ಓಲಾ, ಉಬರ್ ಕಂಪನಿಗಳಿಗೆ ಸರ್ಕಾರದ ತಾತ್ಕಾಲಿಕ ದರ ನಿಗದಿ

posted in: ರಾಜ್ಯ | 0

ಬೆಂಗಳೂರು: ಓಲಾ, ಉಬರ್ ಸಂಸ್ಥೆಗಳು ತಾವು ನೀಡುವ ಟ್ಯಾಕ್ಸಿ ಸೇವೆ ಕುರಿತು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆರಂಭಿಕ 2 ಕಿ.ಮೀ.ವರೆಗಿನ ಪ್ರಯಾಣಕ್ಕೆ ಓಲಾ, ಉಬರ್ ಗಳು 100 ರೂ. ವಸೂಲಿ ಮಾಡುತ್ತಿದ್ದು, ಈಗ ರಾಜ್ಯ ಸರ್ಕಾರ ಆರಂಭದ ಪ್ರತಿ 2 ಕಿ.ಮೀ. ಪ್ರಯಾಣಕ್ಕೆ 30 ರೂ. ನಿಗದಿಗೊಳಿಸಿ ಆದೇಶ ಹೊರಡಿಸಿದೆ.
ಇದು ತಾತ್ಕಾಲಿಕ ಆದೇಶವಾಗಿದ್ದು, ಸದ್ಯದಲ್ಲೇ ಈ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಪರಿಷ್ಕೃತ ದರದಲ್ಲಿ ಆರಂಭಿಕ 2 ಕಿ.ಮೀ.ಗಳಿಗೆ 30 ರೂ.ಗಳಿಂದ 45 ರೂ.ಗಳಿಗೆ ಏರಿಸುವ ಪ್ರಸ್ತಾಪವಿದೆ. ಆ ಬಗ್ಗೆ ಚರ್ಚಿಸಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇತ್ತೀಚೆಗೆ, ಓಲಾ, ಉಬರ್ ಕಂಪನಿಗಳ ವಿರುದ್ಧ ಸಮರ ಸಾರಿದ್ದ ಸಾರಿಗೆ ಇಲಾಖೆ ಆ ಎರಡೂ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿ ಕ್ಯಾಬ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ತಾಕೀತು ಮಾಡಿತ್ತು. ಅದರ ವಿರುದ್ಧ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದವು.
“ಅರ್ಜಿದಾರರ ಕಂಪನಿಗಳು ಪರವಾನಗಿ ಪಡೆಯದೆ ಆಟೋ ಸೇವೆ ಒದಗಿಸುತ್ತಿವೆ. ಆದರೆ, ಪರವಾನಗಿ ಪಡೆಯದೆ ಸೇವೆ ಒದಗಿಸುವುದಕ್ಕೆ ಅವಕಾಶ ಇಲ್ಲ. ಹೆಚ್ಚಿನ ಪ್ರಯಾಣ ದರ ಪಡೆಯಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ದರ ನಿಗದಿ ಸಂಬಂಧ ಸರಕಾರ ನಿಯಮ ರೂಪಿಸಿಲ್ಲ ಎಂದು ಅರ್ಜಿದಾರ ಕಂಪೆನಿಗಳು ಹೇಳುತ್ತಿವೆ. ಸೇವೆ ಸ್ಥಗಿತ ಮಾಡುವುದರಿಂದ ಅಂತಿಮವಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ,” ಹೈಕೋರ್ಟ್‌ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತ್ತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement