ಕ್ವಾರಂಟೈನ್‌ ನಂತ್ರ ಕುನೋ ರಾಷ್ಟ್ರೀಯ ಉದ್ಯಾನದ ವಿಶಾಲ ಅರಣ್ಯಕ್ಕೆ ಎರಡು ಚಿರತೆಗಳ ಬಿಡುಗಡೆ : ವೀಡಿಯೊ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ(ಕೆಎನ್‌ಪಿ) ವಿಶಾಲ ಅರಣ್ಯಕ್ಕೆ ಬಿಡಲಾದ ಎರಡು ಚಿರತೆಗಳ ವೀಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಂಚಿಕೊಂಡಿದ್ದಾರೆ.
ಎಂಟು ಚಿರತೆಗಳಲ್ಲಿ ಎರಡು ಕಡ್ಡಾಯ ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿವೆ. “ಎಲ್ಲಾ ಚಿರತೆಗಳು ಆರೋಗ್ಯಕರವಾಗಿವೆ, ಸಕ್ರಿಯವಾಗಿವೆ ಮತ್ತು ಚೆನ್ನಾಗಿ ಹೊಂದಿಕೊಳ್ಳುತ್ತಿವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಒಳ್ಳೆಯ ಸುದ್ದಿ. ಕಡ್ಡಾಯ ಕ್ವಾರಂಟೈನ್‌ನ ನಂತರ, ಕುನೋ ಆವಾಸಸ್ಥಾನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚಿರತೆಗಳನ್ನು ದೊಡ್ಡ ಸ್ಥಳಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಇನ್ನುಳಿದವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಎಲ್ಲಾ ಚಿರತೆಗಳು ಆರೋಗ್ಯವಾಗಿವೆ, ಸಕ್ರಿಯವಾಗಿವೆ ಮತ್ತು ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂದು ತಿಳಿದುಕೊಳ್ಳಲು ನನಗೆ ಸಂತೋಷವಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಪ್ರಾಜೆಕ್ಟ್ ಚೀತಾ ಎಂಬ ಖಂಡಾಂತರ ಸ್ಥಳಾಂತರ ಯೋಜನೆಯ ಭಾಗವಾಗಿ ಚಿರತೆಗಳನ್ನು ನಮೀಬಿಯಾದಿಂದ ಭಾರತಕ್ಕೆ ತರಲಾಯಿತು.ಪ್ರಧಾನಿ ಮೋದಿ ಅವರು ಈ ವರ್ಷ ತಮ್ಮ 72 ನೇ ಜನ್ಮದಿನದ ಸಂದರ್ಭದಲ್ಲಿ ಮೂರು ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದರು.
ಏತನ್ಮಧ್ಯೆ, 2 ಚಿರತೆಗಳನ್ನು ಶನಿವಾರದಂದು ಕ್ವಾರಂಟೈನ್ ವಲಯಗಳಿಂದ ದೊಡ್ಡ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ. ಉಳಿದ ಆರು ಚಿರತೆಗಳನ್ನು ಸಹ (ಒಗ್ಗಿಸುವ ಆವರಣ) ಹಂತ ಹಂತವಾಗಿ ಬಿಡಲಾಗುವುದು ಎಂದು ಕೆಎನ್‌ಪಿ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶಕುಮಾರ ವರ್ಮಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಇಸ್ರೊದಿಂದ ಪಿಎಸ್‌ಎಲ್‌ವಿ-ಸಿ54 ರಾಕೆಟ್, 8 ನ್ಯಾನೊ ಉಪಗ್ರಹ ಬಾಹ್ಯಾಕಾಶಕ್ಕೆ ಯಶಸ್ವಿ ಉಡಾವಣೆ

ಎಂಟು ಚಿರತೆಗಳಲ್ಲಿ ಐದು ಹೆಣ್ಣು ಮತ್ತು 30-66 ತಿಂಗಳೊಳಗಿನ ಮೂರು ಗಂಡು – ಸೆಪ್ಟೆಂಬರ್ 17ರಂದು ಮೀಸಲಾದ ಕ್ವಾರಂಟೈನ್ ವಲಯಗಳಲ್ಲಿ ಬಿಡುಗಡೆ ಮಾಡಲಾಯಿತು.ವನ್ಯಜೀವಿಗಳು, ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ, ಬೇರೆ ದೇಶಕ್ಕೆ ಸ್ಥಳಾಂತರಿಸುವ ಮೊದಲು ಮತ್ತು ನಂತರ ಯಾವುದೇ ಸೋಂಕು ಹರಡುವುದನ್ನು ಪರಿಶೀಲಿಸಲು ಒಂದು ತಿಂಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಬಾಲಿವುಡ್‌ ಹಿರಿಯ ನಟ ವಿಕ್ರಮ್ ಗೋಖಲೆ ನಿಧನ

4 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement