ಮುಂಬೈ ಉದ್ಯಮಿಯಿಂದ 230 ಕೆಜಿ ಚಿನ್ನ ಸಮರ್ಪಣೆ: ಕೇದಾರನಾಥ ದೇಗುಲದ ಗೋಡೆಗಳಿಗೆ ಚಿನ್ನದ ಹಾಳೆಗಳ ಲೇಪನ

ಉತ್ತರಾಖಂಡದ ವಿಶ್ವವಿಖ್ಯಾತ ಶ್ರೀ ಕೇದಾರನಾಥ ದೇವಾಲಯದ ಗರ್ಭಗುಡಿಯ ಒಳಗಿನ ಗೋಡೆಗೆ ಈಗ ಚಿನ್ನದ ಹಾಳೆಗಳನ್ನು ಅಳವಡಿಸಲಾಗಿದೆ.. ದೀಪಾವಳಿಯ ಶುಭ ಸಮಯದಲ್ಲಿ ಕೇದಾರನಾಥನ ಗರ್ಭಗುಡಿಯ ಗೋಡೆಯನ್ನು ಚಿನ್ನದಿಂದ ಮಾಡಿದ ಹಾಳೆಗಳನ್ನು ಅಳವಡಿಸಲಾಗಿದ್ದು, ನಂತರ ಇದು ಭಕ್ತರ ಆಕರ್ಷಣೆಯ ಕೇಂದ್ರವಾಗಲಿದೆ.
ಮುಂಬೈನ ಉದ್ಯಮಿಯೊಬ್ಬರು ಈ ಚಿನ್ನದ ಗೋಡೆಯನ್ನು ಮಾಡಲು ಸುಮಾರು 230 ಕೆಜಿ ಚಿನ್ನವನ್ನು ಸಮಪರ್ಣೆ ಮಾಡಿದ್ದಾರೆ. ಈ ಹಿಂದೆ ಕೇದಾರನಾಥ ಧಾಮದ ಗರ್ಭಗುಡಿಯ ಈ ಗೋಡೆಯನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಆದರೆ ಈಗ ಇಲ್ಲಿ ಚಿನ್ನದ ತಗಡಿನಿಂದ ಮಾಡಲಾಗಿದೆ. ಈ ಚಿನ್ನದ ತಗಡಿನ ಮೇಲೆ ಶಂಕರನ ಸಂಕೇತವಾದ ಶಂಖ, ತ್ರಿಶೂಲ, ಡಮರು ಮುಂತಾದ ಚಿಹ್ನೆಗಳನ್ನು ಕೆತ್ತಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇದಲ್ಲದೇ ಈ ಚಿನ್ನದ ಹಾಳೆಯಲ್ಲಿ ಜೈ ಬಾಬಾ ಕೇದಾರ, ಹರಹರ ಮಹಾದೇವ್ ಎಂದು ಬರೆಯಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ನಿರ್ಮಿಸಲಾದ ಈ ಗೋಡೆಯು 230 ಕೆಜಿ ಚಿನ್ನದಿಂದ ಮಾಡಲ್ಪಟ್ಟಿದೆ. ಮುಂಬೈನ ಉದ್ಯಮಿಯೊಬ್ಬರು ಈ ಚಿನ್ನವನ್ನು ನೀಡಿದ್ದಾರೆ.
230 ಕೆಜಿ ಚಿನ್ನವನ್ನು ದಾನ ಮಾಡಿದ ವ್ಯಾಪಾರಿ, ಬೆಳ್ಳಿ ಗೋಡೆಯನ್ನು ನೋಡಿದ ನಂತರ ದೇವರ ಗರ್ಭಗುಡಿಯ ಗೋಡೆಯನ್ನು ಚಿನ್ನದಿಂದ ಏಕೆ ಮಾಡಬಾರದು ಎಂದು ಆಗಾಗ್ಗೆ ಯೋಚಿಸುತ್ತಿದ್ದುದಾಗಿ ಹೇಳಿದ್ದಾರೆ. ಬಳಿಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಚಿನ್ನದ ಗೋಡೆ ಸಿದ್ಧಪಡಿಸಲಾಗಿದೆ.
ಬದರಿಕೇದಾರ ದೇವಸ್ಥಾನ ಸಮಿತಿ ಹಾಗೂ ಉತ್ತರಾಖಂಡ ಸರ್ಕಾರ ಈ ಚಿನ್ನದ ಲೇಪನ ಕಾಮಗಾರಿಗೆ ಅನುಮತಿ ನೀಡಿತ್ತು. ಆದರೆ ಸ್ಥಳೀಯ ಪೂಜಾರಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ದೇವಾಲಯದ ಗೋಡೆಗಳಿಗೆ ಚಿನ್ನದ ಲೇಪನಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಮದ್ಯದ ವ್ಯಾಪಾರ ಬಿಟ್ಟುಬಿಡಿ, 1 ಲಕ್ಷ ರೂ.ಬಹುಮಾನ ಪಡೆಯಿರಿ: ಮದ್ಯ ನಿಷೇಧ ಬಲಪಡಿಸಲು ಹೊಸ ಯೋಜನೆ ಜಾರಿಗೆ ಮುಂದಾದ ಬಿಹಾರ ಸರ್ಕಾರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement