ಬಾಗಲಕೋಟೆ: ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನು ಹೊರತೆಗೆದ ವೈದ್ಯರು…!

ಬಾಗಲಕೋಟೆ: ವೈದ್ಯರು ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನು ಹೊರತೆಗೆದಿದ್ದಾರೆ…! ವೈದ್ಯರು ಎಂಡೋಸ್ಕೋಪಿ ಮೂಲಕ 187 ನಾಣ್ಯಗಳನ್ನು ಹೊರತೆಗೆದಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ದ್ಯಾ‌ಮಪ್ಪ ಹರಿಜನ ಎಂಬ 58 ವರ್ಷದ ವ್ಯಕ್ತಿ ಇಷ್ಟೊಂದು ನಾಣ್ಯಗಳನ್ನು ನುಂಗಿದ್ದರು. ಸದ್ಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1 ರ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ಹೊರ ತೆಗೆದಿದ್ದಾರೆ.

ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡ ವೇಳೆ ನಾಣ್ಯ ನುಂಗಿದ್ದರು. ಮಂಗಳವಾರ ಅವರಿಗೆ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಬಸವೇಶ್ವರ ಸಂಘದ ಕುಮಾರೇಶ್ವರ ಆಸ್ಪತ್ರೆಗೆ ಕರೆತಂದಿದ್ದಾರೆ.  ಈ ವೇಳೆ ವೈದ್ಯರು ಎಕ್ಸರೇ ಪರೀಕ್ಷಿಸಿದಾಗ ವೃದ್ಧನ ಹೊಟ್ಟೆಯಲ್ಲಿ 187 ನಾಣ್ಯಗಳಿರುವುದು ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಕುಮಾರೇಶ್ವರ ಆಸ್ಪತ್ರೆಯಲ್ಲಿ ಈಶ್ವರ ಕಲಬುರ್ಗಿ ಹಾಗೂ ತಂಡ ಎರಡೂವರೆ ತಾಸುಗಳ ಶಸ್ತ್ರ ಚಿಕಿತ್ಸೆ ಮಾಡಿ ಅಂದಾಜು ಒಂದು ಕೆಜಿ ತೂಕದ 187 ನಾಣ್ಯಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಧಾರವಾಡ : ಅಳು ನಿಲ್ಲಿಸದೆ ನಿದ್ದೆ ಹಾಳು ಮಾಡಿತೆಂದು 1 ವರ್ಷದ ಮಗುವನ್ನು ಗೋಡೆಗೆ ಎಸೆದು ಸಾಯಿಸಿದ ತಂದೆ...!

ಡಾ.ಈಶ್ವರ ಕಲಬುರ್ಗಿ ಅವರು ದ್ಯಾಮಪ್ಪನ ಹೊಟ್ಟೆಯನ್ನು ಎಕ್ಸ್-ರೇ ಮೂಲಕ ಪರೀಕ್ಷಿಸಿದಾಗ ನಾಣ್ಯಗಳು ಕಂಡುಬಂದವು. ರೋಗಿಯ ಜೀವಕ್ಕೆ ಅಪಾಯ ಇರುವುದು ತಿಳಿದನಂತರ ಎಂಡೊಸ್ಕೋಪಿ ಮಾಡಲು ನಿರ್ಧರಿಸಲಾಯತು. ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯ ಡಾ.ಈಶ್ವರ ಕಲಬುರ್ಗಿ ಮತ್ತು ಡಾ.ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ.ಅರ್ಚನಾ ಮತ್ತು ಡಾ.ರೂಪಾ ಹುಲಕುಂದೆ ಅವರು ಯಶಸ್ವಿಯಾಗಿ ನಾಣ್ಯಗಳನ್ನು ಹೊರತೆಗೆದಿದ್ದಾರೆ. ಸದ್ಯ ದ್ಯಾಮಪ್ಪ, ಚೇತರಿಸಿಕೊಳ್ಳುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement