ಹೊನ್ನಾವರ : ಮನೆಯ ಬಾಗಿಲ ಮುಂದೆಯೇ ಪ್ರತ್ಯಕ್ಷವಾದ ಚಿರತೆ..!

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗೊಳಿಬೈಲ್ ಸಮೀಪದ ಮನೆಯೊಂದರ ಅಂಗಳಕ್ಕೆ ಶನಿವಾರ ನಸುಕಿನ ಜಾವ ಚಿರತೆಯೊಂದು ಮನೆಯ ಅಂಗಳಕ್ಕೇ ಬಂದಿದೆ.
ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಹಿಡಿಯಲು ಹೊಂಚು ಹಾಕಿದ್ದ ಚಿರತೆ ದಾಳಿ ಮಾಡಿದ್ದು ಆದರೆ ಅದು ವಿಫಲವಾಗಿದೆ.
ಗಣಪು ಪಿ. ಹೆಗಡೆ ಎಂಬವರ ಮನೆಯ ಅಂಗಳಕ್ಕೆ ಬಂದಿದ್ದು, ಚಿರತೆಯ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಳಗಿನ ಜಾವ 4:50ರ ಸುಮಾರಿಗೆ ಚಿರತೆ ಬಂದಿದೆ, ಆಗ ನಾಯಿ ಒಂದೇ ಸಮನೆ ಬೊಗಳತೊಡಗಿದೆ. ಮನೆಯವರು ಎಚ್ಚರಗೊಂಡು ಮನೆಯವರು ಲೈಟ್ ಆನ್ ಮಾಡಿ ಬಾಗಿಲು ತೆರೆಯುತ್ತಿದ್ದಂತೆ ಚಿರತೆ ಅಲ್ಲಿಂದ ಪರಾರಿಯಾಗಿದೆ.
ಹೊಸಾಕುಳಿ ಗ್ರಾ.ಪಂ. ಉಪಾಧ್ಯಕ್ಷ ಕಿರಣ ಹೆಗಡೆ, ಸಾಲ್ಕೋಡ ಗ್ರಾ.ಪಂ. ಪಿಡಿಒ ಈರಪ್ಪ ಲಂಬಾಣಿ, ಸಿ.ಪಿ.ಐ ಶ್ರೀಧರ ಎಸ್.ಆರ್. ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ಕಾಟ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement