ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಮುಂಚೆ ಅಭ್ಯಾಸದ ವೇಳೆ ಮುಂದೋಳಿಗೆ ಪೆಟ್ಟು ಮಾಡಿಕೊಂಡ ರೋಹಿತ್‌ ಶರ್ಮಾ : ವರದಿ

ಮಂಗಳವಾರದ ತರಬೇತಿ ಅವಧಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಮುಂದೋಳಿನ ಮೇಲೆ ಪ್ರಬಲವಾದ ಏಟು ತಿಂದಿದ್ದಾರೆ. ಇದು ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ಸೆಮಿಫೈನಲ್‌ಗೆ ಮುಂಚಿತವಾಗಿ ತಂಡಕ್ಕೆ ಗಾಯದ ಸಮಸ್ಯೆ ಭೀತಿಗೆ ಕಾರಣವಾಯಿತು.
ಅಡಿಲೇಡ್ ಓವಲ್‌ನಲ್ಲಿ ತಂಡದ ಥ್ರೋಡೌನ್ ಪರಿಣಿತ ಎಸ್ ರಘು ಅವರನ್ನು ಎದುರಿಸುತ್ತಿರುವಾಗ ಒಂದು ಶಾರ್ಟ್ ಬಾಲ್ ಲೆಂಗ್ತ್ ಏರಿಯಾದಿಂದ ಜಿಗಿದು ರೋಹಿತ್ ಅವರ ಬಲ ಮುಂಗೈಗೆ ಅಪ್ಪಳಿಸಿತು. ಪುಲ್ ಶಾಟ್‌ಗೆ ಯತ್ನಿಸಿದಾಗ ತಪ್ಪಿಸಿಕೊಂಡ ಚೆಂಡು ನಾಯಕನ ಮುದೋಳಿಗೆ ಬಡಯಿತು, ಅವರು ತಕ್ಷಣವೇ ನೆಟ್‌ ಅಭ್ಯಾಸದಿಂದ ನಿರ್ಗಮಿಸಿದರು.
ಅವರ ಬಲಗೈಗೆ ದೊಡ್ಡ ಐಸ್ ಪ್ಯಾಕ್ ಕಟ್ಟಲಾಗಿತ್ತು. ಐಸ್ ಬಾಕ್ಸ್‌ ಅನ್ನು ಕೈ ಮೇಲೆ ಇರಿಸಿಕೊಂಡಿದ್ದರು. ನಂತರ ಮಾನಸಿಕ ಕಂಡೀಷನಿಂಗ್ ತರಬೇತುದಾರ ಪ್ಯಾಡಿ ಅಪ್ಟನ್ ಅವರೊಂದಿಗೆ ಸಾಕಷ್ಟು ಸಮಯದವರೆಗೆ ಮಾತನಾಡಿದರು.

ಐಸ್ ಪ್ಯಾಕ್ ಅನ್ನು ಹಾಕಿಕೊಂಡು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡ ನಂತರ, ರೋಹಿತ್ ಅವರು ಪುನಃ ನೆಟ್‌ಗೆ ಮರಳಿದರು. ಹಾಗೂ ತಮ್ಮ ಅಭ್ಯಾಸ ಪುನರಾರಂಭಿಸಿದರು, ಆದರೆ ತನ್ನ ಚಲನೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಲು ರಕ್ಷಣಾತ್ಮಕ ಹೊಡೆತಗಳನ್ನು ಆಡಿದರು.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

ಅಭ್ಯಾಸದ ನಂತರ ಭಾರತೀಯ ವೈದ್ಯಕೀಯ ತಂಡವು ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಲಿರುವುದರಿಂದ ಮಾಡಲಿರುವುದರಿಂದ ಗಾಯ ಎಷ್ಟು ಗಂಭೀರವಾಗಿದೆ ಎಂದು ತಿಳಿದುಬರಲಿದೆ.
ಭಾರತ ಗುರುವಾರ ಇಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದು, ಬುಧವಾರ ಸಿಡ್ನಿಯಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.

4 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement