ಹಿಜಾಬ್ ವಿರೋಧಿ ಪ್ರತಿಭಟನೆ ಭಾಗವಾಗಿ ಇರಾನಿಯನ್ನರು ಧರ್ಮಗುರುಗಳ ತಲೆಯಿಂದ ಪೇಟ ತೆಗೆಯುತ್ತಿರುವ ವೀಡಿಯೊಗಳು ವೈರಲ್‌

ಇರಾನ್‌ನಲ್ಲಿ 22 ವರ್ಷದ ಮಹ್ಸಾ ಅಮಿನಿಯ ಸಾವಿನ ನಂತರ ಪ್ರತಿಭಟನೆಗಳು ಮುಂದುವರೆದಿದ್ದು, ಯುವ ಇರಾನಿಯನ್ನರು ಈಗ ಪ್ರತಿಭಟನೆಯ ಭಾಗವಾಗಿ ಮೌಲ್ವಿಗಳ ತಲೆಯ ಪೇಟವನ್ನು ತೆಗೆದುಹಾಕುತ್ತಿರುವ ಘಟನೆಗಳ ವೀಡಿಯೊಗಳು ಹೊರಹೊಮ್ಮುತ್ತಿವೆ. ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯ ಭಾಗವಾಗಿ ಶಾಲಾ ಬಾಲಕಿಯರು ಮತ್ತು ಹುಡುಗರು ಧರ್ಮಗುರುಗಳ ಪೇಟವನ್ನು ತಲೆಯಿಂದ ತೆಗೆದುಹಾಕಿ ಓಡಿಹೋಗುತ್ತಿರುವ ಹಲವಾರು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಒಂದು ವೈರಲ್ ಕ್ಲಿಪ್‌ನಲ್ಲಿ, ಯುವತಿಯೊಬ್ಬಳು ಧರಮಗುರುವಿನ ಹಿಂದೆ ಖಾಲಿ ಬೀದಿಯಲ್ಲಿ ಓಡಿಕೊಂಡು ಹೋಗುತ್ತಿರುವುದನ್ನು ಮತ್ತು ನಂತರ ಓಡುತ್ತಲೇ ಧರ್ಮಗುರುವಿನ ಪೇಟವನ್ನು ತಲೆಯಿಂದ ತೆಗೆದು ಹಾಕುವುದನ್ನು ಕಾಣಬಹುದು. ಹುಡುಗಿ ಹಿಂತಿರುಗಿ ನೋಡದೆ ಅಲ್ಲಿಂದ ಓಡಿದ್ದಾಳೆ. ನಂತರ ಧರ್ಮಗುರು ತನ್ನ ಬಿದ್ದ ಪೇಟವನ್ನು ನೆಲದಿಂದ ತೆಗೆದುಕೊಳ್ಳುವುದನ್ನು ನೋಡಬಹುದು.

ಆಡಳಿತವು ನೂರಾರು ಅಮಾಯಕ ಪ್ರತಿಭಟನಾಕಾರರನ್ನು ಕೊಂದ ನಂತರ ಧರ್ಮಗುರುಗಳ ಪೇಟವನ್ನು ತೆಗೆದುಹಾಕುವುದು ಪ್ರತಿಭಟನೆಯ ಕ್ರಿಯೆಯಾಗಿ ಮಾರ್ಪಟ್ಟಿದೆ” ಎಂದು ವೀಡಿಯೊದ ಶೀರ್ಷಿಕೆ ಓದುತ್ತದೆ.
ಮತ್ತೊಂದು ಕ್ಲಿಪ್‌ನಲ್ಲಿ, ಒಬ್ಬ ಧರ್ಮಗುರು ರಸ್ತೆಯ ಮಧ್ಯದಿಂದ ತನ್ನ ಪೇಟವನ್ನು ಎತ್ತಿಕೊಳ್ಳುತ್ತಿರುವುದು ಕಂಡುಬಂದಿದೆ. “ಧರ್ಮಗುರುಗಳ ಪೇಟವನ್ನು ತೆಗೆದುಹಾಕುವುದು ಇರಾನಿನ ಹದಿಹರೆಯದವರಿಗೆ ದೈನಂದಿನ ದಿನಚರಿಯಾಗಿ ಮಾರ್ಪಟ್ಟಿದೆ” ಎಂದು ಪೋಸ್ಟ್‌ನ ಶೀರ್ಷಿಕೆ ಓದುತ್ತದೆ. ಡೈಲಿ ಟೆಲಿಗ್ರಾಫ್ ಅನ್ನು ಉಲ್ಲೇಖಿಸಿ, ದ ಸ್ಟಫ್ ವರದಿ ಮಾಡಿದೆ..

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

https://twitter.com/noriraq41/status/1588241645446856707?ref_src=twsrc%5Etfw%7Ctwcamp%5Etweetembed%7Ctwterm%5E1588241645446856707%7Ctwgr%5E33d5030465e9dba36c64012537e983c7ebc9ad8e%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fvideo-iranians-knock-turbans-off-clerics-head-as-part-of-anti-hijab-protests-3490222

ಕಟ್ಟುನಿಟ್ಟಿನ ಇಸ್ಲಾಂ ಧಾರ್ಮಿಕತೆ ಜಾರಿಯಲ್ಲಿರುವ ಇರಾನ್‌ನಲ್ಲಿ ಹಿಜಾಬ್ ಅನ್ನು ಸರಿಯಾಗಿ ಧರಿಸದ ಕಾರಣಕ್ಕಾಗಿ ಬಂಧಿಸಲ್ಪಟ್ಟ ನಂತರ ಇರಾನ್‌ನ ನೈತಿಕತೆಯ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟ 22 ವರ್ಷದ ಮಹ್ಸಾ ಅಮಿನಿಯ ಸಾವಿನ ನಂತರ ಭುಗಿಲೆದ್ದ ಪ್ರತಿಭಟನೆಯಲ್ಲಿ ನೂರಾರು ಜನರು ಇರಾನ್ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ.
ಆದರೆ, ಪ್ರತಿಭಟನಾಕಾರರು ಬೀದಿಗಿಳಿಯಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಪ್ರತಿಭಟನೆಗಳು ಕಡಿಮೆಯಾಗುವ ಲಕ್ಷಣ ಕಂಡುಬಂದಿಲ್ಲ.

ಸಾಮಾಜಿಕ ಮಾಧ್ಯಮದ ಫೋಟೋಗಳು ಹಾಗೂ ವೀಡಿಯೊಗಳು ಶಾಲಾ ವಿದ್ಯಾರ್ಥಿನಿಯರು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಮತ್ತು 1979ರ ಇಸ್ಲಾಮಿಕ್ ಕ್ರಾಂತಿಯ ದಿವಂಗತ ಸಂಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಚಿತ್ರಗಳನ್ನು ಹರಿದು ತಮ್ಮ ಹಿಜಾಬ್‌ ಹಾಗೂ ಮುಸುಕುಗಳನ್ನು ಸುಡುತ್ತಿರುವುದನ್ನು ತೋರಿಸಿವೆ.
ಟೆಹ್ರಾನ್ ಮತ್ತು ಇತರ ಇರಾನಿನ ನಗರಗಳಲ್ಲಿನ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿನ ವಿದ್ಯಾರ್ಥಿಗಳು ಯುವತಿ ಅಮಿನಿಯ ಸಾವಿನ ನಂತರ ವಾರಗಳವರೆಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಆಡಳಿತ-ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ, ಹಲವಾರು ಜನ ಪ್ರತಿಭಟನೆಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement