ಕಾಲುವೆಯ ಕಂಬದ ದುರಸ್ತಿ ಕಾರ್ಯ ಚುರುಕಿಗೆ ಪಟ್ಟು: ಸ್ಥಳದಲ್ಲೇ ಸಚಿವ ಶೀರಾಮುಲು ವಾಸ್ತವ್ಯ

ಬಳ್ಳಾರಿ: ತಾಲೂಕಿನ ಬರದಾನಹಳ್ಳಿ ಸಮೀಪದ ವೇದಾವತಿ ನದಿಯ ಸೇತುವೆಗೆ ಅಂಟಿಕೊಂಡಂತೆ ತುಂಗಭದ್ರಾ ನದಿಯ ಎಲ್ಎಲ್‌ಸಿ ಕಾಲುವೆಯಿದ್ದರೂ ವೇದಾವತಿ ನದಿಯ ಸೇತುವೆಯ ಪಿಲ್ಲರ್‌ಗಳು ಕುಸಿದ ಪರಿಣಾಮ ಎಲ್ಎಲ್‌ಸಿ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಅಕ್ಟೋಬರ್ 13ರಿಂದ ರೈತರ ಜಮೀನುಗಳಿಗೆ ನೀರಿಲ್ಲದ ಕಾರಣ ಬೆಳೆಗಳು ಒಣಗುತ್ತಿವೆ.
ತುಂಗಭದ್ರಾ ಜಲಾಶಯದ ನೀರು ನಂಬಿಕೊಂಡು ಭತ್ತ, ಮೆಣಿಸಿನಕಾಯಿ ಮೊದಲಾದ ಬೆಳೆ ಬೆಳೆದವರಿಗೆ ನೀರಿಲ್ಲದಾಗಿದೆ. ಹೀಗಾಗಿ ಸೇತುವೆಯ ಪಿಲ್ಲರ್ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಚಿವ ಶ್ರೀರಾಮುಲು ನಿನ್ನೆ(ನ.1)ಯಿಂದ ಬರದಾನಹಳ್ಳಿ ಬಳಿಯ ಸೇತುವೆಯ ಪಕ್ಕದಲ್ಲೇ ವಾಸ್ತವ್ಯ ಹೂಡಿದ್ದಾರೆ. ರಾತ್ರಿ ನದಿ ಪಕ್ಕದಲ್ಲೇ ಮಲಗಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.

ರೈತರ ಜಮೀನುಗಳಿಗೆ ನೀರು ಹರಿಯುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಶ್ರೀರಾಮುಲು ನದಿ ದಡದಲ್ಲಿ ಮಲಗಿ ಬುಧವಾರ ಮುಂಜಾನೆ ಶಿವಪೂಜೆ ಅಲ್ಲಿಯೇ ನಡೆಸಿದ್ದಾರೆ. ಸಚಿವರು ಸ್ಥಳದಲ್ಲೇ ವಾಸ್ತ್ವಯ ಮಾಡಿದ ಪರಿಣಾಮ ಟಿಬಿ ಬೋರ್ಡ್ ಕಾಮಗಾರಿಯನ್ನು ಚುರುಕುಗೊಳಿಸಿದೆ.
ಬುಧವಾರ ಬೆಳಗಿನ ಜಾವ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ನಾಗೇಂದ್ರ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ರೈತರ ಜಮೀನುಗಳಿಗೆ ನೀರು ಹರಿಸಿಯೇ ಸ್ಥಳದಿಂದ ಹೋಗುವುದಾಗಿ ಶಾಸಕ ನಾಗೇಂದ್ರ ಸಹ ಪಟ್ಟು ಹಿಡಿದು ಕುಳಿತಿದ್ದಾರೆ. ಈಗಾಗಲೇ ಸೇತುವೆ ದುರಸ್ತಿ ಕಾರ್ಯ ಭರದಿಂದ ಸಾಗಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement