ಪುನರ್ವಸತಿ ಕೇಂದ್ರದಿಂದ ಹಿಂದುರುಗಿದ ಕೆಲವೇ ದಿನಗಳಲ್ಲಿ ಇಡೀ ಕುಟುಂಬವನ್ನೇ ಕೊಂದ ಮಾದಕ ವ್ಯಸನಿ

ನವದೆಹಲಿ: ಮಾದಕ ವ್ಯಸನಿಯೊಬ್ಬ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ತನ್ನ ಇಡೀ ಕುಟುಂಬವನ್ನು ಕೊಂದಿರುವ ಘಟನೆ ದೆಹಲಿಯನ್ನು ಬೆಚ್ಚಿಬೀಳಿಸಿದೆ.
25 ವರ್ಷದ ಕೇಶವ ಎಂಬಾತ ಜಗಳದ ನಂತರ ತನ್ನ ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ಇಂದು, ಬುಧವಾರ ತಿಳಿಸಿದ್ದಾರೆ.
ನೈಋತ್ಯ ದೆಹಲಿಯ ಪಾಲಮ್‌ನಲ್ಲಿರುವ ಅವರ ಮನೆಯಲ್ಲಿ ನಿನ್ನೆ ರಾತ್ರಿ ಮೃತದೇಹಗಳು ಪತ್ತೆಯಾದ ನಂತರ ಕೇಶವನನ್ನು ಬಂಧಿಸಲಾಯಿತು. ಮನೆ ರಕ್ತಮಯವಾಗಿತ್ತು. ಆತ ತೀಕ್ಷ್ಣವಾದ ವಸ್ತುವನ್ನು ಬಳಸಿ ಕುಟುಂಬದವರ ಕತ್ತು ಸೀಳಿದ್ದಾನೆ ಮತ್ತು ಅನೇಕ ಬಾರಿ ಇರಿದಿದ್ದಾನೆ ಎಂದು ಪೊಲೀಸರು ಭಯಾನಕ ವಿವರಗಳನ್ನು ಹಂಚಿಕೊಂಡಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕೇಶವನ  ಅಜ್ಜಿ ದೀವಾನಾ ದೇವಿ (75), ತಂದೆ ದಿನೇಶ (50), ತಾಯಿ ದರ್ಶನಾ ಮತ್ತು ಸಹೋದರಿ ಊರ್ವಶಿ (18) ಅವರ ರಕ್ತಸಿಕ್ತ ಶವಗಳು ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ.
ತಂದೆ-ತಾಯಿ ಶವಗಳು ಸ್ನಾನಗೃಹದಲ್ಲಿದ್ದರೆ ಮತ್ತು ಆತನ ಸಹೋದರಿ ಮತ್ತು ಅಜ್ಜಿಯ ಮೃತದೇಹಗಳು ಇತರ ಕೊಠಡಿಗಳಲ್ಲಿ ಕಂಡುಬಂದಿವೆ.
ಕೇಶವ ಒಂದು ತಿಂಗಳ ಹಿಂದೆ ಗುರ್ಗಾಂವ್‌ನಲ್ಲಿ ಕೆಲಸ ಬಿಟ್ಟಿದ್ದ ಮತ್ತು ದೀಪಾವಳಿಯಿಂದ ನಿರುದ್ಯೋಗಿಯಾಗಿದ್ದ. ಹಾಗೂ ಕೊಲೆ ಮಾಡುವಾಗ ಆತ ಡ್ರಗ್ಸ್ ನ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 10:30ರ ಸುಮಾರಿಗೆ ಮನೆಯಿಂದ ಕಿರುಚಾಟ ಕೇಳಿ ಬಂದಿದ್ದು, ಅದೇ ಕಟ್ಟಡದಲ್ಲಿದ್ದ ನೆರೆಹೊರೆಯವರು ಸಂಬಂಧಿಕರು ತಕ್ಷಣವೇ ಮಾಹಿತಿ ನೀಡಿ ಪೊಲೀಸರನ್ನು ಕರೆದಿದ್ದಾರೆ. ಕೇಶವ ಮನೆಯಲ್ಲಿದ್ದು, ಪರಾರಿಯಾಗಲು ಯೋಜನೆ ರೂಪಿಸಿದ್ದು, ಸಂಬಂಧಿಕರು ಆತನನ್ನು ಹಿಡಿದಿದ್ದಾರೆ.
ದೆಹಲಿಯ ಮನೆಯಲ್ಲಿ ಶ್ರದ್ಧಾ ವಾಕರ್ ಅವರನ್ನು ಆಕೆಯ ಸಂಗಾತಿ ಆಫ್ತಾಬ್ ಪೂನಾವಾಲಾ ಆಘಾತಕಾರಿ ಕೊಂದ ಸುದ್ದಿ ಹೊರಬಿದ್ದ ಒಂದು ವಾರದ ನಂತರ ಈ ಕೊಲೆಗಳು ನಡೆದವು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಮನೀಶ ಸಿಸೋಡಿಯಾ ಹಲವು ಬಾರಿ ಫೋನ್ ಬದಲಾಯಿಸಿದರು, ಸಾಕ್ಷ್ಯ ನಾಶಪಡಿಸಿದರು: ಮದ್ಯ ನೀತಿ ಪ್ರಕರಣದಲ್ಲಿ ಇ.ಡಿ. ಆರೋಪ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement