ಡಿಸೆಂಬರ್‌ 6 ರಂದು ಬೆಳಗಾವಿಗೆ ಹೋಗಿಯೇ ಹೋಗುತ್ತೇವೆ: ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲ

ಮುಂಬೈ: ಡಿಸೆಂಬರ್ 6 ರಂದು ನಾವು ಬೆಳಗಾವಿಗೆ ಹೋಗಿಯೇ ಹೋಗುತ್ತೇವೆ ಎಂದು ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ ಹೇಳಿದ್ದಾರೆ.
ಕರ್ನಾಟಕಕ್ಕೆ (Karnataka) ಭೇಟಿ ನೀಡದಂತೆ ಸಂದೇಶ ರವಾನಿಸಿದ್ದೇವೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದಅವರು, ಡಿಸೆಂಬರ್ 6 ರಂದು ನಾವು ಬೆಳಗಾವಿಗೆ ಹೋಗಿಯೇ ಹೋಗುತ್ತೇವೆ. ನನಗೆ ಮುಖ್ಯಮಂತ್ರೊ ಬೊಮ್ಮಾಯಿ ಅವರ ಯಾವುದೇ ಫ್ಯಾಕ್ಸ್ ಆಗಲಿ, ಪತ್ರವಾಗಲಿ ತಲುಪಿಲ್ಲ. ನಾನು ಡಿಸೆಂಬರ್ 3 ರಂದು ಬೆಳಗಾವಿಗೆ ಹೋಗಬೇಕಿತ್ತು. ಆದರೆ ಡಿಸೆಂಬರ್ 6 ರಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನ ಇರುವುದರಿಂದ ಅಂದು ಬೆಳಗಾವಿಯಲ್ಲಿ ಹಲವು ಕಾರ್ಯಕ್ರಮಗಳು ಇರುತ್ತವೆ. ಹೀಗಾಗಿ ನನಗೆ ಡಿಸೆಂಬರ್‌ 6ರಂದು ಆಗಮಿಸುವಂತೆ ವಿನಂತಿಸಿದ್ದಾರೆ. ಹೀಗಾಗಿ ನಾನು ಡಿಸೆಂಬರ್‌ 6ರಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೇ ಡಿ.6ರಂದು ಗಡಿ ಹೋರಾಟದಲ್ಲಿ ಮೃತಪಟ್ಟ ಹುತಾತ್ಮರ ನಿವಾಸಕ್ಕೆ ಭೇಟಿ ನೀಡುವ ಕಾರ್ಯಕ್ರಮವೂ ಇದೆ. ಅಂಬೇಡ್ಕರ್ ಉದ್ಯಾನವನದಲ್ಲಿರುವ ಡಾ. ಅಂಬೇಡ್ಕರ ಅವರ ಪ್ರತಿಮೆಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವೂ ಇದೆ ಎಂದರು.
ನಾವು ಯಾವುದೇ ಸಂಘರ್ಷ ಮಾಡಲು ಬರುತ್ತಿಲ್ಲ. 865 ಮರಾಠಿ ಭಾಷಿಕ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ಏನು ಸೌಲಭ್ಯ ನೀಡಬಹುದು ಎಂಬ ಬಗ್ಗೆ ಚರ್ಚಿಸಲು ತೆರಳುತ್ತಿದ್ದೇನೆ ಎಂದು ನಾನು ಕರ್ನಾಟಕ ಸರ್ಕಾರಕ್ಕೆ ಹೇಳಬಯಸುತ್ತೇನೆ. 865 ಮರಾಠಿ ಭಾಷಿಕ ಹಳ್ಳಿಗಳಿಗೆ ಮಹಾರಾಷ್ಟ್ರದಿಂದಲೂ ನಾವು ಸೌಲಭ್ಯ ನೀಡುತ್ತೇವೆ. ಯಾವುದೇ ನಿಷೇಧ ಹೇರಿದರೂ ನಾನು ಬೆಳಗಾವಿಗೆ ಬಂದೇ ಬರುತ್ತೇನೆ. ನಾವು ಎಚ್ಚರಿಕೆ ನೀಡಲು ಹೋಗುತ್ತಿದ್ದೇವೆ ಎಂದು ಅವರಿಗೆ ಅನಿಸುತ್ತಿದೆ. ಆದರೆ ನಾವು ಸಮನ್ವಯದಿಂದ ಜನರ ಮನಸ್ಥಿತಿ ತಿಳಿದು ಅವರಿಗೆ ಮಹಾರಾಷ್ಟ್ರ ಸರ್ಕಾರದ ನಿಲುವು ತಿಳಿಸಲು ತೆರಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ದರ್ಶನ, ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement