ಕಾಂತಾರ ಸಿನೆಮಾದ ದೈವದ ವೇಷಧಾರಿಯಾಗಿ ಕಾರ್ಯಕ್ರಮಕ್ಕೆ ಬಂದ ತಹಶೀಲ್ದಾರ…! ಸೆಲ್ಫಿ ತೆಗೆದುಕೊಂಡ ಜಿಲ್ಲಾಧಿಕಾರಿ…!!

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನೆಮಾ ಎಲ್ಲೆಡೆ ಮೋಡಿ ಮಾಡುತ್ತಿದೆ. ಮೊದಲು ಕನ್ನಡದಲ್ಲಿ ತೆರೆಕಂಡು ನಂತರ ತೆಲುಗು, ತಮಿಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ಡಬ್ ಆಗಿತ್ತು. ಬಹುಭಾಷಾ ಜನರು ಕೂಡ ಈ ಸಿನಿಮಾದಿಂದ ಪ್ರಭಾವಿತರಾಗುತ್ತಿದ್ದಾರೆ. ಆಂಧ್ರಪ್ರದೇಶದ ತಹಸೀಲ್ದಾರ್ ಒಬ್ಬರು ‘ಕಾಂತಾರ’ ಸಿನಿಮಾದ ರೀತಿಯ ಗೆಟಪ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಾರೆ..!
ಗುಂಟೂರಿನ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ಆಂಧ್ರಪ್ರದೇಶ ಕಂದಾಯ ಇಲಾಖೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಕೋಟವಾಲದ ತಹಸೀಲ್ದಾರ್ ಪ್ರಸಾದ ರಾವ್ ಅವರು ‘ಕಾಂತಾರ’ ಸಿನೆಮಾದ ನಾಯಕನ ದೈವ ಪಾತ್ರದ ಗೆಟಪ್‌ನಲ್ಲಿ ಕಾಣಿಸಿಕೊಂಡರು. ಪ್ರಸಾದ ರಾವ್ ಕಲೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವರು ‘ಕಾಂತಾರ’ ಸಿನಿಮಾದ ದೌಯದಂತೆಯೇ ವೇಷತೊಟ್ಟು ಕಂಗೊಳಿಸಿದ್ದಾರೆ. ನೆರೆದಿದ್ದ ಜನರು ಪ್ರಸಾದ ರಾವ್ ಅವರ ಈ ಗೆಟಪ್ ನೋಡಿ ಬೆರಗಾಗಿದ್ದಾರೆ.
ಸ್ವತಃ ಗುಂಟೂರು ಜಿಲ್ಲಾಧಿಕಾರಿಯವರು ತಹಶೀಲ್ದಾರ ಪ್ರಸಾದ ರಾವ್ ಅವರನ್ನು ನೋಡಿ ಆಶ್ಚರ್ಯಚಕಿತರಾದರು. ಪ್ರಸಾದ ಅವರ ಕಲಾಪ್ರೇಮವನ್ನು ಮೆಚ್ಚಿದ ಜಿಲ್ಲಾಧಿಕಾರಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಕಾಂತಾರ ಶೈಲಿಯ ಪ್ರಸಾದ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ತೆಲುಗಿನಲ್ಲಿ 50 ಕೋಟಿ ರೂ.
ಕನ್ನಡದ ‘ಕಾಂತಾರ’ ತೆಲುಗಿಗೆ ಡಬ್ ಆಗಿ 30 ದಿನಗಳಾಗಿವೆ. ಇಲ್ಲಿಯವರೆಗೆ ಕಾಂತಾರ ತೆಲುಗು ಆವೃತ್ತಿ ಸುಮಾರು 50 ಕೋಟಿ ರೂ.ಗಳಿಕೆ ಮಾಡಿದೆ. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ ಅವರು ತಮ್ಮ ಗೀತಾ ಆರ್ಟ್ಸ್ ಮೂಲಕ ತೆಲುಗು ರಾಜ್ಯಗಳಲ್ಲಿ ಕಾಂತಾರ ಸಿನೆಮಾ ವಿತರಿಸಿದ್ದಾರೆ.
ಕಾಂತಾರ ಸಿನೆಮಾದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡಂ ಕಿಶೋರ್, ಅಚ್ಯುತಕುಮಾರ್, ಪ್ರಮೋದ ಶೆಟ್ಟಿ, ದೀಪಕ್ ರೈ, ಮಾನಸಿ ಸುಧೀರ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಅಜನೀಶ ಲೋಕನಾಥ ಸಂಗೀತ ನಿರ್ದೇಶನ ಮತ್ತು ಅರವಿಂದ ಕಶ್ಯಪ ಛಾಯಾಗ್ರಹಣವಿದೆ. ಈ ಸಿನಿಮಾ ಇದುವರೆಗೆ ವಿಶ್ವದಾದ್ಯಂತ 365 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಜಾನಪದ ಶೈಲಿಯ ದೈವಾರಾಧನೆಯನ್ನು ಅದ್ಭುತವಾಗಿ ತೋರಿಸಲಾಗಿದೆ.

4.7 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement