ಟ್ವಿಟರ್​ಗೆ ಕಂಟೆಂಟ್ ಮಾಡರೇಷನ್ ಕೌನ್ಸಿಲ್ ಸ್ಥಾಪಿಸುವುದಾಗಿ ಘೋಷಿಸಿದ ಎಲಾನ್ ಮಸ್ಕ್

ನ್ಯೂಯಾರ್ಕ್: ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್​ನ (Twitter) ನೂತನ ಮಾಲೀಕ, ವಿಶ್ವದ ಅತಿ ಶ್ರೀಮಂತ ಎಲಾನ್ ಮಸ್ಕ್ ಹೊಸ ಘೋಷಣೆ ಮಾಡಿದ್ದು, ಟ್ವಿಟರ್​ಗೆ ‘ಕಂಟೆಂಟ್ ಮಾಡರೇಷನ್ ಕೌನ್ಸಿಲ್’ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.
ಈ ಮಂಡಳಿಯು ಪ್ರಮುಖ ಕಂಟೆಂಟ್​ಗಳು ಮತ್ತು ಖಾತೆ ಮರುಸ್ಥಾಪನೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿ ಖರೀದಿಸುವ 44 ಶತಕೋಟಿ ಡಾಲರ್ ಒಪ್ಪಂದ ಪೂರ್ಣಗೊಂಡ ಬೆನ್ನಲ್ಲೇ ಮಸ್ಕ್ ಅವರು ಕಂಪನಿಯ ಮಾಲೀಕತ್ವ ಪಡೆದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.
ವೈವಿಧ್ಯಮಯ ದೃಷ್ಟಿಕೋನದೊಂದಿಗೆ ಕಂಟೆಂಟ್ ಮಾಡರೇಷನ್ ಕೌನ್ಸಿಲ್ ಅನ್ನು ಟ್ವಿಟರ್ ಸ್ಥಾಪಿಸಲಿದೆ. ಈ ಹಿಂದೆ ಕಂಟೆಂಟ್ ಬಗ್ಗೆ ನಿರ್ಧಾರ ಕೈಗೊಳ್ಳಲು ಟ್ವಿಟರ್​ನಲ್ಲಿ ವ್ಯವಸ್ಥೆ ಇರಲಿಲ್ಲ ಎಂದು ಅವರು ಶುಕ್ರವಾರ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಟ್ವಿಟರ್​ ಕಂಟೆಂಟ್ ವಿಚಾರಕ್ಕೆ ಸಂಬಂಧಿಸಿ ಹಲವು ಊಹಾಪೋಹಗಳು ಹರಿದಾಡಿದ್ದವು.

ಇದಕ್ಕೆ ಸ್ಪಷ್ಟನೆ ನೀಡಿ ಶನಿವಾರ ಟ್ವೀಟ್ ಮಾಡಿರುವ ಮಸ್ಕ್, ನಾವಿನ್ನೂ ಟ್ವಿಟರ್​ನ ಕಂಟೆಂಟ್ ಮಾಡರೇಷನ್ ನಿಯಮಗಳಲ್ಲಿ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.ಕಂಟೆಂಟ್ ಮಾಡರೇಷನ್ ಕೌನ್ಸಿಲ್’ ಹೇಗಿರಲಿದೆ? ಯಾವ ರೀತಿಯಲ್ಲಿ ಕಾರ್ಯಾಚರಿಸಲಿದೆ ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಎಲಾನ್ ಮಸ್ಕ್ ಅವರು ಸುಮಾರು 44 ಶತಕೋಟಿ ಡಾಲರ್​ಗೆ ಟ್ವಿಟರ್ ಅನ್ನು ಖರೀದಿ ಮಾಡಿರುವುದು ಶುಕ್ರವಾರ ಬೆಳಿಗ್ಗೆ ಅಧಿಕೃತಗೊಂಡಿತ್ತು. ಖರೀದಿ ಪ್ರಕ್ರಿಯೆ ಅಧಿಕೃತಗೊಂಡ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡಿದ್ದ ಮಸ್ಕ್, ‘ಬರ್ಡ್ ಈಸ್ ಫ್ರೀಡ್’ ಎಂದು ಬರೆದಿದ್ದರು. ಬೆನ್ನಲ್ಲೇ, ಸಿಇಒ ಪರಾಗ್ ಅಗರ್​ವಾಲ್, ಟ್ವಿಟರ್​ನ ಸಿಎಫ್​ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಕಾನೂನು ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ವಜಾ ಮಾಡಿದ್ದರು. ವಜಾಗೊಳಿಸಿರುವ ಮೂವರು ಉನ್ನತ ಉದ್ಯೋಗಿಗಳಿಗೆ ಟ್ವಿಟರ್ ನಿರ್ಗಮನ ಮೊತ್ತವಾಗಿ ಒಟ್ಟು ಅಂದಾಜು 800 ಕೋಟಿ ರೂ. ನೀಡಬೇಕಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement