ್ನು ಹೊಂದಿದ್ದರು. ಈ ಬೆಂಬಲದಿಂದ  ಬ್ರಿಟನ್ ಮಾಜಿ ಹಣಕಾಸು ಸಚಿವ ರಿಷಿ ಸುನಕ್​ ಪ್ರಧಾನಿ ಗಾದಿಗೆ ಏರುವ ಹಾದಿ ಮತ್ತಷ್ಟು ಸುಗಮವಾದಂತಾಗಿದೆ. ಈ ಮೂಲಕ ಇನ್ಫೋಸಿಸ್ ನಾರಾಯಣ ಮೂರ್ತಿ- ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗುವ ಸನಿಹದಲ್ಲಿದ್ದಾರೆ.
ಜುಲೈನಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಮತ್ತು ಸೆಪ್ಟೆಂಬರ್‌ನಲ್ಲಿ ಅಧಿಕಾರವನ್ನು ತೊರೆದ ಬೋರಿಸ್ ಜಾನ್ಸನ್ ಪ್ರಸ್ತುತ 59 ಸಂಸದರ ಬೆಂಬಲವನ್ನು ಹೊಂದಿದ್ದಾರೆ. ಪೆನ್ನಿ ಮೊರ್ಡಾಂಟ್ 29 ಸಂಸದ ಬೆಂಬಲ ಹೊಂದಿದ್ದಾರೆ.
ಸೋಮವಾರದ ವೇಳೆಗೆ ಜಾನ್ಸನ್ ಮತ್ತು ಮೊರ್ಡಾಂಟ್ ಇಬ್ಬರೂ 100 ಸಂಸದರ ಬೆಂಬಲವನ್ನು ಗಳಿಸಲು ವಿಫಲವಾದರೆ, ರಿಷಿ ಸುನಕ್ ಪ್ರಧಾನಿಯಾಗುತ್ತಾರೆ.
ಗುರುವಾರ ಘೋಷಿಸಿದ ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಪ್ರಧಾನಿ ಹುದ್ದೆಗೆ ಸ್ಪರ್ಧಸಿಲು ಪಕ್ಷದ ಕನಿಷ್ಠ 100 ಸಂಸದರ ಬೆಂಬಲ ಪಡೆಯಬೇಕಾಗಿದೆ. ಪಕ್ಷದಲ್ಲಿ ಒಟ್ಟು 357 ಸಂಸದರಿದ್ದಾರೆ.
ತ್ರಿಕೋನ ಸ್ಪರ್ಧೆಯಿದ್ದರೆ, ಮುಂದಿನ ಶುಕ್ರವಾರದ ವೇಳೆಗೆ ಹೊಸ ನಾಯಕನನ್ನು ಚುನಾಯಿಸುವುದರೊಂದಿಗೆ ಸುಮಾರು 170,000 ಟೋರಿ ಸದಸ್ಯರಿಂದ ತ್ವರಿತ ಆನ್‌ಲೈನ್ ಮತಕ್ಕಾಗಿ ಅಂತಿಮ ಎರಡು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಸಂಸದರು ಸೋಮವಾರ ಸೂಚಕ ಮತದಾನ ನಡೆಸುತ್ತಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement