ಬೀದರ: ಭೀಕರ ರಸ್ತೆ ಅಫಘಾತದಲ್ಲಿ ಆರು ಕೂಲಿಕಾರ್ಮಿಕ ಮಹಿಳೆಯರು ಸಾವು

ಬೀದರ: ಟ್ರಕ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಐವರು ಮಹಿಳೆಯರು ಮೃತಪಟ್ಟ ಘಟನೆ ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಐವರು  ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ್ದಾರೆ. ಇನ್ನುಳಿದ 6 ಮಂದಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಭಾವತಿ (36), ಯಾದಮ್ಮ (40), ಗುಂಡಮ್ಮ (52), ಜಕ್ಕಮ್ಮ (32), ರುಕ್ಮಿಣಿ (60) ಸಾವಿಗೀಡಾದ ದುರ್ವೈವಿಗಳಾಗಿದ್ದಾರೆ. ಮತ್ತೊಬ್ಬ ಮೃತರ ಹೆಸರು ತಿಳಿದು ಬಂದಿಲ್ಲ.ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಹೆಸರು ತಿಳಿದುಬರಬೇಕಿದೆ. ಈ ಮಹಿಳೆಯರು ಉಡುಬಾಳು ಗ್ರಾಮದರು ಎಂದು ಹೇಳಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ  ಮಹಿಳೆಯರು ಇದೇ ಗ್ರಾಮದವರು ಎನ್ನಲಾಗಿದೆ. ಇದರಲ್ಲಿ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಆಟೋದಲ್ಲಿ ೧೭ ಪ್ರಯಾಣಿಕರಿದ್ದರು ಎನ್ನಲಾಗಿದೆ.  ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement