ಕಾರ್ಯಕ್ರಮದಲ್ಲೇ ಕೆಂಡಾಮಂಡಲವಾದ ಮಮತಾ ಬ್ಯಾನರ್ಜಿ : ಅಧಿಕಾರಿಗಳು ತೀವ್ರ ತರಾಟೆಗೆ-ಕಾರಣ ಇಲ್ಲಿದೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಳಿಗಾಲದ ಬಟ್ಟೆಗಳನ್ನು ವಿತರಿಸಲು ಮಂಗಳವಾರ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದರು. ಆದರೆ ಅದು ಇನ್ನೂ ಸ್ಥಳಕ್ಕೆ ತಲುಪಿಲ್ಲ ಎಂದು ತಿಳಿದ ನಂತರ ಅವರು ತಮ್ಮ ಶಾಂತತೆ ಕಳೆದುಕೊಂಡರು ಮತ್ತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಚಳಿಗಾಲದ ಬಟ್ಟೆಗಳನ್ನು ವಿತರಿಸಲು ಉತ್ತರ 24 ಪರಗಣ ಜಿಲ್ಲೆಯಲ್ಲಿದ್ದರು. ಸಿಟ್ಟು ಗೋಚರವಾಗುವಂತೆ ಕೋಪಗೊಂಡ ಮಮತಾ ಬ್ಯಾನರ್ಜಿ ಅವರು ತಮ್ಮ ಭಾಷಣ ನಿಲ್ಲಿಸಿದರು ಮತ್ತು ಸಾರ್ವಜನಿಕವಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರನ್ನು ಕರೆದು ತರಾಟೆಗೆ ತೆಗೆದುಕೊಂಡರು.
ಕಾರ್ಯಕ್ರಮದ ಸ್ಥಳದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮತ್ತು ಬಂಗಾಳದ ಮುಖ್ಯ ಕಾರ್ಯದರ್ಶಿ ಡಾ ಹರಿ ಕೃಷ್ಣ ದ್ವಿವೇದಿ ಉಪಸ್ಥಿತರಿದ್ದರು.

ಮಮತಾ ಬ್ಯಾನರ್ಜಿ ಅವರು ವೇದಿಕೆಗೆ ತಕ್ಷಣವೇ 15,000 ಬಟ್ಟೆಗಳನ್ನು ತರುವಂತೆ ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ಆದೇಶಿಸಿದರು. ಈ ಬಟ್ಟೆಗಳನ್ನು ವೇದಿಕೆಯ ಬದಲಾಗಿ ಬ್ಲಾಕ್ ಡೆವಲಪ್ ಮೆಂಟ್ ಆಫೀಸರ್ (ಬಿಡಿಒ) ಕಚೇರಿಯಲ್ಲಿ ಇಡಲಾಗಿತ್ತು. ನಂತರ ಸಾಮಗ್ರಿಗಳು ಬರುವವರೆಗೆ 18 ನಿಮಿಷ ಕಾದು ಅದು ಬಂದ ನಂತರ ಸಾರ್ವಜನಿಕರಿಗೆ ವಿತರಿಸಿದರು.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

 

“ಬೆಚ್ಚಗಿನ ಬಟ್ಟೆ ಬರುವವರೆಗೆ ನಾನು ವೇದಿಕೆಯ ಮೇಲೆ ಕಾಯುತ್ತೇನೆ, ಅವರು ಬಿಡಿಒ ಕಚೇರಿಯಲ್ಲಿ ಏಕೆ ಮಲಗಿದ್ದಾರೆ?” ಎಂದು ಪ್ರಶ್ನಿಸಿದರು.
ಬಟ್ಟೆ ಬರುವುದನ್ನೇ ಕಾಯುತ್ತಿದ್ದಾಗ ಇನ್ಸ್ ಪೆಕ್ಟರ್ ಅಥವಾ ಜಿಲ್ಲಾಧಿಕಾರಿ ಯಾರೇ ಆದರೂ ಸರಿಯಾಗಿ ಕೆಲಸ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮುಂದಿನ ದಿನದಲ್ಲಿ, ಮುಖ್ಯಮಂತ್ರಿಗಳು ಸುಂದರಬನ್ಸ್ ಮತ್ತು ಬಸಿರ್ಹತ್ ಅನ್ನು ದಕ್ಷಿಣ ಮತ್ತು ಉತ್ತರ 24 ಪರಗಣಗಳಿಂದ ರಚಿಸಲಾದ ಎರಡು ಹೊಸ ಜಿಲ್ಲೆಗಳಾಗಿ ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ.

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement