ಕಾರು ಸ್ಟಂಟ್ ಮಾಡಲು ಹೋಗಿ ಒಬ್ಬನ ಪ್ರಾಣ ತೆಗೆದರು, ಇಬ್ಬರಿಗೆ ಗಾಯ: ಏಳು ಜನರ ಬಂಧನ | ಈ ಹುಚ್ಚಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುರುಗ್ರಾಮ: ಉದ್ಯೋಗ್ ವಿಹಾರ್ ಹಂತ-4ರಲ್ಲಿ ಮದ್ಯದ ಅಮಲಿನಲ್ಲಿ ತನ್ನ ಕಾರಿನೊಂದಿಗೆ ಸ್ಟಂಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬ 50 ವರ್ಷದ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಸಾಯಿಸಿದ ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸೌರಭ್ ಶರ್ಮಾ ಅಲಿಯಾಸ್ ಸಾಯಿಬಿ, ರಾಹುಲ್, ರವಿ ಸಿಂಗ್ ಅಲಿಯಾಸ್ ರವೀಂದರ್, ವಿಕಾಸ್ ಅಲಿಯಾಸ್ ವಿಕ್ಕಿ, ಮೋಹಿತ್, ಮುಕುಲ್ ಸೋನಿ ಮತ್ತು ಲವ ಹಾಗೂ ಅಶೋಕ ಎಂಬವರನ್ನು ಬಂಧಿಸಲಾಗಿದೆ.ಅಶೋಕ್ ಹೊರತುಪಡಿಸಿ ಉಳಿದವರೆಲ್ಲರನ್ನು ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.
ಸೌರಭ್ ಶರ್ಮಾ, ಮುಕುಲ್ ಸೋನಿ ಮತ್ತು ಲವ ಟೂರ್ ಮತ್ತು ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ, ಮೋಹಿತ್ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದಾರೆ. ರವಿ ಮತ್ತು ವಿಕಾಸ್ ಸಹೋದರರು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ನಡೆದ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರಲ್ಲದೆ ಇಬ್ಬರು ಗಾಯಗೊಂಡಿದ್ದಾರೆ. ಸುಮಾರು 10-12 ಯುವಕರು ಮಾರುತಿ ಎರ್ಟಿಗಾ, ಹ್ಯುಂಡೈ ವೆನ್ಯೂ ಮತ್ತು ಹ್ಯುಂಡೈ ಕ್ರೆಟಾ ಎಂಬ ಮೂರು ಕಾರುಗಳನ್ನು ಬಳಸಿ ಮದ್ಯದ ಅಂಗಡಿಯ ಮುಂದೆ 2 ಗಂಟೆ ಸುಮಾರಿಗೆ ಸಾಹಸ ಪ್ರದರ್ಶಿಸುತ್ತಿರುವುದನ್ನು ಸಿಸಿಟಿವಿ ಕ್ಯಾಮೆರಾಗಳು ತೋರಿಸಿವೆ ಎಂದು ಅವರು ಹೇಳಿದ್ದಾರೆ.
ಗಾಯಗೊಂಡವ ಇಬ್ಬರಲ್ಲಿ ದೂರುದಾರ ಅಣ್ಣು ಕುಮಾರ್ ಗುಪ್ತಾ ಅವರು ಅಪಘಾತ ಸ್ಥಳದ ಸಮೀಪವಿರುವ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು. ಎರ್ಟಿಗಾ ಚಲಾಯಿಸುತ್ತಿದ್ದವನು ನನಗೆ ಮತ್ತು ಸುಶೀಲ್‌ಗೆ ಗುದ್ದಿದನು. ರಸ್ತೆಯಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದ ಮತ್ತು ಆತ ಡಿಕ್ಕಿಯ ರಭಸಕ್ಕೆ ಮೃತಪಟ್ಟ ಎಂದು ಗುಪ್ತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಇನ್ನೂ ಗುರುತಿಸಲಾಗಿಲ್ಲ ಆದರೆ ಅವನು ಚಿಂದಿ ಆಯುವವನೆಂದು ತೋರುತ್ತದೆ ಮತ್ತು ಸುಮಾರು 50 ವರ್ಷ ವಯಸ್ಸಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯೋಗ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮೊದಲನೆಯದಾಗಿ, ಆರೋಪಿ ಸೌರಭ್ ಕಾರ್ ಸ್ಟಂಟ್ ಮಾಡಿದ್ದಾನೆ ಮತ್ತು ಎರಡನೇ ಸ್ಟಂಟ್‌ನಲ್ಲಿ, ಮದ್ಯದ ಅಂಗಡಿಯ ಹೊರಗೆ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ. ಅದರಲ್ಲಿ ಮಧ್ಯವಯಸ್ಕ ವ್ಯಕ್ತಿ ಮೃತಪಟ್ಟಿದ್ದಾನೆ, ನಾವು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಎಸಿಪಿ (ಅಪರಾಧ) ಪ್ರೀತ್ ಪಾಲ್ ಸಿಂಗ್ ಸಾಂಗ್ವಾನ್ ಹೇಳಿದರು.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement