ಅಸ್ಸಾಂ-ಮೇಘಾಲಯ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಸಾವು : 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಶಿಲ್ಲಾಂಗ್: ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಮುಕ್ರೋಹ್ ಪ್ರದೇಶದಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಮೇಘಾಲಯದ ಐವರು ಮತ್ತು ಅಸ್ಸಾಂ ಫಾರೆಸ್ಟ್ ಗಾರ್ಡ್‌ನ ಒಬ್ಬರು ಸೇರಿದಂತೆ ಒಟ್ಟು ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ತಡೆಯಲು, ಈ ಪ್ರದೇಶದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಘಟನೆ ಸಂಬಂಧ ಮೇಘಾಲಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

“ಘಟನೆಯಲ್ಲಿ ಮೇಘಾಲಯದ ಐವರು ಮತ್ತು ಒಬ್ಬ ಅಸ್ಸಾಂ ಫಾರೆಸ್ಟ್ ಗಾರ್ಡ್ ಸೇರಿದಂತೆ ಒಟ್ಟು ಆರು ಜನರು ಮೃತಪಟ್ಟಿದ್ದಾರೆ” ಎಂದು ಮುಖ್ಯಮಂತ್ರಿ ಹೇಳಿದರು.
“ವರದಿಗಳ ಪ್ರಕಾರ, ಅಸ್ಸಾಂ ಅರಣ್ಯ ಸಿಬ್ಬಂದಿ ಅಸ್ಸಾಂ ಪೊಲೀಸರೊಂದಿಗೆ ಮರ ಸಾಗಿಸುತ್ತಿದ್ದ ಟ್ರಕ್ ಅನ್ನು ಹಿಂಬಾಲಿಸಿದರು ಮತ್ತು ಅಸ್ಸಾಂ ಪೊಲೀಸರು ಮತ್ತು ಅಸ್ಸಾಂ ಅರಣ್ಯ ರಕ್ಷಕರು ಟ್ರಕ್‌ ಅನ್ನು ವಶಕ್ಕೆ ತೆಗೆದುಕೊಂಡರು. ಇದನ್ನು ಕೇಳಿದ ಮುಕ್ರೋಹ್ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅಸ್ಸಾಂ ಪೊಲೀಸರನ್ನು ಹಾಗೂ ಮತ್ತು ಅರಣ್ಯ ಸಿಬ್ಬಂದಿ ಸುತ್ತುವರೆದರು ಎಂದು ಸಂಗ್ಮಾ ಹೇಳಿದರು.
ಈ ಘಟನೆ ನಂತರ ಮೇಘಾಲಯ ಸರ್ಕಾರವು ನವೆಂಬರ್ 22 ರಿಂದ 48 ಗಂಟೆಗಳ ಕಾಲ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಪಶ್ಚಿಮ ಜೈನ್ತಿಯಾ ಹಿಲ್ಸ್, ಪೂರ್ವ ಜೈನ್ತಿಯಾ ಹಿಲ್ಸ್, ಪೂರ್ವ ಖಾಸಿ ಹಿಲ್ಸ್, ರಿ-ಭೋಯ್, ಪೂರ್ವ ಪಶ್ಚಿಮ ಖಾಸಿ ಹಿಲ್ಸ್, ಪಶ್ಚಿಮ ಖಾಸಿ ಹಿಲ್ಸ್ ಮತ್ತು ನೈಋತ್ಯ ಖಾಸಿ ಹಿಲ್ಸ್ ಸೇರಿದಂತೆ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಪ್ರಮುಖ ಸುದ್ದಿ :-   ಮಿಜೋರಾಂ ವಿಧಾನಸಭಾ ಚುನಾವಣೆ ಮತ ಎಣಿಕೆ : ಆಡಳಿತಾರೂಢ ಎಂಎನ್‌ಎಫ್ ಪಕ್ಷಕ್ಕೆ ಭಾರೀ ಹಿನ್ನಡೆ

ಏತನ್ಮಧ್ಯೆ, ಮೇಘಾಲಯ ಸರ್ಕಾರವು ಇಂದು, ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಶಿಲ್ಲಾಂಗ್‌ನಿಂದ ಮುಕ್ರೋ, ಪಶ್ಚಿಮ ಜೈನ್ತಿಯಾ ಹಿಲ್ಸ್, ಜೊವಾಯ್‌ನಲ್ಲಿ ಅಹಿತಕರ ಘಟನೆ ಸಂಭವಿಸಿದೆ ಎಂದು ವರದಿಗಳು ಬಂದಿವೆ. ಇದು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಸಾಧ್ಯತೆಯಿದೆ. ಮತ್ತು ಪಶ್ಚಿಮ ಜೈನ್ತಿಯಾ ಹಿಲ್ಸ್, ಈಸ್ಟ್ ಜೈನ್ತಿಯಾ ಹಿಲ್ಸ್, ಈಸ್ಟ್ ಖಾಸಿ ಹಿಲ್ಸ್, ರಿ-ಭೋಯ್, ಈಸ್ಟರ್ನ್ ವೆಸ್ಟ್ ಖಾಸಿ ಹಿಲ್ಸ್, ವೆಸ್ಟ್ ಖಾಸಿ ಹಿಲ್ಸ್ ಮತ್ತು ನೈಋತ್ಯ ಖಾಸಿ ಹಿಲ್ಸ್‌ಗಳಲ್ಲಿ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯನ್ನು ಉಂಟುಮಾಡುತ್ತದೆ, ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸಬಹುದು ಎಂದು ಹೇಳಿದೆ.
ಕಾನೂನು ಉಲ್ಲಂಘಿಸುವವರಿಗೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 188 ಮತ್ತು ಭಾರತೀಯ ಟೆಲಿಗ್ರಾಫ್ ಆಕ್ಟ್, 1885 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement