ಮಂಗಳೂರು: ಕಾಡಿನ ವಿಷಕಾರಿ ಅಣಬೆ ಸೇವನೆ ಮಾಡಿದ ನಂತರ ತಂದೆ ಮತ್ತು ಮಗ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದ ವರದಿಯಾಗಿದೆ.
ಮೃತರನ್ನು ಮಿಯ್ಯಾರು ಪಲ್ಲದಪಲಿಕೆ ನಿವಾಸಿಗಳಾಗಿರುವ ಗುರುವ ಮೇರ(80) ಮತ್ತು ಅವರ ಪುತ್ರ ಓಡಿಯಪ್ಪ (41) ಎಂದು ಗುರುತಿಸಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ವಿವಿಧ ರೀತಿಯ ಅಣಬೆಗಳು ಬೆಳೆಯುತ್ತವೆ. ಅದರಂತೆ ಗುರುವ ಮೇರ ಮತ್ತು ಮಗ ಓಡಿಯಪ್ಪ ಅವರು ಕಾಡಿನಿಂದ ಅಣಬೆ ತಂದು ಸಾಂಬಾರ್ ಮಾಡಿ ತಿಂದಿದ್ದರು ಎಂದು ಹೇಳಲಾಗಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಅವರು ನಿನ್ನೆ ಕಾಡಿನಿಂದ ತಂದಿದ್ದ ಅಣಬೆ ವಿಷಕಾರಿಯಾಗಿತ್ತು. ಈ ಬಗ್ಗೆ ಅರಿವಿಲ್ಲದೆ ಅವರು ಸಾಂಬಾರು ಮಾಡಿ ತಿಂದಿದ್ದಾರೆ. ಇಂದು, ಮಂಗಳವಾರ ಬೆಳಗ್ಗೆ ಗುರುವ ಮೇರ ಅವರ ಮತ್ತೋರ್ವ ಮಗ ಮನೆಯಿಂದ ಹೊರಗೆ ಬಂದು ನೋಡಿದಾಗ ಅಂಗಳದಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಬೆಳಿಗ್ಗೆ ಇದನ್ನು ನೋಡಿದ ಅವರ ಸಹೋದರ, ಧರ್ಮಸ್ಥಳ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಾವು ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಅಣಬೆ ಸೇವಿಸಿರುವುದು ದೃಢಪಟ್ಟಿದೆ, ಮಗ ಅಣಬೆ ತಿಂದಿದ್ದನ್ನು ಉಲ್ಲೇಖಿಸಿ ದೂರು ದಾಖಲಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ತನಿಖೆ ನಂತರ ತಿಳಿದು ಬರಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ