ರಾಮಸೇತುವಿಗೆ ರಾಷ್ಟ್ರೀಯ ಪಾರಂಪರಿಕ ಸ್ಥಾನಮಾನ ಕೋರಿ ಅರ್ಜಿ : ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ 4 ವಾರಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ರಾಮಸೇತುವಿಗೆ ರಾಷ್ಟ್ರೀಯ ಪಾರಂಪರಿಕ ಸ್ಥಾನಮಾನ ನೀಡುವಂತೆ ಕೋರಿ ಸಂಸದ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠವು ಕೇಂದ್ರ ಸರ್ಕಾರದ ಪರವಾಗಿ ಉತ್ತರ ಸಿದ್ಧವಾಗಿದ್ದರೂ, ಸಂಬಂಧಿಸಿದ ಸಚಿವಾಲಯದಿಂದ ಇನ್ನೂ ಅನುಮೋದನೆ … Continued

ಭಾರೀ ವಿವಾದದ ನಡುವೆ ಈ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಿಂದ ರಾಜ್ಯಪಾಲರನ್ನು ಬದಲಾಯಿಸಿದ ಕೇರಳ ಸರ್ಕಾರ

ತಿರುವನಂತಪುರಂ: ಎರಡು ಕಡೆಯ ನಡುವಿನ ಸಂಘರ್ಷ ತೀವ್ರ ಉಲ್ಬಣಗೊಂಡ ಒಂದು ದಿನದ ನಂತರ ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನದಿಂದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಜ್ಯ ಸರ್ಕಾರ ಗುರುವಾರ ವಜಾಗೊಳಿಸಿದೆ. . ಖಾನ್ ಅವರ ಸ್ಥಾನವನ್ನು ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯ ವ್ಯಕ್ತಿಯನ್ನು ನೇಮಿಸಲು ವಿಶ್ವವಿದ್ಯಾಲಯದ ನಿಯಮಗಳನ್ನು ಬದಲಾಯಿಸುವುದಾಗಿ … Continued

ಕಬ್ಬು ಕಟಾವು ದರ, ಎಫ್‌ಆರ್‌ಪಿ ಹೆಚ್ಚಳಕ್ಕೆ ಸಮಿತಿ ರಚನೆ

posted in: ರಾಜ್ಯ | 0

ಬೆಂಗಳೂರು: ಕಬ್ಬು ಬೆಳೆಗಾರರ ದರದ ಹೆಚ್ಚಳ ಬೇಡಿಕೆ ಬಗ್ಗೆ ಗುರುವಾರ ವಿಕಾಸ ಸೌಧದಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸಭೆ ನಡೆಸಿ, ಕಬ್ಬು ಕಟಾವು ದರ, ಎಫ್‌ಆರ್‌ಪಿ ಹೆಚ್ಚಳ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಸಕ್ಕರೆ ನಿಯಂತ್ರಣ ಮಂಡಳಿ, ರೈತ ಹೋರಾಟಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರನ್ನು (ಸರ್ಕಾರಿ ಹಾಗೂ ಖಾಸಗಿ) … Continued

Jio True 5G : ವೆಲ್‌ಕಮ್ ಆಫರ್​ನೊಂದಿಗೆ ಜಿಯೋ ಟ್ರೂ 5G ಸೇವೆ ಬೆಂಗಳೂರು, ಹೈದರಾಬಾದ್‌ನಲ್ಲಿ ಆರಂಭ

posted in: ರಾಜ್ಯ | 0

ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಎಂಬ ಆರು ನಗರಗಳಲ್ಲಿ ಜಿಯೋ ಟ್ರು-5G (Jio True-5G) ಸೇವೆಗಳನ್ನು ಪ್ರಾರಂಭಿಸಿದ ನಂತರ, ಜಿಯೋ (Jio) ಈಗ ಅದನ್ನು ಇಂದಿನಿಂದ (ನವೆಂಬರ್ 10) ಬೆಂಗಳೂರು ಮತ್ತು ಹೈದರಾಬಾದ್‌ಗೆ ವಿಸ್ತರಿಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಟೆಲಿಕಾಂ ವಿಭಾಗ ಗುರುವಾರ ಪ್ರಕಟಿಸಿದೆ. ರಿಲಯನ್ಸ್ ಜಿಯೋ ನವೆಂಬರ್ 10 … Continued

ದಾಖಲೆ ಬರೆದ 23 ವರ್ಷದ ಭಾರತೀಯ-ಅಮೆರಿಕನ್ ನಬೀಲಾ ಸೈಯದ್ : ಕಿರಿಯ ವಯಸ್ಸಿನಲ್ಲೇ ಇಲಿನಾಯ್ಸ್‌ ಪ್ರಾಂತದ ಸಾಮಾನ್ಯ ಸಭೆಗೆ ಆಯ್ಕೆ

ಅಮೆರಿಕದ ಇಲಿನಾಯ್ಸ್ ಪ್ರಾಂತದ ಸಾಮಾನ್ಯ ಸಭೆಗೆ ಆಯ್ಕೆಯಾದ ಅತ್ಯಂತ ಕಿರಿಯ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಭಾರತೀಯ ನಬೀಲಾ ಸೈಯದ್ ಇತಿಹಾಸ ಬರೆದಿದ್ದಾರೆ. ಇತ್ತೀಚೆಗೆ ನಡೆದ ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ, 23 ವರ್ಷದ ಭಾರತೀಯ-ಅಮೆರಿಕನ್ ತನ್ನ ರಿಪಬ್ಲಿಕನ್ ಎದುರಾಳಿ ಕ್ರಿಸ್ ಬಾಸ್ ಅವರನ್ನು ಸೋಲಿಸಿದರು. ಇಲಿನಾಯ್ಸ್ ಸ್ಟೇಟ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 51ನೇ ಜಿಲ್ಲೆಗೆ … Continued

ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯ-ಅಮೆರಿಕನ್ನರು : ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದವರ ದಾಖಲೆಯ ಗೆಲುವು…! ಗೆದ್ದವರು ಯಾರು..? ಮಾಹಿತಿ ಇಲ್ಲಿದೆ

ಅಮೆರಿಕದಲ್ಲಿ ಬುಧವಾರದ ಮಧ್ಯಂತರ ಚುನಾವಣೆಯಲ್ಲಿ ಆಡಳಿತಾರೂಢ ಡೆಮಾಕ್ರಟ್ ಪಕ್ಷದ ಭಾರತೀಯ-ಅಮೆರಿಕನ್ ಶಾಸಕರ ಅದೃಷ್ಟವು ಗಮನಾರ್ಹ ಏರಿಕೆ ತೋರಿಸಿದೆ. ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಅಮಿ ಬೇರಾ ಸೇರಿದಂತೆ ಆಡಳಿತಾರೂಢ ಡೆಮಾಕ್ರಟ್ ಪಕ್ಷದಿಂದ ದಾಖಲೆಯ ಐವರು ಭಾರತೀಯ-ಅಮೆರಿಕನ್ ಶಾಸಕರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾಗಿದ್ದಾರೆ. ಚುನಾವಣೆಯಲ್ಲಿ ಹಲವಾರು ಭಾರತೀಯ-ಅಮೆರಿಕನ್ನರು ರಾಜ್ಯ ಶಾಸಕಾಂಗಗಳಿಗೆ … Continued

ಕೆಂಪೇಗೌಡರ ಪ್ರತಿಮೆಗೆ ಸರ್ಕಾರದ ಹಣ ಏಕೆ ಬಳಸಲಾಗಿದೆ: ಕೆಪಿಸಿಸಿ ಅಧ್ಯಕ್ಷ ಶಿವಕುಮಾರ ಪ್ರಶ್ನೆ

posted in: ರಾಜ್ಯ | 0

ಬೆಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಸಂಸ್ಥಾಪಕ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಏಕೆ ಬಳಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಗುರುವಾರ ಪ್ರಶ್ನಿಸಿದ್ದಾರೆ. ಶುಕ್ರವಾರ, ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ … Continued

ತಂದೆಗೆ ಸಹಾಯ ಮಾಡಲು ನನಗೆ ಹೆಮ್ಮೆ:ಲಾಲುಪ್ರಸಾದ್ ಯಾದವ್‌ಗೆ ಕಿಡ್ನಿ ದಾನ ಮಾಡಲಿರುವ ಎರಡನೇ ಮಗಳು

ನವದೆಹಲಿ: ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರಿಗೆ ಮಗಳು ರೋಹಿಣಿ ಆಚಾರ್ಯ ಮೂತ್ರಪಿಂಡ ದಾನ ಮಾಡಲಿದ್ದಾರೆ. ಲಾಲು ಯಾದವ್ ಈ ತಿಂಗಳ ಕೊನೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ತಂದೆಗೆ ಸ್ವತಃ ಕಿಡ್ನಿ ನೀಡುತ್ತಿರುವ ವಿಷಯವನ್ನು ರೋಹಿಣಿ ಆಚಾರ್ಯ ದೃಢಪಡಿಸಿದ್ದಾರೆ. ” ಇದು ನಿಜ. … Continued

ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಇನ್ಮುಂದೆ ಇವೆಲ್ಲವೂ ನಿಷೇಧ

posted in: ರಾಜ್ಯ | 0

ಬೆಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಆಡಳಿತ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಈ ಹಿಂದಿನಿಂದ ನಡೆಸಿಕೊಂಡು ಬರುತ್ತಿರುವಂತ ರೂಢಿ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಅದರ ಹೊರತಾಗಿ ಜಯಂತಿಗಳನ್ನು ಆಚರಿಸುವಂತಿಲ್ಲ, ಭಾವಚಿತ್ರಗಳನ್ನು ಅಳವಡಿಸುವಂತಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಧಾರ್ಮಿಕ ದತ್ತಿ ಇಲಾಖೆ ( Department of Religious Endowments) ಆಯುಕ್ತರು ಹೊರಡಿಸಿದ ಸುತ್ತೋಲೆಯಲ್ಲಿ, … Continued

ಕ್ರೈಸ್ತ ಅಥವಾ ಇಸ್ಲಾಂಗೆ ಮತಾಂತರಗೊಂಡ ದಲಿತರು ಪರಿಶಿಷ್ಟ ಜಾತಿಯ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ : ಸುಪ್ರೀಂಕೋರ್ಟ್‌ಗೆ ಕೇಂದ್ರ

ನವದೆಹಲಿ: ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಯವರು ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಗಳೆಂದು ಪರಿಗಣಿಸಲು ಅರ್ಹರಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವ ಮನವಿಯನ್ನು ವಿರೋಧಿಸಿ ಕೇಂದ್ರವು ಬುಧವಾರ ಅಫಿಡವಿಟ್ ಸಲ್ಲಿಸಿದೆ. ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮದ ದಲಿತರನ್ನು ಪರಿಶಿಷ್ಟರು … Continued