ಇರಾನ್ ಚಳವಳಿಗೆ ಬೆಂಬಲಿಸಿ ಹಿಜಾಬ್ ಸುಟ್ಟ ಕೇರಳದ ಮುಸ್ಲಿಂ ಮಹಿಳೆಯರು | ವೀಕ್ಷಿಸಿ

ಕೋಝಿಕ್ಕೋಡ್: ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲವಾಗಿ ನವೆಂಬರ್ 6 ಭಾನುವಾರದಂದು ಕೇರಳದ ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲವಾಗಿ ನವೆಂಬರ್ 6 ಭಾನುವಾರದಂದು ಕೇರಳದ ಮುಸ್ಲಿಂ ಮಹಿಳೆಯರು ಕೋಝಿಕೋಡ್‌ನಲ್ಲಿ ಹಿಜಾಬ್ ಅನ್ನು ಸುಟ್ಟಿದ್ದಾರೆ.
ಕೇರಳ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದ ವೇಳೆ ಈ ಘಟನೆ ನಡೆದಿದೆ. ಮುಂದಿನ ತಿಂಗಳು ಮಲಪ್ಪುರಂನಲ್ಲಿ ನಡೆಯಲಿರುವ ಮತ್ತೊಂದು ಸೆಮಿನಾರ್‌ಗೆ ಮುನ್ನ “ಫೇನೋಸ್‌-ಸೈನ್ಸ್‌ & ಫ್ರೀ ಥಿಂಕಿಂಗ್‌ (Fanos-Science and Free thinking) ಎಂಬ ಸೆಮಿನಾರ್ ಅನ್ನು ಕೋಝಿಕೋಡ್‌ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಭಾಗವಾಗಿ, ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಚಳವಳಿಗೆ ಬೆಂಬಲಿಸಿ ಮುಸ್ಲಿಂ ಮಹಿಳೆಯರು ಇಲ್ಲಿ ಹಿಜಾಬ್ ಅನ್ನು ಸುಟ್ಟು ಹಾಕಿದರು.
ಇರಾನ್‌ನಲ್ಲಿ ಹಿಜಾಬ್ ಜಾರಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಒಗ್ಗಟ್ಟಿನಿಂದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಮತ್ತು ಫಲಕಗಳನ್ನು ಪ್ರದರ್ಶಿಸಿದರು. ಇದು ಭಾರತದಲ್ಲಿ ವರದಿಯಾದ ಹಿಜಾಬ್ ದಹನದ ಮೊದಲ ಘಟನೆಯಾಗಿದೆ.

ಸಂಘಟನೆಯ ಕೆಲ ಮುಸ್ಲಿಂ ಮಹಿಳೆಯರು ಹಿಜಾಬ್‌ಗಳನ್ನು ಸುಡುವ ಕ್ರಮದ ನೇತೃತ್ವ ವಹಿಸಿದ್ದರು. ಯುಕ್ತಿವಾದಿ ಸಂಗಮ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಮುಕ್ತ ಚಿಂತನೆ ವಿಷಯದ ಕುರಿತು ಪ್ರತಿ ವರ್ಷ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಸಂಘಟನೆಯ ಭಾಗವಾಗಿರುವ ಮುಸ್ಲಿಂ ಮಹಿಳೆಯರು ಸೇರಿದಂತೆ ನಾನಾ ಧರ್ಮದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ನಂತರ, ನಿಷೇಧದ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಈ ವಿಷಯವು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ಹಿಜಾಬ್‌ ಇಸ್ಲಾಂನಲ್ಲಿ ಹಿಜಾಬ್ ಅತ್ಯಗತ್ಯ ಅಭ್ಯಾಸವಲ್ಲ ಎಂದು ನಿಷೇಧದ ಆದೇಶವನ್ನು ಎತ್ತಿಹಿಡಿದಿತ್ತು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಲಾಯಿತು, ನ್ಯಾಯಮೂರ್ತಿಗಳು ವಿಭಜಿತ ತೀರ್ಪು ನೀಡಿದ ವಿಷಯವನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸಲಾಯಿತು. ಸದ್ಯ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

ಇರಾನ್‌ನ ಹಿಜಾಬ್ ವಿರೋಧಿ ಚಳುವಳಿ
22 ವರ್ಷದ ಮಹ್ಸಾ ಅಮಿನಿಯ ಸಾವಿನ ನಂತರ ಇರಾನ್‌ ದೇಶಾದ್ಯಂತ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ವ್ಯಾಪಿಸಿವೆ.ದೇಶದ ಸಂಪ್ರದಾಯವಾದಿ ಉಡುಗೆ ಹಿಜಾಬ್‌ ಅನ್ನು ಅನುಚಿತವಾಗಿ ಧರಿಸಿ ನಿಬಂಧನೆಯನ್ನು ಉಲ್ಲಂಘಿಸಿದ್ದಾರೆಂಬ ಕಾರಣಕ್ಕೆ ಸೆಪ್ಟೆಂಬರ್ 16 ರಂದು “ನೈತಿಕತೆಯ ಪೋಲಿಸರಿಂದ ಬಂಧಿಸಲ್ಪಟ್ಟು “ಮರು-ಶಿಕ್ಷಣ ಕೇಂದ್ರ” ಕ್ಕೆ ಕೊಂಡೊಯ್ದ ನಂತರ 22 ವರ್ಷದ ಮಹ್ಸಾ ಅಮಿನಿ ಮೃತಪಟ್ಟಿದ್ದರು.
ಮಹ್ಸಾ ಅಮಿನಿ ಮರಣದ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು, ಅನೇಕ ಮಹಿಳೆಯರು ಧಾರ್ಮಿಕ ಶಿರಸ್ತ್ರಾಣ ಹಿಜಾಬ್‌ ವಿರುದ್ಧ ಪ್ರತಿಭಟನೆಗೆ ಇಳಿದರು.
ಇರಾನ್‌ನಲ್ಲಿನ ಶಾಲಾ ವಿದ್ಯಾರ್ಥಿನಿಯರು ತಮ್ಮ ಶಿರಸ್ತ್ರಾಣವನ್ನು ಗಾಳಿಯಲ್ಲಿ ಬೀಸುತ್ತಿದ್ದಾರೆ ಮತ್ತು ಧರ್ಮಗುರುಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement