ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಹಲವಾರು ಸಚಿವರನ್ನು ವಜಾಗೊಳಿಸಿದ ರಿಷಿ ಸುನಕ್: ಜೆರೆಮಿ ಹಂಟ್ ಹಣಕಾಸು ಸಚಿವರಾಗಿ ಮುಂದುವರಿಕೆ

ಲಂಡನ್‌: ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್ ಅವರು ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದ ಒಂದು ಗಂಟೆಯೊಳಗೆ ತಮ್ಮ “ಕೆಲಸವು ತಕ್ಷಣವೇ ಪ್ರಾರಂಭವಾಗಲಿದೆ” ಎಂಬ ತಮ್ಮ ಕೆಲಸದ ಮೂಲಕ ಭರವಸೆ ನೀಡಿದ್ದಾರೆ. ಅವರು ತಮ್ಮ ಹೊಸ ಸಂಪುಟದ ಘೋಷಣೆಗೆ ಪೂರ್ವಭಾವಿಯಾಗಿ ಲಿಜ್ ಟ್ರಸ್ ಅವರ ಮಂತ್ರಿಗಳ ತಂಡದ ಹಲವಾರು ಸದಸ್ಯರ ರಾಜೀನಾಮೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದುವರೆಗೆ ನಾಲ್ವರು ಸಚಿವರಿಗೆ ಕೆಳಗಿಳಿಯುವಂತೆ ಸೂಚಿಸಲಾಗಿದೆ. ಅವರಲ್ಲಿ ಬಿಸಿನೆಸ್‌ ಕಾರ್ಯದರ್ಶಿ ಜಾಕೋಬ್ ರೀಸ್-ಮೊಗ್, ಜಸ್ಟೀಸ್‌ ಕಾರ್ಯದರ್ಶಿ ಬ್ರಾಂಡನ್ ಲೂಯಿಸ್,‌ ವರ್ಕ್ ಮತ್ತು ಪೆನ್ಶನ್‌ ಕಾರ್ಯದರ್ಶಿ ಕ್ಲೋಯ್ ಸ್ಮಿತ್ ಮತ್ತು ಅಭಿವೃದ್ಧಿ ಸಚಿವ ವಿಕಿ ಫೋರ್ಡ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆರೆಮಿ ಹಂಟ್ ಅವರು ಹಣಕಾಸು ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಪ್ರಧಾನಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿಯಾಗಿ ತಮ್ಮ ಮೊದಲ ಭಾಷಣದಲ್ಲಿ, ಬಲವಾದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ, ಶಾಲೆಗಳು, ಸುರಕ್ಷಿತ ಬೀದಿಗಳು, ಸಶಸ್ತ್ರ ಪಡೆಗಳನ್ನು ಬೆಂಬಲಿಸುವುದು, ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ಈಡೇರಿಸುವುದಾಗಿ ಹೇಳಿದರು. ಇದು ಪ್ರತಿ ಹಂತದಲ್ಲೂ ಸಮಗ್ರತೆ, ವೃತ್ತಿಪರತೆ ಮತ್ತು ಹೊಣೆಗಾರಿಕೆಯನ್ನು ಹೊಂದಿರುತ್ತದೆ ಎಂದು ಅವರು ಭರವಸೆ ನೀಡಿದರು.
ಯುಕೆ ಪ್ರಸ್ತುತ ಭಾರಿ ಆರ್ಥಿಕ ಕುಸಿತ ಎದುರಿಸುತ್ತಿದೆ, ಅದು ವೇಗವಾಗಿ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ. ಕನ್ಸರ್ವೇಟಿವ್ ಪಕ್ಷವು ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ವಿಮರ್ಶಕರು ಆರೋಪಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement