ಗಿರ್‌ ಎತ್ತಿನೊಂದಿಗೆ ಬೆಂಗಳೂರಿಂದ 360 ಕಿಮೀ. ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ ಬಂದ ಸಾಫ್ಟ್‌ವೇರ್‌ ಉದ್ಯೋಗಿ : ದೇವರ ಮಡಿಲಿಗೆ ಮೊದಲ ಕರು ಸಮರ್ಪಣೆ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ವ್ಯಕ್ತಿಯೊಬ್ಬರು ತಮ್ಮ ಭಕ್ತಿ ಸಮಪರ್ಣೆಯನ್ನು ವಿಭಿನ್ನವಾಗಿ ಮಾಡಿದ್ದಾರೆ. ಮೂಲತಃ ಕಳಸದ ಹಿರೇಬಲ್‌ನವರಾಗಿದ್ದು, ಬೆಂಗಳೂರಿನ ಜಿಗಣಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೇಯಾಂಸ್‌ ಜೈನ್‌ ಎಂಬವರೇ ಈ ವಿಶಿಷ್ಟ ಸಮರ್ಪಣೆ ಮೂಲಕ ಗಮನ ಸೆಳೆದವರು.
ಜಾನುವಾರು ಅಂದರೆ ಅದರ್ಲಿಯೂ ಗೋವು ಎಂದರೆ ಶ್ರೇಯಾಂಸ್‌ ಅವರಿಗೆ ಅಚ್ಚುಮೆಚ್ಚು. 2019ರಲ್ಲಿ ಕೋವಿಡ್‌ ಲಾಕ್‌ಡೌನ್‌ ಸಂದರ್ಭ ಮನೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವಾಗ ತಾವಿದ್ದ ಬಾಡಿಗೆ ಮನೆಯ ಖಾಲಿ ಸ್ಥಳ ಕಂಡು ಹೈನುಗಾರಿಕೆ ಮಾಡುವ ಆಲೋಚನೆ ಬಂದಿದೆ. ನಂತರ ಗಿರ್‌ ತಳಿಯ ಹಸುವನ್ನು ಸಾಕಿ ಸಲಹುತ್ತಾರೆ. ಇದರ ಮೊದಲ ಕರುವನ್ನು ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಅರ್ಪಿಸಲು ನಿರ್ಧರಿಸಿದ್ದರು. ಅದರಂತೆಯೇ ಹಸು ಹಾಗೂ ಅದರ ಕರು ಭೀಷ್ಮನೊಂದಿಗೆ ಬೆಂಗಳೂರಿನ ಜಿಗಣಿಯಿಂದ ಕಾಲ್ನಡಿಗೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿದ್ದಾರೆ. 360 ಕಿಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಧರ್ಮಸ್ಥಳಕ್ಕೆ ಬಂದು ಮೊದಲ ಕರುವನ್ನು ಅರ್ಪಿಸಿದ್ದಾರೆ.

ಕಳಸದ ಶ್ರೇಯಾಂಸ ಬೆಂಗಳೂರು ಖಾಸಗಿ ಕಂಪನಿ ಉದ್ಯೋಗಿ. ಕೊರೊನಾದಿಂದ ಮನೆಯಲ್ಲೇ ಕೆಲಸ ಮಾಡುವ ಹೋಮ್ ವರ್ಕ್ ಫ್ರಮ್ ಹೋಮ್ ಪದ್ಧತಿ ಜಾರಿಯಾದ ನಂತರ ಬೆಂಗಳೂರಿನ ತನ್ನ ಬಾಡಿಗೆ ಮನೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ದನ ಸಾಕಲು ಯೋಚಿಸಿ ತನ್ನ ಮನೆಯ ಮೊದಲ ಕರುವನ್ನು ಸಾಕಬೇಕು ಎಂಬ ಕನಸು ಕಂಡರು. ಮೊದಲ ಗಂಡು ಕರುವನ್ನು ಕ್ಷೇತ್ರಕ್ಕೆ ತಲುಪಿಸುವ ಯೋಜನೆ ರೂಪಿಸಿದರು. ಎತ್ತಿಗೆ 1 ವರ್ಷ 9 ತಿಂಗಳು ಆಯಿತು. ಕೊನೆಗೂ ಧರ್ಮಸ್ಥಳ ಕ್ಷೇತ್ರಕ್ಕೆ ನಡೆದುಕೊಂಡು ಬಂದು ಅರ್ಪಿಸುವ ಚಿಂತನೆ ಮಾಡಿದರು. ಶ್ರೇಯಂಸ್ ಅದನ್ನು ಬೆಂಗಳೂರಿನಿಂದ ಹಳ್ಳಿಯ ರಸ್ತೆಯಲ್ಲಿ ನಡೆದು ಸಾಗಿದರೆ ಹುಲ್ಲು ಸಿಗುತ್ತದೆ, ಇದರಿಂದ ಆಹಾರದ ವ್ಯವಸ್ಥೆ ಆಗುತ್ತದೆ ಎಂದು ಯೋಜನೆ ರೂಪಿಸಿ ಅವರು ರಾಜ್ಯ ಹೆದ್ದಾರಿಗಳ ಮೂಲಕ ಹಾಯ್ದು ಬಂದಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಸುದೀರ್ಘ ಸತತ 36 ದಿನಗಳ ಕಾಲ ಕ್ರಮಿಸಿ ಧರ್ಮಸ್ಥಳ ತಲುಪಿದರೂ ಅವರು 1 ದಿನವೂ ಕಚೇರಿಗೆ ರಜೆ ಹಾಕಿಲ್ಲವಂತೆ. ಬೆಳಿಗ್ಗೆ ಹೊತ್ತು ನಡೆದರೆ ನಂತರ ವರ್ಕ್ ಫ್ರಂ ಹೋಮ್ ಕೆಲಸ ನಿರ್ವಹಿಸುತ್ತಿದ್ದರಂತೆ. ದಾರಿ ಮಧ್ಯೆ ಜನರು ಶ್ರೇಯಂಸ ಅವರಿಗೆ ಪ್ರೀತಿಯಿಂದ ಊಟ ತಿಂಡಿ ಕೊಟ್ಟಿದ್ದಾರೆ. ಕೆಲವರು ಅವರ ಊಟದ ಬಿಲ್ಲು ಸಹ ತೆಗೆದುಕೊಳ್ಳುತ್ತಿರಲಿಲ್ಲ
ಡಾ.ಹೆಗ್ಗಡೆಯವರಿಂದ ಫಲ ಅರ್ಪಣೆ ಗಿರ್‌ ಎತ್ತಿನೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಶ್ರೇಯಾಂಸ್‌ ಅವರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅವರನ್ನು ಆಶೀರ್ವದಿಸಿದರು. ಭೀಷ್ಮನೊಂದಿಗಿನ ಒಡನಾಟ ನೆನೆದು ಶ್ರೇಯಾಂಸ್‌ ಆನಂದಭಾಷ್ಪ ಸುರಿಸಿದರು.
ತನ್ನ ಮನೆಯಲ್ಲಿದ್ದ ಮೊದಲ ಗೀರ್ ತಳಿಯ ಕರುವನ್ನು ಧರ್ಮಸ್ಥಳಕ್ಕೆ ಕೊಡುತ್ತೇನೆಂದು ಅವರು ಪ್ರಾರ್ಥನೆ ಮಾಡಿಕೊಂಡಿದ್ದರಂತೆ. 2 ವರ್ಷಗಳ ಕೈಗೊಂಡಿದ್ದ ನಂತರ ಇದೀಗ 360 ಕಿಲೋಮೀಟರ್ ದೂರ ಗೀರ್ ತಳಿಯ ಎತ್ತಿನ ಜತೆ ನಡೆದುಕೊಂಡು ಬಂದಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement