ʼಬಿಜೆಪಿಗರೇ ನಾನೂ ರೌಡಿ, ನಂಗೂ ಪಕ್ಷದಲ್ಲಿ ಸ್ಥಾನ ಕೊಡಿ’ ಎಂದು ಬೋರ್ಡ್​ ಹಿಡಿದು ನಿಂತ ರೌಡಿ ಶೀಟರ್​ ಈಗ ಪೊಲೀಸ್​ ಅತಿಥಿ

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರೌಡಿ ಶೀಟರ್​ ಪಾಲಿಟಿಕ್ಸ್ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಮಧ್ಯೆ ನಗರದಲ್ಲಿ ವ್ಯಕ್ತಿಯೊಬ್ಬ ‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿಕೊಳ್ಳಿ’ ಎಂದು ಬೋರ್ಡ್​ ಹಿಡಿದು ನಿಂತುಕೊಂಡು ಎಲ್ಲರ ಗಮನ ಸೆಳೆದಿದ್ದಾನೆ. ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಮಂಜು ಅಲಿಯಾಸ್ ಪಾನಿಪುರಿ ಮಂಜು ಎಂಬವರು ‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ’ ಎಂದು ಬೋರ್ಡ್​ ಹಿಡಿದು ಪ್ರದರ್ಶನ ಮಾಡಿದ್ದಾನೆ, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಈತ ರೌಡಿ ಶೀಟರ್ ಆಗಿರುವ ಪಾನಿಪುರಿ ಮಂಜನನ್ನು ಕೆಆರ್.ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾನಿಪುರಿ ಮಂಜು, ಮೈಸೂರಿನ ಗಣೇಶ ನಗರ ನಿವಾಸಿ. ಈತ 2013ರಲ್ಲಿ ಪೊಲೀಸರು ರೌಡಿ ಶೀಟರ್ ತೆರೆದಿದ್ದರು. ಈಗ ಮಂಜು ಮೇಲೆ ಉದಯಗಿರಿ ಪೊಲೀಸರು ರೌಡಿ ಶೀಟರ್ ತೆರೆದಿದ್ದು ಹೆಚ್ಚಿನ‌ ವಿಚಾರಣೆಗಾಗಿ ಉದಯಗಿರಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಬಿಜೆಪಿ ಜೊತೆ ಕುಖ್ಯಾತ ರೌಡಿ ಶೀಟರ್‌ ಸೈಲೆಂಟ್‌ ಸುನೀಲ, ವಿಲ್ಸನ್‌ ಗಾರ್ಡನ್‌ ನಾಗ, ಬೆತ್ತನಗರೆ ಶಂಕರ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದರ ಬಗ್ಗೆ ಆರೋಪ-ಪ್ರತ್ಯಾರೋಗಳು ನಡೆದಿತ್ತು. ಅಲ್ಲದೇ ಮಂಡ್ಯದ ರೌಡಿ ಶೀಟರ್ ಫೈಟರ್ ರವಿ ಬಿಜೆಪಿಗೆ ಸೇರ್ಪಡೆಯಾಗಿದ್ದರ ಬಗ್ಗೆ ಚರ್ಚೆಯಾಗಿತ್ತು. ಈಗ ಮಂಜು ಅಲಿಯಾಸ್ ಪಾನಿಪುರಿ ಮಂಜು ಎಂಬಾತ ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಬಳಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement