Jio True 5G : ವೆಲ್‌ಕಮ್ ಆಫರ್​ನೊಂದಿಗೆ ಜಿಯೋ ಟ್ರೂ 5G ಸೇವೆ ಬೆಂಗಳೂರು, ಹೈದರಾಬಾದ್‌ನಲ್ಲಿ ಆರಂಭ

ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಎಂಬ ಆರು ನಗರಗಳಲ್ಲಿ ಜಿಯೋ ಟ್ರು-5G (Jio True-5G) ಸೇವೆಗಳನ್ನು ಪ್ರಾರಂಭಿಸಿದ ನಂತರ, ಜಿಯೋ (Jio) ಈಗ ಅದನ್ನು ಇಂದಿನಿಂದ (ನವೆಂಬರ್ 10) ಬೆಂಗಳೂರು ಮತ್ತು ಹೈದರಾಬಾದ್‌ಗೆ ವಿಸ್ತರಿಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಟೆಲಿಕಾಂ ವಿಭಾಗ ಗುರುವಾರ ಪ್ರಕಟಿಸಿದೆ.
ರಿಲಯನ್ಸ್ ಜಿಯೋ ನವೆಂಬರ್ 10 ರಂದು ದಕ್ಷಿಣದ ಟೆಕ್-ಕೇಂದ್ರಿತ ನಗರಗಳಾದ ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ Jio True 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು.
ಜಿಯೋ ವೆಲ್ಕಮ್ ಆಫರ್”ನ ಭಾಗವಾಗಿ, ಬಳಕೆದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1Gbps + ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ಒದಗಿಸಲಾಗುವುದು ಎಂದು ಆರ್‌ಐಎಲ್‌ (RIL)ನ ಟೆಲಿಕಾಂ ವಿಭಾಗವು ಹೇಳಿದೆ.
ಈ ಹಿಂದೆ, ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಎಂಬ ಆರು ನಗರಗಳಲ್ಲಿ ಜಿಯೋ 5G ಯಶಸ್ವಿಯಾಗಿ ಬೀಟಾ-ಲಾಂಚ್ ಆಗಿತ್ತು.

ಅತ್ಯುತ್ತಮ ಗ್ರಾಹಕರ ಅನುಭವವನ್ನು ಖಚಿತಪಡಿಸಿಕೊಳ್ಳಲು ಜಿಯೋ ತನ್ನ ಸುಧಾರಿತ ಟ್ರೂ-5G ಸೇವೆಗಳನ್ನು ಹಂತ-ವಾರು ರೀತಿಯಲ್ಲಿ ಹೊರತರುತ್ತಿದೆ” ಎಂದು ಕಂಪನಿ ಹೇಳಿದೆ. 5G ಸೇವೆಗಳು ಆರು ನಗರಗಳಲ್ಲಿ “ಈಗಾಗಲೇ ಲಕ್ಷಗಟ್ಟಲೆ ಬಳಕೆದಾರರು ಬಳಸುತ್ತಿದ್ದಾರೆ” ಮತ್ತು ಇದುವರೆಗಿನ ಪ್ರತಿಕ್ರಿಯೆಯು “ಅತ್ಯಂತ ಧನಾತ್ಮಕ ಮತ್ತು ಭರವಸೆ ನೀಡುತ್ತದೆ” ಎಂದು ಅದು ಹೇಳಿದೆ.
ಗ್ರಾಹಕರಿಂದ ಪಡೆದ ಪ್ರತಿಕ್ರಿಯೆಯ ಆಧಾರದ ಮೇಲೆ, ಬಳಕೆದಾರರು 500 Mbps ನಿಂದ 1 Gbps ವೇಗ ಅನುಭವಿಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ಗಳು, ಮತ್ತು “ಅತಿ ಹೆಚ್ಚು ಪ್ರಮಾಣದ ಡೇಟಾವನ್ನು ಸಲೀಸಾಗಿ ಬಳಸುತ್ತಿವೆ ಎಂದು ಜಿಯೋ ಹೇಳಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಜಿಯೋ ಪ್ರಕಾರ, ಕಂಪನಿಯ 5G ನೆಟ್‌ವರ್ಕ್ ಮೂರು ಪಟ್ಟು ಪ್ರಯೋಜನವನ್ನು ಹೊಂದಿದೆ, ಏಕೆಂದರೆ ಇದು 4G ನೆಟ್‌ವರ್ಕ್‌ನಲ್ಲಿ ಶೂನ್ಯ ಅವಲಂಬನೆಯೊಂದಿಗೆ “ಸ್ಟ್ಯಾಂಡ್-ಅಲೋನ್ 5G ಆರ್ಕಿಟೆಕ್ಚರ್” ಅನ್ನು ಆಧರಿಸಿದೆ; 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ “5G ಸ್ಪೆಕ್ಟ್ರಮ್‌ನ ಅತಿದೊಡ್ಡ ಮತ್ತು ಅತ್ಯುತ್ತಮ ಮಿಶ್ರಣ” ಒಳಗೊಂಡಿರುತ್ತದೆ; ಮತ್ತು “ಈ 5G ಆವರ್ತನಗಳನ್ನು ಒಂದೇ ದೃಢವಾದ ಡೇಟಾ ಹೈವೇ” ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜಿಸುತ್ತದೆ.
ನವೆಂಬರ್ 10ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಈ ಮೂಲಕ ಪಡೆಯಬಹುದಾಗಿದೆ.
ಡಿಸೆಂಬರ್ 2023 ರೊಳಗೆ ದೇಶದ “ಪ್ರತಿ ಪಟ್ಟಣ, ಪ್ರತಿ ತಾಲೂಕು ಮತ್ತು ಪ್ರತಿ ತಹಸಿಲ್” ಗೆ ಜಿಯೋ 5G ಅನ್ನು ತಲುಪಿಸಲು ಕಂಪನಿಯು ಗುರಿ ಇಟ್ಟುಕೊಂಡಿದೆ ಎಂದು ಜಿಯೋ ವೆಬ್‌ಸೈಟ್‌ನಲ್ಲಿ ನೀಡಲಾದ ಟಿಪ್ಪಣಿ ಹೇಳುತ್ತದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement