ಇಬ್ಬರು ಕಾಂಗ್ರೆಸ್‌ ಶಾಸಕರು, ಸಹವರ್ತಿಗಳ ನಿವಾಸದಲ್ಲಿ ಐಟಿ ಶೋಧ: 100 ಕೋಟಿ ರೂ.ಗಳ ಅಕ್ರಮ ಸಂಪತ್ತು ಪತ್ತೆ

ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆ, ಸರ್ಕಾರಿ ಗುತ್ತಿಗೆ ಹಾಗೂ ಕಬ್ಬಿಣ ಅದಿರು ವ್ಯಾಪಾರೋದ್ಯಮಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡವು ಜಾರ್ಖಂಡ್‌ನ ಇಬ್ಬರು ಕಾಂಗ್ರೆಸ್‌ ಶಾಸಕರು ಹಾಗೂ ಅವರ ಸಹವರ್ತಿಗಳ ನಿವಾಸ ಮತ್ತು ಉದ್ಯಮಗಳ ಮೇಲೆ ದಾಳಿ ನಡೆಸಿದ್ದು, 100 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿರುವುದಾಗಿ ಹೇಳಿದೆ.
ಜಾರ್ಖಂಡ್‌ನ ರಾಂಚಿ, ಗೊಡ್ಡಾ, ಬೆರ್ಮೊ, ಧುಮ್ಕಾ, ಜೆಮ್‌ಶೆಡ್‌ಪುರ, ಬಿಹಾರದ ಪಟ್ನಾ, ಹರಿಯಾಣದ ಗುರುಗ್ರಾಮ, ಸೇರಿದಂತೆ ಒಟ್ಟು 50 ಕಡೆ ತೆರಿಗೆ ಇಲಾಖೆ ಅಧಿಕಾರಿಗಳ ತಂಡವು ನವೆಂಬರ್‌ 4 ರಂದು ಶೋಧ ನಡೆಸಿತ್ತು. ಮಂಗಳವಾರ ಶೋಧ ಮುಂದುವರಿಸಿತ್ತು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ದಾಳಿ ವೇಳೆ ಬೆರ್ಮೊ ಕ್ಷೇತ್ರದ ಕುಮಾರ್‌ ಜಯಮಂಗಲಾ ಅನೂಪ್‌ ಸಿಂಗ್‌ ಮತ್ತು ಪೊರಿಯಾಹಾತ್‌ ಕ್ಷೇತ್ರದ ಪ್ರದೀಪ್‌ ಯಾದವ್‌ ಅವರ ನಿವಾಸದಲ್ಲಿ 100 ಕೋಟಿ ರೂ.ಗೂ ಅಧಿಕ ಮೊತ್ತದ ದಾಖಲೆಗಳಿಲ್ಲದ ವಹಿವಾಟು ಪತ್ತೆಯಾಗಿದ್ದು, ಅದರ ಮೂಲವನ್ನು ಜಾಲಾಡಲಾಗುತ್ತಿದೆ. ಇದುವರೆಗೂ 2 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ.
ಕೆಲ ದಿನಗಳ ಹಿಂದೆ ಶಾಸಕ ಅನೂಪ್ ಸಿಂಗ್ ಐಟಿ ತನ್ನನ್ನು ಮತ್ತು ತನ್ನ ಕುಟುಂಬವನ್ನು ಗೃಹ ಬಂಧನದಲ್ಲಿ ಇರಿಸಿದೆ ಎಂದು ಆರೋಪಿಸಿದ್ದರು. ಅವರನ್ನು ಹೊರಗೆ ಹೋಗಲು ಬಿಡಲಿಲ್ಲ. ದಾಳಿ ನಡೆಸಿದ ನಂತರ, ಅವರ ನಿವಾಸದಿಂದ ಯೌುದೂ ದೊಡ್ಡ ಮೊತ್ತ ವಶಪಡಿಸಿಕೊಳ್ಳಲಾಗಿಲ್ಲ ಹಾಗೂ ತಾನು ಎಲ್ಲಾ ವಹಿವಾಟುಗಳು ಮತ್ತು ಹೂಡಿಕೆಗಳನ್ನು ವಿವರಿಸಿರುವುದಾಗಿ ಹೇಳಿದ್ದರು.
ಅನೂಪ್ ಸಿಂಗ್ ಮತ್ತು ಪ್ರದೀಪ್ ಯಾದವ್ ಇಬ್ಬರೂ ಬಿಜೆಪಿಯ ಆದೇಶಗಳಿಗೆ ಮಣಿಯಲು ನಿರಾಕರಿಸಿದ್ದರಿಂದ ಕೇಂದ್ರ ಏಜೆನ್ಸಿಯ ದಾಳಿಗೆ ಕಾರಣವಾಯಿತು ಎಂದು ಆರೋಪಿಸಿದ್ದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   "ನಿಮಗೆ ನಾಚಿಕೆಯಾಗಬೇಕು, ನಿಮ್ಮ ವರ್ತನೆಗೆ ನಾನು ಕ್ಷಮೆಯಾಚಿಸ್ತೇನೆ : 'ಕಾಶ್ಮೀರ ಫೈಲ್ಸ್' ಬಗ್ಗೆ ಇಸ್ರೇಲಿ ಚಲನಚಿತ್ರ ನಿರ್ಮಾಪಕನ ಟೀಕೆಗಳಿಗೆ ಇಸ್ರೇಲಿ ರಾಯಭಾರಿ ತೀವ್ರ ವಾಗ್ದಾಳಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement