ಪ್ರಯಾಣಿಕರೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡುವ ದೆಹಲಿ ಕಾರು ಚಾಲಕ: ಬೆರಗಾದ ಇಂಟರ್ನೆಟ್‌…ವೀಕ್ಷಿಸಿ

ದೊಡ್ಡ ದೊಡ್ಡ ನಗರಗಳಲ್ಲಿ ಕಾರು ಓಡಿಸುವ ಚಾಲಕರು ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ವಿದೇಶಿಗರ ಜೊತೆಗೆ ಇಂಗ್ಲೀಷ್ ನಲ್ಲಿ ಮಾತಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ದೆಹಲಿಯ ಕ್ಯಾಬ್ ಚಾಲಕನೊಬ್ಬ ಉಳಿದವರಿಗಿಂತ ತೀರ ವಿಭಿನ್ನವಾಗಿದ್ದಾನೆ. ಈತ ತನ್ನ ಪ್ರಯಾಣಿಕನೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡುತ್ತಾರೆ.
ವ್ಯಕ್ತಿಯೊಬ್ಬರು ಕ್ಯಾಬ್ ನಲ್ಲಿ ಚಾಲಕನ ಜೊತೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ ಸಂಭಾಷಣೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ಅಪರೂಪದ ವಿದ್ಯಮಾನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಇಂಡಿಯಾ ಗೇಟ್ ಬಳಿ ರಸ್ತೆಯಲ್ಲಿ ಹೋಗುವಾಗ ಈ ವೀಡಿಯೊ ಮಾಡಲಾಗಿದೆ.
ಈ ವೀಡಿಯೋವನ್ನು ಚಿದ್‌ ಸಂಸ್ಕೃತಮ್ ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು “ಅದ್ಭುತ.. ದೆಹಲಿಯ ಈ ಕಾರು ಚಾಲಕ ಇಂದು ಬೆಳಿಗ್ಗೆ ನನ್ನೊಂದಿಗೆ ಸಂಸ್ಕೃತ ಭಾಷೆಯಲ್ಲಿ ಮಾತನಾಡಿದ್ದಾರೆ” ಎಂದು ಶೀರ್ಷಿಕೆಯನ್ನು ಸಹ ಅದಕ್ಕೆ ಬರೆದಿದ್ದಾರೆ. ಇದರ ಬಯೋ ಪ್ರಕಾರ, ವ್ಯಕ್ತಿಯ ಮಾತೃಭಾಷೆ ಸಂಸ್ಕೃತ ಎಂದು ಹೇಳಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ವೀಡಿಯೋದಲ್ಲಿ ಪ್ರಯಾಣಿಕ ತಾನು ಹೋಗುತ್ತಿರುವ ಕ್ಯಾಬ್ ಚಾಲಕನೊಂದಿಗೆ ಸಂಸ್ಕೃತದಲ್ಲಿ ಸಂಭಾಷಣೆ ಆರಂಭಿಸುವುದನ್ನು ತೋರಿಸುತ್ತದೆ. ಅವರಿಗೆ ಆಶ್ಚರ್ಯವಾಗುವಂತೆ, ಚಾಲಕನು ಸಹ ಅದೇ ಭಾಷೆಯಲ್ಲಿ ಉತ್ತರ ನೀಡಿದ್ದಾನೆ. ಆತನ ಸಂಸ್ಕೃತ ಮಾತಾಡುವುದನ್ನು ಕಂಡು ಪ್ರಯಾಣಿಕ ಚಾಲಕನ ಊರು ಹಾಗೂ ಕುಟುಂಬದ ಬಗ್ಗೆ ಬಗ್ಗೆ ವಿಚಾರಿಸಿದ್ದಾನೆ. ಅದಕ್ಕೆ ಅವನು ತನ್ನ ಹೆಸರು ಅಶೋಕ ಮತ್ತು ಆತ ತಾನು ಉತ್ತರ ಪ್ರದೇಶದ ಗೊಂಡಾ ಮೂಲದವನು ಎಂದು ಉತ್ತರಿಸಿದ್ದಾನೆ. ಚಾಲಕನು ತನ್ನ ಕುಂಟುಂಬದ ಬಗ್ಗೆ ಕೇಳಿದ ಪ್ರಶ್ನೆ ಸೇರಿದಂತೆ ಎಲ್ಲ ಪ್ರಶ್ನೆಗಳಿಗೆ ಕ್ಯಾಬ್‌ ಚಾಲಕ ನಿರರ್ಗಳವಾಗಿ ಸಂಸ್ಕೃತದಲ್ಲಿಯೇ ಉತ್ತರಿಸಿದ್ದಾನೆ.

ಈ ವೀಡಿಯೋ 2.62 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು 2,400 ಕ್ಕೂ ಹೆಚ್ಚು ರೀಟ್ವೀಟ್ ಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಆಹ್ಲಾದಕರ ಸಂಭಾಷಣೆಯಿಂದ ಪ್ರಭಾವಿತರಾಗಿದ್ದಾರೆ ಮತ್ತು ವೀಡಿಯೋದಲ್ಲಿನ ಜನರನ್ನು ಶ್ಲಾಘಿಸಿದ್ದಾರೆ.
ಕೆಲವರು ಸಂಸ್ಕೃತದಲ್ಲೇ ಈ ವೀಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. “ಈ ಭಾಷೆಯನ್ನು ಪುನರುಜ್ಜೀವನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಈ ಭಾಷೆಯನ್ನು ನಾವು ಪ್ರಚಾರ ಮಾಡಬೇಕು” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ಕೇಳಲು ತುಂಬಾ ಸಂತೋಷಕರವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಕಳೆದ ತಿಂಗಳು, ಅದೇ ಪ್ರಯಾಣಿಕ ಹುಡುಗರ ಗುಂಪಿನ ನಡುವಿನ ಗಲ್ಲಿ ಪಂದ್ಯದ ನೇರ ವ್ಯಾಖ್ಯಾನವನ್ನು ಸಂಸ್ಕೃತದಲ್ಲಿ ಮಾಡಿದ ನಂತರ ವೈರಲ್ ಆಗಿತ್ತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಶತ್ರು ರಾಷ್ಟ್ರಗಳ ಡ್ರೋನ್‌ ಪತ್ತೆಹಚ್ಚಿ ಹೊಡೆದುರುಳಿಸಲು ಭಾರತದ ಸೇನೆಯಿಂದ ಗಿಡುಗನಿಗೆ ತರಬೇತಿ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement