ಬ್ರೆಜಿಲ್‌ನಲ್ಲಿ ಪ್ರಾರಂಭವಾದ ಕೇವಲ 48 ಗಂಟೆಗಳಲ್ಲಿ ದೇಶದ ಅಗ್ರ ಅಪ್ಲಿಕೇಶನ್ ಆದ ಟ್ವಿಟರ್‌ನ ಭಾರತದ ಪ್ರತಿಸ್ಪರ್ಧಿ ಮೈಕ್ರೋ ಬ್ಲಾಗಿಂಗ್ ಸೈಟ್ ಕೂ…!

ನವದೆಹಲಿ : ಭಾರತದ ಟ್ವಿಟರ್ ಪ್ರತಿಸ್ಪರ್ಧಿ – ಮೈಕ್ರೋಬ್ಲಾಗಿಂಗ್ ಸೈಟ್ ಕೂ (Koo) – ಬ್ರೆಜಿಲ್‌ನಲ್ಲಿ ಈಗ ಅಗ್ರ ಅಪ್ಲಿಕೇಶನ್ ಆಗಿದೆ, ಇದು ದಕ್ಷಿಣ ಅಮೆರಿಕಾದ ಬ್ರೆಜಿಲ್‌ನಲ್ಲಿ ಪ್ರಾರಂಭವಾದ ಕೇವಲ 48 ಗಂಟೆಗಳ ನಂತರ ಈ ಸಾಧನೆ ಮಾಡಿದೆ ಎಂದು ಕಂಪನಿಯು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪೋರ್ಚುಗೀಸ್ ಅನ್ನು ಭಾಷಾ ಆಯ್ಕೆಯಾಗಿ ಸೇರಿಸಿದಾಗ ಅದರ ಬಹುಭಾಷಾ ಅಪ್ಲಿಕೇಶನ್ ಬ್ರೆಜಿಲ್ ಅನ್ನು ಪ್ರವೇಶಿಸಿತು ಎಂದು ಕೂ ಹೇಳಿದೆ. ಪೋರ್ಚುಗೀಸ್-ಮಾತನಾಡುವ ಮಾರುಕಟ್ಟೆಗೆ ಅಪ್ಲಿಕೇಶನ್ ಅನ್ನು ಯಾವಾಗ ಪ್ರಾರಂಭಿಸಲಾಯಿತು ಎಂದು ಕಂಪನಿಯು ನಿಖರವಾಗಿ ಹೇಳಲಿಲ್ಲ, ಆದರೆ ಬ್ರೆಜಿಲ್‌ನಲ್ಲಿ ಎರಡು ದಿನಗಳಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ ಎಂದು ವಿವರಿಸಿದೆ. ಕೂ (Koo) ಈಗ 11 ಭಾಷೆಗಳಲ್ಲಿ ಲಭ್ಯವಿದೆ.
ಬ್ಲಾಗ್ ಸೈಟ್ ಮೀಡಿಯಮ್‌ನಲ್ಲಿ ನವೆಂಬರ್ 18ರ ಪೋಸ್ಟ್‌ನಲ್ಲಿ – ಕೂ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕ ಅವರು 16 ಕೋಟಿಗಿಂತಲೂ ಹೆಚ್ಚು ಇಂಟರ್ನೆಟ್ ಬಳಕೆದಾರರ ರಾಷ್ಟ್ರವಾದ ಬ್ರೆಜಿಲ್‌ನಲ್ಲಿ ಕೂ ಪ್ರಾರಂಭದ ಕುರಿತು ಮಾತನಾಡಿದ್ದಾರೆ.

ಪ್ರಾರಂಭವಾದಾಗಿನಿಂದ, “Koo ಇತ್ತೀಚೆಗೆ 20 ಲಕ್ಷ ಕೂಸ್‌ ( Koos ಅಥವಾ ಪೋಸ್ಟ್‌ಗಳು) ಮತ್ತು 48 ಗಂಟೆಗಳ ಒಳಗೆ 1 ಕೋಟಿ ಲೈಕ್‌ಗಳನ್ನು ಬ್ರೆಜಿಲ್‌ನಲ್ಲಿ ಮಾತ್ರ ಬಳಕೆದಾರರಿಂದ ವೀಕ್ಷಿಸಲ್ಪಟ್ಟಿದೆ ಎಂದು ಹೇಳಿದ್ದಾರೆ. ಕೂ ನವೆಂಬರ್ 21ರ ಪತ್ರಿಕಾ ಟಿಪ್ಪಣಿಯು ಬ್ರೆಜಿಲ್‌ನಲ್ಲಿ ಬಿಡುಗಡೆಯನ್ನು ಪ್ರಕಟಿಸಿತು.
ಕೂ (Koo)ನ ಸಿಇಒ ಮತ್ತು ಸಹ-ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅದೇ ಪತ್ರಿಕಾ ಟಿಪ್ಪಣಿಯಲ್ಲಿ, “ದೇಶದಲ್ಲಿ ಹೆಸರಾದ 48 ಗಂಟೆಗಳಲ್ಲಿ ಬ್ರೆಜಿಲ್‌ನ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಕೂ (Koo) ಅಗ್ರ ಅಪ್ಲಿಕೇಶನ್ ಆಗಿರುವುದು ಅದ್ಭುತವಾಗಿದೆ. ಈ ಬೆಂಬಲವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸ್ಥಳೀಯ ಭಾಷೆ ಮಾತನಾಡುವ ಬಳಕೆದಾರರಿಗೆ ನಾವು ಸಮಸ್ಯೆಯನ್ನು ಪರಿಹರಿಸುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

ಮಯಾಂಕ್ ಬಿಡವಟ್ಕ ಅವರು, ಟೆಕ್ ಉತ್ಪನ್ನ ಜಗತ್ತಿನಲ್ಲಿ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಆಂದೋಲನವನ್ನು ಪ್ರಾರಂಭಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.
ಅದರ ವೇದಿಕೆಯು ಈಗ ಬ್ರೆಜಿಲಿಯನ್ ಪ್ರಸಿದ್ಧ ಗಾಯಕ ಕ್ಲೌಡಿಯಾ ಲೀಟ್ಟೆ, ನಟರಾದ ಬಾಬು ಸಂತಾನಾ, ಲೇಖಕಿ ರೋಸಾನಾ ಹರ್ಮನ್ ಮತ್ತು ಮಾಧ್ಯಮ ಕಂಪನಿ ಚೋಕ್ವಿಯಂತಹವರನ್ನು ಹೊಂದಿದೆ ಎಂದು ಹೇಳಿದ್ದಾರೆ.
“ಅಪ್ಲಿಕೇಶನ್ ಅನ್ನು ಹೆಚ್ಚಿನ ದೇಶಗಳಿಗೆ ಲಭ್ಯವಾಗುವಂತೆ ಮಾಡುವ ಮೂಲಕ ಮತ್ತು ಬಹು ಜಾಗತಿಕ ಭಾಷೆಗಳಲ್ಲಿ ಪ್ರಾರಂಭಿಸುವ ಮೂಲಕ ಜಾಗತಿಕವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಕೂ ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement