ಮೃಗಾಲಯದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಒಂದು ವಾರದ ನಂತರ ತಾನಾಗಿಯೇ ಮೃಗಾಲಯಕ್ಕೆ ಮರಳಿ ಬಂದ ಕಾಳಿಂಗ ಸರ್ಪ…!

ಹೆಲ್ಸಿಂಕಿ: ಸ್ವೀಡಿಷ್ ಮೃಗಾಲಯದಲ್ಲಿ ತಾನಿದ್ದ ಸ್ಥಳದಿಂದ ಒಂದು ವಾರಗಳ ಕಾಲ ತಪ್ಪಿಸಿಕೊಂಡಿದ್ದ ವಿಷಪೂರಿತ 2.2 ಮೀಟರ್ (7 ಅಡಿ) ಕಾಳಿಂಗ ಸರ್ಪವು ಅಚ್ಚರಿಯೆಂಬಂತೆ ತಾನಾಗಿಯೇ ಮನೆಗೆ ಮರಳಿ ಬಂದಿದೆ..!
“ಹೌದಿನಿ ಎಂಬ ಹೆಸರಿನ ಈ ಕಾಳಿಂಗ ಸರ್ಪವು ಭೂಚರಾಲಯಕ್ಕೆ ಪುನಃ ಅಆದಗಿಯೇ ಮರಳಿ ಬಂದಿದೆ” ಎಂದು ಸ್ಕಾನ್ಸೆನ್ ಅಕ್ವೇರಿಯಂನ ಸಿಇಒ ಜೋನಾಸ್ ವಾಲ್ಸ್ಟ್ರೋಮ್ ಸ್ವೀಡಿಷ್ ಸಾರ್ವಜನಿಕ ಪ್ರಸಾರಕ SVT ಗೆ ತಿಳಿಸಿದ್ದಾರೆ.
ಮಾರಣಾಂತಿಕ ಹಾವು, ಸ್ಕಾನ್‌ಸೆನ್ ಬಯಲು ಮ್ಯೂಸಿಯಂನಿಂದ ಅಕ್ಟೋಬರ್ 22 ರಂದು ಅಕ್ವೇರಿಯಂನಲ್ಲಿನ ಗಾಜಿನ ಆವರಣದ ಸೀಲಿಂಗ್‌ನಲ್ಲಿ ಬೆಳಕಿನ ಫಿಕ್ಚರ್ ಮೂಲಕ ತಪ್ಪಿಸಿಕೊಂಡಿತ್ತು,
ಎಕ್ಸ್-ರೇ ಮಷಿನ್‌ ಸಹಾಯದಿಂದ ತೀವ್ರವಾದ ಹುಡುಕಾಟದ ನಂಯತರ “ಹೌದಿನಿ” ಕಾಳಿಂಗ ಸರ್ಪವು ಈ ವಾರದ ಆರಂಭದಲ್ಲಿ ಎರಡು ಗೋಡೆಗಳ ನಡುವಿನ ಸೀಮಿತ ಜಾಗದಲ್ಲಿ ಕಂಡುಬಂದಿತ್ತು.

ಅದನ್ನು ಹಿಡಿಯಲು ಹಾವು ಅಡಗಿದ್ದ ಗೋಡೆಗಳಿಗೆ ರಂಧ್ರಗಳನ್ನು ಕೊರೆಯಲಾಯಿತು. ಆದರೆ ಭಾನುವಾರ ಎಕ್ಸ್-ರೇ ಕ್ಯಾಮೆರಾಗಳ ಕಣ್ಣೋಟದಿಂದ ಕಾಳಿಂಗ ಸರ್ಪ ಕಣ್ಮರೆಯಾಗಿತ್ತು. ಅದು ಎಲ್ಲ ಹೋಯಿತೆಂದು ಮತ್ತೆ ಚಿಂತೆಯಾಗಿತ್ತು. ಆದರೆ ಕಾಳಿಂಗ ಸರ್ಪವು ತನ್ನ ಸ್ವಾತಂತ್ರ್ಯ ಪಡೆಯುವ ದಾರಿಯನ್ನು ಬಿಟ್ಟು ಪುನಃ ಮೃಗಾಲಯಕ್ಕೆ ಮರಳಿ ಬಂದಿದೆ.
ಗೋಡೆಗಳಲ್ಲಿನ ಎಲ್ಲಾ ರಂಧ್ರಗಳು ಹೌದಿನಿಗೆ ಇದು ತುಂಬಾ ಒತ್ತಡವನ್ನುಂಟುಮಾಡಿತು, ಆದ್ದರಿಂದ ಅದು ಮತ್ತೆ ಮನೆಗೆ ಮರಳಿ ಬಂದಿದೆ ಎಂದು ವಾಲ್ಸ್ಟ್ರೋಮ್ SVT ಗೆ ತಿಳಿಸಿದರು. ಕಟ್ಟಡದಿಂದ ಹೊರಬಂದಿದ್ದರೆ ಹಾವು ತಂಪಾದ ವಾತಾವರಣದಲ್ಲಿ ಉಳಿಯುತ್ತಿರಲಿಲ್ಲ ಎಂದು ಮೃಗಾಲಯ ಹೇಳಿದೆ.
ಕಾಳಿಂಗ ಸರ್ಪಗಳು 5.5 ಮೀಟರ್ (18 ಅಡಿ) ಉದ್ದದವರೆಗೆ ಬೆಳೆಯುತ್ತವೆ ಮತ್ತು ಮುಖ್ಯವಾಗಿ ಭಾರತ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement