ಮುಂಬೈ: ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ₹ 6.88 ಲಕ್ಷ ಕಸ್ಟಮ್ಸ್ ಸುಂಕವ ಕಟ್ಟಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ತಂಡದ ಐವರು ಸದಸ್ಯರ ಬ್ಯಾಗೇಜ್‌ನಲ್ಲಿ ₹ 18 ಲಕ್ಷ ಮೌಲ್ಯದ ವಾಚ್‌ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಸುಂಕ ವಸೂಲಿ ಮಾಡಲಾಗಿದೆ.
ನಟ ಶಾರುಖ್ ಖಾನ್, ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಸಿಂಗ್ ಮತ್ತು ಅವರ ತಂಡದ ಇತರ ಮೂವರು ಸದಸ್ಯರು ದುಬೈನಿಂದ ಚಾರ್ಟರ್ಡ್ ಫ್ಲೈಟ್‌ನಲ್ಲಿ ಮಧ್ಯರಾತ್ರಿ 12:30 ರ ಸುಮಾರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜನರಲ್ ಏವಿಯೇಷನ್ ಟರ್ಮಿನಲ್‌ಗೆ ಬಂದಿಳಿದರು. ಅವರ ಸಾಮಾನು ಸರಂಜಾಮುಗಳನ್ನು ಪರೀಕ್ಷಿಸಿದಾಗ, ಅಧಿಕಾರಿಗಳು ತಂಡದ ಸದಸ್ಯರ ಆರು ಬ್ಯಾಗ್‌ಗಳಲ್ಲಿ ಎರಡರಲ್ಲಿ ಆರು ಐಷಾರಾಮಿ ಕೈಗಡಿಯಾರಗಳನ್ನು ಪತ್ತೆ ಹಚ್ಚಿದರು.
ವಾಚ್‌ಗಳನ್ನು ₹17.86 ಲಕ್ಷ ರೂ.ಗಳ ಮೌಲ್ಯದ್ದಾಗಿದ್ದು, ಚಾಲ್ತಿಯಲ್ಲಿರುವ ದರದ ಆಧಾರದ ಮೇಲೆ ₹6.88 ಲಕ್ಷ ಕಸ್ಟಮ್ಸ್ ಸುಂಕವನ್ನು ವಿಧಿಸಲಾಗಿದೆ ಎಂದು ಕಸ್ಟಮ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೊತ್ತವನ್ನು ಶಾರುಖ್ ಪರವಾಗಿ ಅವರ ಅಂಗರಕ್ಷಕ ರವಿಶಂಕರ್ ಸಿಂಗ್ ಪಾವತಿಸಿದ್ದಾರೆ
ಸ್ಕ್ರೀನಿಂಗ್ ಸಮಯದಲ್ಲಿ, ಶಾರುಖ್ ಖಾನ್ ಮತ್ತು ಅವರ ತಂಡವನ್ನು ಮುಂಬೈ ವಿಮಾನ ನಿಲ್ದಾಣದ ಜನರಲ್ ಏವಿಯೇಷನ್ ಟರ್ಮಿನಲ್‌ನಲ್ಲಿ ಒಂದು ಗಂಟೆ ನಿಲ್ಲಿಸಲಾಯಿತು.ಸಿಂಗ್ ಅವರನ್ನು ಸ್ವಲ್ಪ ಸಮಯದವರೆಗೆ ನಟ ಶಾರುಖ್ ಅವರ ಪ್ರತಿನಿಧಿಯಾಗಿ ಉಳಿಯಲು ಸೂಚಿಸಲಾಯಿತು ಹಾಗೂ ಅವರು ಉಳಿದ ನಂತರ ಶಾರುಖ್ ಖಾನ್ ಸೇರಿದಂತೆ ಇತರರಿಗೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಹೋಗಲು ಅವಕಾಶ ನೀಡಲಾಯಿತು, ನಂತರ ಕಸ್ಟಮ್ಸ್ ಸುಂಕ ಪಾವತಿ ಪ್ರಕ್ರಿಯೆಯು ಪೂರ್ಣಗೊಂಡಿತು.
ಜನರಲ್ ಏವಿಯೇಷನ್ ಟರ್ಮಿನಲ್‌ನ ಕಸ್ಟಮ್ಸ್ ಸುಂಕ ಪಾವತಿ ಕೌಂಟರ್ ಕಾರ್ಯನಿರ್ವಹಿಸದ ಕಾರಣ, ಕಸ್ಟಮ್ಸ್ ಅಧಿಕಾರಿಗಳು ಶಾರುಖ್ ಖಾನ್ ಅಂಗರಕ್ಷಕನನ್ನು ವಿಮಾನ ನಿಲ್ದಾಣದ ಟರ್ಮಿನಲ್ 2 ಗೆ ಕರೆದೊಯ್ದರು, ಅಲ್ಲಿ ಸೂಪರ್‌ಸ್ಟಾರ್ ಪರವಾಗಿ ಸಿಂಗ್ ಮೊತ್ತವನ್ನು ಪಾವತಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ