ಮುಂಬೈನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವಾಗ ಕೊರಿಯಾದ ಯೂಟ್ಯೂಬರ್ ಯುವತಿಗೆ ಕಿರುಕುಳ, 2 ಬಂಧನ: ದೃಶ್ಯ ಸೆರೆ

ಮುಂಬೈ: ಮುಂಬೈನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ದಕ್ಷಿಣ ಕೊರಿಯಾದ ಯುವತಿಗೆ ಕಿರುಕುಳ ನೀಡಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಆರೋಪಿಗಳಲ್ಲಿ ಒಬ್ಬ ಕಳೆದ ರಾತ್ರಿ ಖಾರ್‌ನಲ್ಲಿ ಯೂ ಟ್ಯೂಬರ್ ಯುವತಿಯ ಕೈ ಹಿಡಿದು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆಕೆಯ ವಿರೋಧದ ನಡುವೆಯೂ ಆ ವ್ಯಕ್ತಿ ಆಕೆಯ ಹತ್ತಿರ ಬಂದು ಆಕೆಯ ಕೈ ಹಿಡಿದಿರುವುದು ವೀಡಿಯೊದಲ್ಲಿದೆ.
ಯುವತಿ ದೂರ ಹೋಗುತ್ತಿದ್ದಂತೆ, ಆತ ಮತ್ತೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕಿನಲ್ಲಿ ಕಾಣಿಸಿಕೊಂಡು ಯುವತಿಗೆ ಲಿಫ್ಟ್ ನೀಡುವುದಾಗಿ ಹೇಳುತ್ತಾನೆ, ಆದರೆ ಮಹಿಳೆ ಅದನ್ನು ನಿರಾಕರಿಸುತ್ತಾಳೆ ಮತ್ತು ತನ್ನ ಮನೆ ಹತ್ತಿರದಲ್ಲಿದೆ ಎಂದು ಇಂಗ್ಲಿಷ್‌ನಲ್ಲಿ ಹೇಳುವುದು ವೀಡಿಯೊದಲ್ಲಿ ಕಂಡುಬಂದಿದೆ.

ಯುವತಿ, ವೀಡಿಯೊ ರೀಟ್ವೀಟ್ ಮಾಡುತ್ತಾ, ಆರೋಪಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಇರುವುದರಿಂದ ಪರಿಸ್ಥಿತಿಯನ್ನು ಕೈಮೀರಿ ಹೋಗದಂತೆ ಪ್ರಯತ್ನಿಸಿದೆ ಎಂದು ಹೇಳಿದ್ದಾಳೆ.
“ಕಳೆದ ರಾತ್ರಿ ಲೈವ್‌ ಸ್ಟ್ರೀಮ್‌ನಲ್ಲಿ ಒಬ್ಬ ವ್ಯಕ್ತಿ ನನಗೆ ಕಿರುಕುಳ ನೀಡಿದನು. ನಾನು ಪರಿಸ್ಥಿತಿಯನ್ನು ಕೈಮೀರಿ ಹೋಗದಂತೆ ಮತ್ತು ಆ ವ್ಯಕ್ತಿ ತನ್ನ ಸ್ನೇಹಿತನ ಜೊತೆಯಲ್ಲಿದ್ದ ಕಾರಣ ನಾನೇ ಅಲ್ಲಿಂದ ಹೊರಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಮತ್ತು ಕೆಲವು ಜನರು ನಾನು ತುಂಬಾ ಸ್ನೇಹಪರವಾಗಿ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇದು ಪ್ರಾರಂಭವಾಯಿತು ಎಂದು ಹೇಳಿದಳು.

ಇದು ಸ್ಟ್ರೀಮಿಂಗ್ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತದೆ” ಎಂದು ಹೇಳಿದ್ದಾಳೆ. ವೀಡಿಯೋ ಆಧರಿಸಿ ಪೊಲೀಸರು ಸ್ವಯಂ ಪ್ರೇರಿತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement