ಪದ್ಮಭೂಷಣ ಪುರಸ್ಕೃತೆ, ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಗಾಂಧಿವಾದಿ ಇಳಾ ಭಟ್ ನಿಧನ

ನವದೆಹಲಿ: ಹೆಸರಾಂತ ಗಾಂಧಿವಾದಿ ಮತ್ತು ಸಣ್ಣ ಹಣಕಾಸು ಕಾರ್ಯಕರ್ತೆ, ಪದ್ಮಭೂಷಣ ಪುರಸ್ಕೃತೆ ಇಳಾ ಭಟ್ ಬುಧವಾರ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ವಕೀಲೆಯೂ ಆಗಿದ್ದ ಇಳಾ ಭಟ್ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದ್ದರು. ಇಳಾ ಭಟ್ ಅವರು ಗಾಂಧಿ ತತ್ವ ಮತ್ತು ಚಿಂತನೆಯಿಂದ ಆಳವಾಗಿ ಪ್ರಭಾವಿತರಾಗಿದ್ದರು. ಅವರ ಅಜ್ಜ 1930 ರಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು, ಬ್ರಿಟಿಷರು ಉಪ್ಪು ತಯಾರಿಸುವುದನ್ನು ನಿಷೇಧಿಸಿದ್ದನ್ನು ವಿರೋಧಿಸಿದ್ದರು.ಮಹಿಳೆಯ ಆರ್ಥಿಕ ಸಬಲೀಕರಣದ ಪರವಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಸ್ವ ಉದ್ಯೋಗ ಮಹಿಳೆಯರ ಸಂಸ್ಥೆ (ಸೇವಾ) ಅನ್ನು ಸ್ಥಾಪಿಸಿ, ಅದರ ನೇತೃತ್ವ ವಹಿಸಿದ್ದರು. ಮಹಿಳೆಯರ ಆರ್ಥಿಕ ಕಲ್ಯಾಣಕ್ಕಾಗಿ ಅವರು ದೇಶದ ಮೊದಲ ಮಹಿಳಾ ಬ್ಯಾಂಕ್ ಕೋ ಆಪರೇಟಿವ್ ಬ್ಯಾಂಕ್ ಆಫ್ ಸೇವಾ ಅನ್ನು 1973ರಲ್ಲಿ ಸ್ಥಾಪಿಸಿದರು. 1979ರಲ್ಲಿ ಮಹಿಳಾ ವಿಶ್ವ ಬ್ಯಾಂಕಿಂಗ್ ಸಹ ಸಂಸ್ಥಾಪಕರಾಗಿದ್ದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಪದ್ಮಭೂಷಣ ಪುರಸ್ಕೃತೆ ಮತ್ತು ಮಹಿಳಾ ಹಕ್ಕುಗಳ ಪ್ರವರ್ತಕರು. ಅವರು ತಳಮಟ್ಟದ ಉದ್ಯಮಶೀಲತೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಅವರ ಅಸಾಧಾರಣ ಕೊಡುಗೆ ಯಾವಾಗಲೂ ಸ್ಫೂರ್ತಿದಾಯಕ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ದೇಶದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರೀಗೆ 1985ರಲ್ಲಿ ಪಾತ್ರರಾಗಿದ್ದರು. 1986ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ಭೂಷಣ ಒಲಿದಿತ್ತು. ಉದ್ಯಮಶೀಲತೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮಾಡಿದ ಪ್ರಯತ್ನಗಳಿಗಾಗಿ 2011ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿ ದೊರಕಿತ್ತು. 1977ರಲ್ಲಿ ಅವರು ಸಮುದಾಯ ನಾಯಕತ್ವಕ್ಕಾಗಿ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದಿದ್ದರು.
‘ಮೃದು ಕ್ರಾಂತಿಕಾರಿ’ ಎಂದೇ ಹೆಸರಾದ ಸಣ್ಣ ಹಣಕಾಸು ಚಳವಳಿಯಲ್ಲಿ ತೊಡಗಿಕೊಂಡ ಇಳಾ ಭಟ್ ಆರಂಭದ ನಾಯಕರಲ್ಲಿ ಒಬ್ಬರಾಗಿದ್ದರು. ಮಹಿಳೆಯರನ್ನು ಆರ್ಥಕವಾಗಿ ಸುಶಿಕ್ಷಿತರನ್ನಾಗಿಸುವುದು ಮತ್ತು ಸಬಲೀಕರಣಗೊಳಿಸುವುದು ಅವರ ಪ್ರಾಥಮಿಕ ಉದ್ದೇಶವಾಗಿತ್ತು. ರಾಕ್‌ಫೆಲ್ಲರ್ ಫೌಂಡೇಷನ್‌ನಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಸಮಯ ಟ್ರಸ್ಟಿಯಾಗಿದ್ದರು.

ಇಂದಿನ ಪ್ರಮುಖ ಸುದ್ದಿ :-   2023ರ ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ ರೈಲುಗಳ ಘೋಷಣೆ ಸಾಧ್ಯತೆ : ವರದಿ

ಇಳಾ ಭಟ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಟ್ ಅವರು ಸ್ಫೂರ್ತಿದಾಯಕ ಕೊಡುಗೆಯನ್ನು ಬಿಟ್ಟುಹೋಗಿದ್ದಾರೆ ಎಂದು ಹೇಳಿದ್ದಾರೆ.
ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದ ಎಲಾ ಭಟ್ ಅವರು 1955 ರಲ್ಲಿ ಅಹಮದಾಬಾದ್‌ನ ಜವಳಿ ಕಾರ್ಮಿಕ ಸಂಘದ (ಟಿಎಲ್‌ಎ) ಕಾನೂನು ವಿಭಾಗಕ್ಕೆ ಸೇರಿದರು. ಇಳಾ ಭಟ್ 1972ರಲ್ಲಿ ಬಡ, ಸ್ವಯಂ ಉದ್ಯೋಗಿ ಮಹಿಳಾ ಕಾರ್ಮಿಕರ ಸಂಘಟನೆಯಾದ ಸೇವಾ (SEWA) ಸ್ಥಾಪಿಸಿದರು ಮತ್ತು 1972ರಿಂದ 1996 ರವರೆಗೆ ಅದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ಅವರು ಅಂತಾರಾಷ್ಟ್ರೀಯ ಕಾರ್ಮಿಕ ಮತ್ತು ಮಹಿಳಾ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ಚಳುವಳಿಗಳಲ್ಲಿ ಭಾಗಿಯಾಗಿದ್ದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement