ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ಹಾರಿ ಬಿದ್ದ ಮಗು, ಪತ್ನಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪುಣೆ: ಕಾರು-ಬೈಕ್‌ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಮಗು ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದ ಭಯಾನಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಬೈಕ್ ಸವಾರ ತಿರುವು ತೆಗೆದುಕೊಳ್ಳುವ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಹಾಗೂ ಮಗು ಮೇಲೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಘಟನೆ ಸಮೀಪದ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಈ ಅನಾಹುತದಲ್ಲಿ ಬೈಕ್‌ನಿಂದ ಕೆಳಗೆ ಬಿದ್ದ ತಾಯಿ ಮಗು ಪವಾಡಸದೃಶವಾಗಿ ಪಾರಾಗಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಬೆಲ್ಹೆ ಜೆಜುರಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಪಕ್ಕದ ರಸ್ತೆಯಿಂದ ಬಂದ ಬೈಕ್ ಸವಾರ ಮುಂದೆ ಬರುತ್ತಿದ್ದ ಕಾರನ್ನು ಗಮನಿಸದೇ ಬೈಕ್‌ ಟರ್ನ್‌ ಪಡೆಯಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ ಬರುತ್ತಿದ್ದ ಬಿಳಿ ಬಣ್ಣದ ವ್ಯಾಗನಾರ್ ಕಾರು ಬೈಕ್‌ಗೆ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿದೆ. ಕಾರು ನಿಲ್ಲಿಸಿದ ಚಾಲಕ ಕೆಳಗಿಳಿದು ಬಂದು ಬೈಕ್‌ನಿಂದ ಬಿದ್ದವರ ಕ್ಷೇಮ ವಿಚಾರಿಸಿದ್ದಾನೆ. ಈ ರಸ್ತೆ ಇತ್ತೀಚಿಗೆ ದುರಸ್ತಿಗೊಂಡಿದ್ದು, ಇದಾದ ಬಳಿಕ ಇಲ್ಲಿ ಅಪಘಾತಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಇದೆಂಥ ನ್ಯಾಯ...ಐದು ವರ್ಷದ ಬಾಲಕಿಯ ಅತ್ಯಾಚಾರ ಆರೋಪಿಗೆ ಕೇವಲ ಐದು ಬಸ್ಕಿ ಶಿಕ್ಷೆ....!

ಕೆಲ ದಿನಗಳ ಹಿಂದೆ ಸುಮಾರು 32 ಜನ ತೀರ್ಥಯಾತ್ರಿಗಳು ಪಾದಯಾತ್ರೆ ಮೂಲಕ ಕೊಲ್ಲಾಪುರದ ಜಿಲ್ಲೆಯ ಜತ್ತರ್ವಾಡಿ ಗ್ರಾಮದಿಂದ ಪಂಡರಪುರಕ್ಕೆ ಹೊರಟಿದ್ದರು. ಸಂಗೋಲಾ ತಲುಪುವ ವೇಳೆ ವೇಗವಾಗಿ ಬಂದ ಸ್ಪೋರ್ಟ್ಸ್‌ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇವರಿಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿತ್ತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement