‘ಮಹುವಾ’ ದೇಸೀ ಮದ್ಯ ಸೇವಿಸಿ ಅಮಲಿನಲ್ಲಿ ಗಂಟೆ ಗಟ್ಟಲೆ ಅರಣ್ಯದಲ್ಲಿ ಬಿದ್ದುಕೊಂಡಿದ್ದ 24 ಆನೆಗಳು…!

ಒಡಿಶಾದ ಕಿಯೋಂಜಾರ್ ಜಿಲ್ಲೆಯ ಕಾಡಿನೊಳಗೆ ‘ಮಹುವಾ’ ಎಂಬ ಸಾಂಪ್ರದಾಯಿಕ ಮದ್ಯವನ್ನು ತಯಾರಿಸಲು ತೆರಳಿದ್ದ ಗ್ರಾಮಸ್ಥರು, 24 ಆನೆಗಳ ಹಿಂಡು  ದೇಶ ನಿರ್ಮಿತ ಮದ್ಯ ಸೇವಿಸಿ ಗಾಢ ನಿದ್ರೆಯಲ್ಲಿ ಮಲಗಿದ್ದನ್ನು ಕಂಡು ಆಘಾತಕ್ಕೊಳಗಾದ ಘಟನೆ ನಡೆದಿದೆ.
ಶಿಲಿಪಾದ ಗೋಡಂಬಿ ಅರಣ್ಯದ ಬಳಿ ವಾಸಿಸುವ ಗ್ರಾಮಸ್ಥರ ಪ್ರಕಾರ, ಒಂಬತ್ತು ಗಂಡಾನೆಗಳು, ಆರು ಹೆಣ್ಣಾನೆಗಳು ಮತ್ತು ಒಂಬತ್ತು ಮರಿಗಳನ್ನು ಒಳಗೊಂಡ ಎಲ್ಲಾ ಆನೆಗಳು ದೊಡ್ಡ ಕುಂಡಗಳಲ್ಲಿ ನೀರಿನಲ್ಲಿ ಮಹುವಾ ಹೂಗಳನ್ನು ಇಡುವ ಸ್ಥಳದ ಬಳಿ ಮಲಗಿದ್ದವು. ಮಡಕೆಗಳೆಲ್ಲ ಒಡೆದು ನೀರು ನಾಪತ್ತೆಯಾಗಿರುವುದು ಕಂಡುಬಂದಿದೆ.
ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಹುವಾ ತಯಾರಿಸಲು ಕಾಡಿನೊಳಗೆ ಹೋಗಿ ನೋಡಿದಾಗ ಮಡಕೆಗಳೆಲ್ಲ ಒಡೆದು ಕುಂಡಗಳಲ್ಲಿದ್ದ ನೀರು ನಾಪತ್ತೆಯಾಗಿರುವುದು ಕಂಡು ಬಂದಿದ್ದು, ಆನೆಗಳು ಮಲಗಿರುವುದು ಕಂಡು ಬಂದಿದೆ. ಆನೆಗಳು ಕುಂಡದೊಳಗಿದ್ದ ಮದ್ಯವನ್ನು ಕುಡಿದಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಮಸ್ಥರು ಆನೆಗಳನ್ನು ಎಬ್ಬಿಸಲು ಯತ್ನಿಸಿದರಾದರೂ ವಿಫಲವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಆ ಮದ್ಯವನ್ನು ಸಂಸ್ಕರಿಸಲಾಗಿಲ್ಲ. ನಾವು ಪ್ರಾಣಿಗಳನ್ನು ಎಬ್ಬಿಸಲು ಪ್ರಯತ್ನಿಸಿದ್ದೇವೆ ಆದರೆ ವಿಫಲವಾಗಿದೆ. ನಂತರ ಅರಣ್ಯ ಇಲಾಖೆಗೆ ತಿಳಿಸಲಾಯಿತು” ಎಂದು ನಾಥಿಯಾ ಸೇಥಿ ಹೇಳಿದರು.
ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಪಟನಾ ಅರಣ್ಯ ವ್ಯಾಪ್ತಿಯ ಸ್ಥಳಕ್ಕೆ ಆಗಮಿಸಿ ಆನೆಗಳನ್ನು ಎಬ್ಬಿಸಲು ಡ್ರಮ್ ಬಾರಿಸಿದರು.
ಕೊನೆಗೆ ಎಚ್ಚೆತ್ತುಕೊಂಡ ಆನೆಗಳ ಹಿಂಡು ಕಾಡಿನೊಳಗೆ ಹೋಯಿತು ಎಂದು ಅರಣ್ಯ ಸಂರಕ್ಷಣಾಧಿಕಾರಿ ಘಾಸಿರಾಮ್ ಪಾತ್ರಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆನೆಗಳು ದೇಸೀ ಮದ್ಯವನ್ನು ಸೇವಿಸಿವೆಯೇ ಅಥವಾ ಕೇವಲ ಗಾಢ ನಿದ್ರೆಯಲ್ಲಿವೆಯೇ ಎಂಬುದು ಖಚಿತವಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ಒಡೆದ ಮಡಕೆಗಳ ಸಮೀಪವಿರುವ ವಿವಿಧ ಸ್ಥಳಗಳಲ್ಲಿ ಆನೆಗಳು ಅಮಲೇರಿದ ಸ್ಥಿತಿಯಲ್ಲಿ ಮಲಗಿದ್ದನ್ನು ಅವರು ಮಂಗಳವಾರ ಗಮನಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement