ತಂದೆಗೆ ಸಹಾಯ ಮಾಡಲು ನನಗೆ ಹೆಮ್ಮೆ:ಲಾಲುಪ್ರಸಾದ್ ಯಾದವ್‌ಗೆ ಕಿಡ್ನಿ ದಾನ ಮಾಡಲಿರುವ ಎರಡನೇ ಮಗಳು

ನವದೆಹಲಿ: ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರಿಗೆ ಮಗಳು ರೋಹಿಣಿ ಆಚಾರ್ಯ ಮೂತ್ರಪಿಂಡ ದಾನ ಮಾಡಲಿದ್ದಾರೆ. ಲಾಲು ಯಾದವ್ ಈ ತಿಂಗಳ ಕೊನೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ತಂದೆಗೆ ಸ್ವತಃ ಕಿಡ್ನಿ ನೀಡುತ್ತಿರುವ ವಿಷಯವನ್ನು ರೋಹಿಣಿ ಆಚಾರ್ಯ ದೃಢಪಡಿಸಿದ್ದಾರೆ. ” ಇದು ನಿಜ. ತಂದೆಗೆ ನನ್ನ ಕಿಡ್ನಿ ನೀಡುತ್ತಿರುವುದು ನನಗೆ ಹೆಮ್ಮೆ ಉಂಟುಮಾಡುತ್ತಿದೆ ಎಂದು ಲಾಲು ಯಾದವ್ ಅವರ ಎರಡನೇ ಮಗಳು ರೋಹಿಣಿ ತಿಳಿಸಿದ್ದಾರೆ. ರೋಹಿಣಿ ಆಚಾರ್ಯ ಸಿಂಗಪುರದಲ್ಲಿ ನೆಲೆಸಿದ್ದಾರೆ.

ಸಿಂಗಪುರಕ್ಕೆ ಚಿಕಿತ್ಸೆಗೆಂದು ತೆರಳಿದ್ದ ಲಾಲು ಯಾದವ್ ಕಳೆದ ತಿಂಗಳು ಭಾರತಕ್ಕೆ ಮರಳಿದ್ದರು ಅವರಿಗೆ ಮೂತ್ರಪಿಂಡ ಕಸಿ ಸರ್ಜರಿಗೆ ಒಳಗಾಗುವಂತೆ ಸಲಹೆ ನೀಡಲಾಗಿತ್ತು. ದೆಹಲಿ ಮತ್ತು ರಾಂಚಿಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅನೇಕ ಬಾರಿ ಅವರು ದಾಖಲಾಗಿದ್ದರು.

ರೋಹಿಣಿ ಅವರು ಸಿಂಗಪುರದಿಂದ ತಂದೆಯ ಜತೆಗಿನ ಚಿತ್ರವನ್ನು ಕಳೆದ ತಿಂಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. “ಈ ದೇಶಕ್ಕೆ ನಿಮ್ಮ ಹಾಜರಾತಿಯ ಅಗತ್ಯವಿದೆ. ಇದರಿಂದ ದೇಶವು ನಿರಂಕುಶ ಆಲೋಚನೆಗಳ ವಿರುದ್ಧ ಹೋರಾಡಬಹುದು ಎಂದು ಅವರು ಬರೆದಿದ್ದರು.
ಪ್ರಸ್ತುತ ದೆಹಲಿಯಲ್ಲಿ ನೆಲೆಸಿರುವ ಲಾಲು ಯಾದವ್ ಜಾಮೀನಿನ ಮೇಲೆ ಹೊರಗಿದ್ದಾರೆ. ಮೇವು ಹಗರಣದಲ್ಲಿ ಅವರು ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದು, ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾರೆ

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement